ಕೊಪ್ಪಳ : ಹೆದ್ದಾರಿ ದರೋಡೆಕೋರರ ಬಂಧನ

ಕೊಪ್ಪಳ :   ಇತ್ತೀಚಿಗೆ ಹಲಗೇರಿ ಗ್ರಾಮದ ಹತ್ತಿರ ಎನ್ ಎಚ್ ೬೩ರಲ್ಲಿ ನಡೆದ ದರೋಡೆ ಪ್ರಕರಣಗಳನ್ನು ಕುಕನೂರು ಪೋಲಿಸರು ಬೇಧಿಸಿದ್ದು ಆರೋಪಿಗಳನ್ನು ಬಂಧಿಸಿದ್ದಾರೆ. ಬನ್ನಿಕೊಪ್ಪ ಗ್ರಾಮದ ಬಳಿ ಲಾರಿ ಚಾಲಕರು ಮತ್ತು ಕ್ಲೀನರ್‌ಗಳನ್ನು  ಚೂರಿಯಿಂದ ಹಲ್ಲೆ ಮಾಡಿದ ಅವರಿಂದ ಹಣ ಮತ್ತು ಮೊಬೈಲ್ ಫೋನ್ ಗಳನ್ನು ದೋಚಿ ಪರಾರಿಯಾಗಿದ್ದರು.  ಈ ಸಂಬಂಧ ಕುಕನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.  ಕೊಪ್ಪಳ ಡಿಎಸ್ ಪಿಯವರ ಮಾರ್ಗದರ್ಶನದಲ್ಲಿ ಯಲಬುರ‍್ಗಾ ಸಿಪಿಐ ನಾಗರಾಜ ಕಮ್ಮಾರ , ಪಿಎಸ್ ಐ ವಿಶ್ವನಾಥ  ಹಿರೇಗೌಡರ ನೇತ್ವದಲ್ಲಿ ಪೋಲಿಸರ ತಂಡ ರಚಿಸಲಾಗಿತ್ತು.  ತನಿಖೆ ಮುಂದುವರೆಸಿ ಆರೋಪಿಗಳನ್ನು ಭಾನಾಪೂರ ರೇಲ್ವೆ ಸ್ಟೇಷನ್ ನಲ್ಲಿ ಬಂಧಿ.ಸಿದ್ದಾರೆ.  ಬಂಧಿತರನ್ನು  ಕುಮಾರ ನಾಯಕ, ಶಿವು ಬೊಸ್ಲೆ, ಮಂಜಾ ಬೋಸ್ಲೆ ಎನ್ನಲಾಗಿದೆ. ದುರ್ಗಪ್ಪ ಬೋಸ್ಲೆ ಎನ್ನುವ ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದಾನೆ. ಆರೋಪಿಗಳಿಂದ ೨ ಮೊಬೈಲ್ ಫೋನ್ ಗಳು, ನಗರದು ೨೧೫೦ ರೂ ಹಾಗೂ ಕೃತ್ಯಕ್ಕೆ ಬಳಸಿದ ೧೧ ಚಾಕು , ಚೂರಿಗಳನ್ನು ವಶಪಡಿಸಿಕೊಳ್ಳಲಾಗಿದೆ. 
Please follow and like us:
error

Related posts

Leave a Comment