ಮೌಲ್ಯಗಳ ಬೆಳವಣಿಗೆಗೆ ಒತ್ತು ನೀಡಿ.

ಕೊಪ್ಪಳ-13- ಮೌಲ್ಯಗಳ ಬೆಳವಣಿಗೆಗೆ ಹೆಚ್ಚು ಒತ್ತು ನೀಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ ಪೂಜಾರ ಹೇಳಿದರು. ನಗರದ ಕಾವ್ಯಾನಂದ ಉದ್ಯಾನವನದಲ್ಲಿ ವೈಷ್ಣವಿ ಮಹಿಳಾ,ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ದಿ ಸಂಸ್ಥೆ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ  ಶನಿವಾರ ಸಂಜೆ ಹಮ್ಮಿಕೊಂಡಿದ್ದ  ಶ್ರಾವಣ ಸಂಗೀತ ಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ,ಪ್ರಸ್ತುತ್ತ ದಿನಗಳಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಏರ್ಪಟ್ಟಿದ್ದು,ಸ್ಪರ್ಧೇಗಳಿಗೆ ತಕ್ಕಂತೆ ಶಿಕ್ಷಣವನ್ನು ನೀಡಲಾಗುತ್ತಿದೆ.ಅದರಂತೆ ಮಕ್ಕಳು ಕೂಡಾ ಸ್ಪರ್ಧೇಗಳಿಗೆ ತಕ್ಕಂತೆ ತಯಾರಾಗುತ್ತಿದ್ದಾರೆ.ಆದರೆ ಕೇವಲ ಕೆಲಸವನ್ನು ಪಡೆದುಕೊಳ್ಳಬೇಕು ಅಥವಾ ಸ್ಪರ್ಧೇಯನ್ನು ಎಂಬ ಉದ್ದೇಶಕ್ಕೆ ಮಾತ್ರ ಶಿಕ್ಷಣ ನೀಡದೆ ಮಾನವೀಯ ಮೌಲ್ಯಗಳನ್ನು ಬೆಳಸುವಂತ ಶಿಕ್ಷಣ ನೀಡಬೇಕಾಗಿದೆ.ಸಮಾಜದಲ್ಲಿ ಇಂದು ಜರುಗುತ್ತಿರುವ ಕೃತ್ಯಗಳಿಗೆ ಮಾನವೀಯ ಮಾಲ್ಯಗಳ ಕೊರತೆಯೇ ಮುಖ್ಯ ಕಾರಣಣವಾಗಿದೆ.ಶಿಕ್ಷಕರು ಹಾಗೂ ಪಾಲಕರು ಮಕ್ಕಳಿಗೆ ಮಾನವೀಯ ಮೌಲ್ಯಗಳ ಬೆಳವಣಿಗೆಗೆ ಹೆಚ್ಚು ಒತ್ತು ನೀಡಬೇಕು ಎಂದು ಹೇಳಿದರು.
 ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ,ಸಂಗೀತದಂತಹ ಕಾರ್ಯಕ್ರಗಳಿಂದ ಮನಸ್ಸಿಗೆ ನೆಮ್ಮದಿ ಲಭಿಸುವುದರ ಜೊತೆಗೆ ಮನಸ್ಸಿಗೆ ಸಂತೋಷವನ್ನು ಉಂಟು ಮಾಡುತ್ತದೆ.ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ತಾಯಂದಿರ ಪಾತ್ರ ಬಹಳ ಮಹತ್ವದಾಗಿದೆ.ತಾಯಂದಿರು ದೂರದರ್ಶನದಲ್ಲಿ ಪ್ರಸಾರವಾಗುವ ಧಾರವಾಯಿಗಳಿಗೆ ನೀಡಲಾಗುವ ಸಮಯವನ್ನು ಮಕ್ಕಳ ಶೈಕ್ಷಣಿಕ ಪ್ರಗತಿಗೆ ನೀಡಿದರೆ ತಮ್ಮ ಮಕ್ಕಳು ಕೂಡಾ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ತಯಾರಾಗುತ್ತಾನೆ.ದೂರದರ್ಶನದಿಂದ ಇಂದು ಕುಟುಂಬದಲ್ಲಿ ಸಂಬಂಧಗಳ ನಡುವೆ ಅಂತರ ಕಡಿಮೆಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು  ನಗರಸಭೆಯ ಅಧ್ಯಕ್ಷರಾದ ಬಸಮ್ಮ ರಾಮಣ್ಣ ಹಳ್ಳಿಗುಡಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ನಿವೃತ್ತ ಉಪ ತಹಸಿಲ್ದಾರ ರಾಮಣ್ಣ ವೇಮಲಿ,ನಗರಸಭೆಯ ದಂಡಾಧಿಕಾರಿಗಳಾದ ಮಲ್ಲಿಕಾರ್ಜುನ ಜಾನೇಕಲ್ಲ,ನೀಲಮ್ಮ ಬಹದ್ದೂರಬಂಡಿ,ಕಲಾವಿದರಾದ ಶಿವಯ್ಯಾ ಗಂಧದಮಠ,ಶ್ಯಾಮಣ್ಣ ಮಡಿವಾಳರ,ಸುರೇಖಾ ಕೊಪ್ಪಳ,ಬಲರಾಮ ಪೂಜಾರ ಭಾಗವಹಿಸಿದ್ದರು. ಸಂಸ್ಥೆಯ ಅಧ್ಯಕ್ಷರಾದ ರೇಣುಕಾ ಪೂಜಾರ ಸ್ವಾಗತಿಸಿ,ಸುರೇಖಾ ಪೂಜಾರ ವಂದಿಸಿದರು.

Please follow and like us:
error