ಕನ್ನಡ ಸಂಘಟನೆಗಳು ಚಲನಶೀಲವಾಗಬೇಕು -ದುರ್ಗಾದಾಸ.

ಕೊಪ್ಪಳ, ಡಿ. ೨೨ ಸಾಹಿತ್ಯ ಕ್ಷೇತ್ರ ಸ್ಥಿತಿವಂತರ ಕೈಯಲ್ಲಿ ಸಿಕ್ಕಿಕೊಂಡಿದೆ. ಸಾಹಿತಿಗಳು, ಬಡವರ, ಶೋಷಣೆಗೆ ಒಳಗಾದವರ ಪಾಲಿಗೆ ಹೋಗಬೇಕು. ಕನ್ನಡ ಸಂಘಟನೆಗಳು ಚಲನಶೀಲವಾಗಬೇಕು ಎಂದು ಡಾ. ಆರ್. ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದ ಪ್ರಾಧ್ಯಪಕ ಡಾ. ಕೆ. ಆರ್. ದುರ್ಗಾದಾಸ್ ಅವರು ಹೇಳಿದ್ದಾರೆ.  ನಗರದ ಡಾ. ಜ ಚ ನಿ ಸಭಾಭವನದಲ್ಲಿ ರಾಜ್ಯದ ಮೊದಲ ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘ ಉದ್ಘಾಟಿಸಿ ಮಾತನಾಡಿದರು. ಪ್ರಸಕ್ತ ದಿನಗಳಲ್ಲಿ ಸಾಹಿತ್ಯ, ರಾಜಕೀಯ, ಸಾರ್ವಜನಿಕ ಕ್ಷೇತ್ರಗಳಲ್ಲಿ ಸಾಕಷ್ಟು ಬಿಕ್ಕಟ್ಟು ಇದೆ. ಲೇಖಕರ ಕೃತಿಗಳನ್ನು ಹೊರತರಲು ಸೂಕ್ತ ವೇದಿಕೆ ಅವಶ್ಯವಿದೆ. ಸಂಘ, ಸಂಸ್ಥೆಗಳು ಈಗಾಗಲೇ ಸಾಕಷ್ಟು ಹುಟ್ಟಿಕೊಂಡು ಅಸ್ತಿತ್ವ ಕಳೆದುಕೊಂಡಿವೆ. ಕನ್ನಡ ಸಂಘಗಳು ಚಲನಶೀಲವಾಗಬೇಕು. ಸಾಹಿತ್ಯ ಎನ್ನುವುದು ವಿಸಿಷ್ಟವಾದ ಮಾಧ್ಯಮ. ಇದು ಸ್ಥಿತಿವಂತರ ಕೈಗೊಂಬೆಯಾಗಿಲ್ಲ. ಇದೊಂದು ಸಂಪನ್ಮೂಲ ಭರಿತ ಕ್ಷೇತ್ರ. ಈ ನಿಟ್ಟಿನಲ್ಲಿ ಇದನ್ನು ತನ್ನದೇ ಶೈಲಿಯಲ್ಲಿ ಎಲ್ಲರೂ ಒಗ್ಗೂಡಿಸಿಕೊಂಡು ಮಂಚೂಣಿಗೆ ತರಬೇಕಾದ ಅವಶ್ಯಕತೆ ಇದೆ ಎಂದರು. ಪ್ರತಿಯೊಂದು ಸಂಘ ಆರಂಭದಲ್ಲಿ ಹುಟ್ಟಿ ಅತ್ಯಲ್ಪ ಕಾಲದಲ್ಲಿ ಯಶಸ್ಸು ಕಾಣದೇ ಕೊನೆಗೊಳ್ಳುತ್ತದೆ ಎಂಬ ಮಾತಿದೆ. ಅದಕ್ಕೆ ಜಾತಿ ಎಂಬ ತೊಡರು ಅಂಟಿಕೊಂಡಿರುತ್ತದೆ. ಒಂದು ಸಂಘಟನೆ ಬೆಳೆಯ ಬೇಕಾದರೆ ಅಲ್ಲಿ ಜಾತಿಯ ಪರಂಪರೆ ಇರಬಾರದು. ಅಭಿವ್ಯಕ್ತಿ ಸ್ವಾತಂತ್ರ್ಯ ಗೌರವಿಸುವಂತಾಗಬೇಕು. ಸದ್ಯ ಜಾರಿಗೆ ಬಂದಿರುವ ತಿರುಳ್ಗಡ ಸಾಹಿತಿಗಳ ಸಹಕಾರ ಸಂಘ ಮಾಡಬೇಕಾದ ಮುಖ್ಯ ಕೆಲಸವೆಂದರೆ ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಏನಾದರೂ ರಚನಾತ್ಮಕ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಡಾ. ದುಗಾದಾಸ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.     ಈ ಸಂದರ್ಭದಲ್ಲಿ ಬೀದರಿನ ಪ್ರೂ. ಸೂಗಯ್ಯ ಹಿರೇಮಠ ಸಂಪಾಕತ್ವದಲ್ಲಿ ಹೊರಬಂದ’ಹೈದರಾಬಾ ಕರ್ನಾಟಕ ಸಂಗೀತ ಪರಂಪರೆ’ ಎಂಬ ಕೃತಿಯನ್ನು  ಸಾಹಿತಿ ಎ. ಎಂ. ಮದರಿ
ಬಿಡುಗಡೆಗೊಳಿಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಹಕಾರಿ ಧುರೀಣ
ರಮೇಶ ವೈದ್ಯ ಅವರು ಮಾತನಾಡಿ, ಸಂಘದ ಬೆಳವಣಿಗೆಗೆ ಎಲ್ಲರೂ ಒಗ್ಗಟ್ಟಾಗಿ ಸಹಕರಿಸಬೇಕು
ಎಂದು ಕರೆ ನೀಡಿದರು. ನಿರ್ದೇಶಕ ಮಂಡಳಿಯ ಪರವಾಗಿ ಡಾ. ಶರಣಬಸಪ್ಪ ಕೋಲ್ಕಾರ ಅವರು
ಅಭಿಪ್ರಾಯ ಮಂಡಿಸಿದರು.  ಸಂಘದ ಉಪಾಧ್ಯಕ್ಷ ಬಸವರಾಜ ಆಕಳವಾಡಿ ಪ್ರಾಸ್ಥಾವಿಕವಾಗಿ
ಮಾತನಾಡಿ ಸಂಘದ ಧ್ಯೇಯೋದ್ದೇಶಗಳನ್ನು ವಿವರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ
ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಅವರು ವಹಿಸಿದ್ದರು.ವೇದಿಕೆಯ ಮೇಲೆ ಡಾ.
ಪಾರ್ವತಿ ಪೂಜಾರ ಉಪಸ್ಥಿತರಿದ್ದರು. ಮುನಿಯಪ್ಪ ಹುಬ್ಬಳ್ಳಿ ಅವರು ಸ್ವಾಗತಿಸಿದರು. ಸಂಘದ
ಗೌರವ ಕಾರ್ಯದರ್ಶಿ ವೈ. ಬಿ. ಜೂಡಿ ವಂದಿಸಿದರು. ಶಿಕ್ಷಕ ಮಹೇಶ ಬಳ್ಳಾರಿ
ನಿರೂಪಿಸಿದರು. ಕು. ಶಕುಂತಲಾ ಬೆನ್ನಾಳ ನಾಡು ನುಡಿ ಗೀತೆ ಹಾಡಿದರು.
Please follow and like us:
error