You are here
Home > Koppal News > ಡಿ.೦೪ ರಂದು ಗಿಣಗೇರಿಯಲ್ಲಿ ರಾಸಾಯನಿಕ ದುರಂತ ನಿವಾರಣೆ ದಿನ

ಡಿ.೦೪ ರಂದು ಗಿಣಗೇರಿಯಲ್ಲಿ ರಾಸಾಯನಿಕ ದುರಂತ ನಿವಾರಣೆ ದಿನ

 ಕಾರ್ಖಾನೆ, ಬಾಯ್ಲರ್, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯು ವಿವಿಧ ಕೈಗಾರಿಕೆಗಳ ಸಹಯೋಗದೊಂದಿಗೆ ರಾಸಾಯನಿಕ ದುರಂತ ನಿವಾರಣೆ ದಿನವನ್ನು ಡಿ. ೦೪ ರಂದು ಗಿಣಿಗೇರಾದ ಮೆ: ಕಲ್ಯಾಣಿ ಸ್ಟೀಲ್ಸ್ ಲಿ. ಕಾರ್ಖಾನೆ ಆವರಣದಲ್ಲಿ ಹಮ್ಮಿಕೊಂಡಿದೆ.
  ಭೂಪಾಲ್ ದುರಂತದ ಹಿನ್ನೆಲೆಯಲ್ಲಿ ಪ್ರತಿವರ್ಷವೂ ಕೈಗಾರಿಕಾ ಕ್ಷೇತ್ರದಲ್ಲಿ ಡಿ.೦೪ ರಂದು ರಾಸಾಯನಿಕ ದುರಂತ ನಿವಾರಣಾ ದಿನ (ಕೆಮಿಕಲ್ ಡಿಸಾಸ್ಟರ್ ಪ್ರಿವೆನ್ಷನ್ ಡೇ) ಎಂದು ಆಚರಿಸಲಾಗುತ್ತಿದೆ.  ಈ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ ೧೧ ಗಂಟೆಗೆ ಗಿಣಗೇರಿಯ ಕಲ್ಯಾಣಿ ಸ್ಟೀಲ್ಸ್ ಲಿಮಿಟೆಡ್ ಕಾರ್ಖಾನೆಯ ಆವರಣದಲ್ಲಿ ಸಭೆ ಹಾಗೂ ಆನ್-ಸೈಟ್ ಎಮರ್ಜನ್ಸಿ ಪ್ಲಾನ್ ಅಣಕು ಪ್ರದರ್ಶನವನ್ನು ಏರ್ಪಡಿಸಲಾಗಿದೆ.  ಜಿಲ್ಲಾಧಿಕಾರಿ ಆರ್.ಆರ್.ಜನ್ನು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ಟಿ.ಡಿ.ಪವಾರ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿರುವರು ಎಂದು   ಬಳ್ಳಾರಿ ವಿಭಾಗದ ಕಾರ್ಖಾನೆಗಳ ಉಪನಿರ್ದೇಶಕರು  ತಿಳಿಸಿದ್ದಾರೆ.

Leave a Reply

Top