You are here
Home > Koppal News > ಶಾಲಾ ಮಕ್ಕಳಿಗೆ ಶನಿವಾರದ ಮುಂಜಾನೆ ಉಪಹಾರಕ್ಕಾಗಿ ವಿಶೇಷವಾಗಿ ಇಡ್ಲಿ ಸಾಂಬಾರ

ಶಾಲಾ ಮಕ್ಕಳಿಗೆ ಶನಿವಾರದ ಮುಂಜಾನೆ ಉಪಹಾರಕ್ಕಾಗಿ ವಿಶೇಷವಾಗಿ ಇಡ್ಲಿ ಸಾಂಬಾರ

ದಿ ೩೧  ರಂದು ಕೊಪ್ಪಳದ ಕುವೆಂಪು ನಗರ (ಆಶ್ರಯ ಕಾಲೋನಿ) ದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ  ಅಕ್ಷರ ದಾಸೋಹ ಯೋಜನೆ ಅಡಿಯಲ್ಲಿ ಶಾಲಾ ಮಕ್ಕಳಿಗೆ ಶನಿವಾರದ ಮುಂಜಾನೆ ಉಪಹಾರಕ್ಕಾಗಿ ವಿಶೇಷವಾಗಿ ಇಡ್ಲಿ ಸಾಂಬಾರನ್ನು ನೀಡಲಾಯಿತು. ಇದು ಕರ್ನಾಟಕದಲ್ಲಿಯೇ ಪ್ರಥಮ ಪ್ರಯತ್ನವಾಗಿದ್ದು ಇರುತ್ತದೆ. ಈ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಕ್ಕಳ ಜೋತೆ ಉಪಹಾರ ಸೇವಿಸಿ ಮಾತನಾಡಿದ ನಗರ ಸಭೆಯ ಕ್ರೀಯಾಶೀಲ ಅಧ್ಯಕ್ಷರು (ಪ್ರಬಾರಿ) ಹಾಗೂ ನಮ್ಮ ಶಾಲೆಯ ಇರುವಂತಹ ವಾರ್ಡಿನ ಸದಸ್ಯರಾದ  ಅಮ್ಜದ ಪಟೇಲ್ ಮಾತನಾಡಿ ವಾಹನ ಚಾಲನೆಗೆ ಇಂಧನ ಎಷ್ಟು ಮುಖ್ಯವೋ ವಿದ್ಯಾರ್ಥಿಗಳಲ್ಲಿ ಆಸಕ್ತಿದಾಯಕ ಕಲಿಕೆ ಉಂಟಾಗಲು ಸಮತೋಲನ ಆಹಾರ ಜೊತೆಗೆ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಇದರ ಜೊತೆಗೆ ಉತ್ತಮ ಶಿಕ್ಷಕರಿಂದ ಭೋಧನೆ ಅಷ್ಟೆ ಮುಖ್ಯ ಈ ದೇಶೆಯಲ್ಲಿ ಶಾಲೆಯ ಈ ಮಹತ್ವಾಕಾಂಕ್ಷೇಯ ಕಾರ್ಯ ಪ್ರಶಂಸನೀಯ ಎಂದು ಈ ಶಾಲೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುವುದರ ಜೊತೆಗೆ ಈ ಶಾಲೆಯು ನನ್ನದೆಂಬ ಭಾವನೆ ಮತ್ತು ನನ್ನ ಮಕ್ಕಳು ಕಲಿಯುವ ಶಾಲೆ ಎನ್ನುವ ಮನೋಭಾವನೆಯಿಂದ ಈ ಶಾಲೆಗೆ ಬಹುದಿನಗಳಿಂದ ಅವಶ್ಯವಿರುವ ಶಾಲಾ ಕಂಪೌಂಡನ್ನು ಮಾನ್ಯ ಕೊಪ್ಪಳ ಶಾಸಕರಲ್ಲಿ ಚರ್ಚಿಸಿ ಅವರ ಅನುದಾನದಲ್ಲಿ ಒದಗಿಸಿ ಕೊಡುವುದಾಗಿ ಭರವಸೆಯನ್ನು ಹೇಳಿದರು ಮುಂದುವರೆದು ಮಾತನಾಡಿದ ಅವರು ಕೊಪ್ಪಳ ತಾಲೂಕಿನಲ್ಲಿರುವ ಎಲ್ಲ ಸರಕಾರಿ ಶಾಲೆಗಳನ್ನು ಮೀರಿ ಈ ಶಾಲೆಯ ಶಿಕ್ಷಣ ಮತ್ತು ಉತ್ತಮ ಗುಣಮಟ್ಟದ ಭೋದಕ ಸಿಬ್ಬಂದಿಗಳನ್ನು ಹೊಂದಿದ್ದು ಇನ್ನು ಉತ್ತಮ ರೀತಿಯಲ್ಲಿ ಈ ಶಾಲೆಯು ಬೆಳೆಯಲಿ ಎಂದು ಹಾರೈಸಿದರು ಜೊತೆಗೆ ನನ್ನ ಅಧಿಕಾರದ ಅವಧಿಯಲ್ಲಿ ಈ ಶಾಲೆಗೆ ಇನ್ನು ಹೆಚ್ಚಿನ ರೀತಿಯಲ್ಲಿ ಎಲ್ಲಾ ಸಂದರ್ಭದಲ್ಲೂ ಜೊತೆಗೆ ಇರುತ್ತೇನೆ ಎಂದು ಹೇಳಿದರು.   
ಈ ಸಂದರ್ಭದಲ್ಲಿ ನಗರ ಸಭೆ ಸದಸ್ಯರಾದ ಮಹೇಶ ಭಜಂತ್ರಿ, ಮಾಜಿ ಆಶ್ರಯ ಸಮಿತಿಯ ಸದಸ್ಯರಾದ ಜಹೀರಅಲಿ ಹಾಗೂ ಇಡ್ಲಿ ಪಾತ್ರೆಯ ದಾನಿಗಳಾದ ಮಲ್ಲಿಕಾರ್ಜುನ ಪೂಜಾರ, ಬಿ.ಎಸ್.ಪಾಟೀಲ್, ಅಮರೇಶ ಸುಂಕದ ಮತ್ತು ಶಾಲೆಯ ಶಿಕ್ಷಕ ವೃಂದ ಹಾಗೂ ಪೂರ್ವ ವಲಯದ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳು ಹಾಜರಿದ್ದರು ಇದರ ಜೊತೆಗೆ ಬಂದಂತಹ ಎಲ್ಲ ಅತಿಥಿಗಳು ಶಾಲೆಯ ಸಣ್ಣ ಪುಟ್ಟ ಮಕ್ಕಳ ಜೊತೆ ಸಹ ಭೋಜನದಲ್ಲಿ ಪಾಲ್ಗೊಂಡಿದ್ದರಿಂದ ಮಕ್ಕಳಿಗೆ ಸಂತಸದ ಜೊತೆಗೆ ಶಿಕ್ಷಣದ ಕಡೆ ಆಸಕ್ತಿ ತೋರಲು ನಾಂದಿಯಾಯಿತು. 

Leave a Reply

Top