ಜ. ೦೫ ರಿಂದ ಬೀದರ್‌ನಲ್ಲಿ ಸೇನಾ ಭರ್ತಿ ರ್‍ಯಾಲಿ.

ಕೊಪ್ಪಳ
ಡಿ. 28 (ಕ ವಾ) ಬೆಳಗಾವಿಯ ಸೇನಾ ನೇಮಕಾತಿ ವಲಯದಿಂದ ಭಾರತೀಯ ಸೇನೆಯ
ವಿವಿಧ ಹುದ್ದೆಗಳ ಭರ್ತಿಗಾಗಿ ಜ. ೦೫ ರಿಂದ ಬೀದರ್‌ನ ನೆಹರೂ ಕ್ರೀಡಾಂಗಣದಲ್ಲಿ ನೇಮಕಾತಿ
ರ್‍ಯಾಲಿ ನಡೆಯಲಿದೆ.
     ಸಿಪಾಯಿ ಕ್ಲಾರ್ಕ್, ಸಿಪಾಯಿ ಎಸ್‌ಕೆಟಿ, ಸಿಪಾಯಿ
ಜನರಲ್ ಡ್ಯೂಟಿ, ಸಿಪಾಯಿ ಟೆಕ್ನಿಕಲ್, ಸಿಪಾಯಿ ಟ್ರೇಡ್ಸ್‌ಮನ್ ಹಾಗೂ ಸಿಪಾಯಿ ನರ್ಸಿಂಗ್
ಸಹಾಯಕರ ಹುದ್ದೆಗಳಿಗೆ ನೇಮಕಾತಿ ರ್‍ಯಾಲಿ ನಡೆಯಲಿದೆ.  ಕೊಪ್ಪಳ ಜಿಲ್ಲೆಯ
ಅಭ್ಯರ್ಥಿಗಳು ಇದರಲ್ಲಿ ಭಾಗವಹಿಸಬಹುದಾಗಿದೆ.  ಈ ಸೇನಾ ಭರ್ತಿ ರ್‍ಯಾಲಿಗೆ ಕಳೆದ
ನವೆಂಬರ್ ೦೭ ರಿಂದ ಡಿಸೆಂಬರ್ ೨೨ ರವರೆಗೆ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಿದ
ಅಭ್ಯರ್ಥಿಗಳು ಮಾತ್ರ ಪಾಲ್ಗೊಳ್ಳಬಹುದಾಗಿದೆ.  ಹೆಚ್ಚಿನ ಮಾಹಿತಿಗೆ ಉಪನಿರ್ದೇಶಕರು,
ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬಾಗಲಕೋಟ, ದೂರವಾಣಿ ಸಂ; ೦೮೩೫೪-೨೩೫೪೩೪
ಕ್ಕೆ ಸಂಪರ್ಕಿಸಬಹುದು.

Related posts

Leave a Comment