ರಾಜಕಾರಣಿಗಳು ಮತ್ತು ಸರಕಾರಿ ಅಧಿಕಾರಿಗಳ ಸಂಬಂಧಿಗಳಿಗೆ ಮಾತ್ರ ಸರಕಾರಿ ಯೋಜನೆಗಳು ತಲುಪುತ್ತಿವೆ

 – ರಾಕೇಶ ಕಾಂಬಳೇಕರ.
ಬೂದಗೂಂಪ ಗ್ರಾಮದಲ್ಲಿ ನೆಹರು ಯುವ ಕೇಂದ್ರ, ಕೊಪ್ಪಳ, ಪ್ರೇರಣಾ ಯುವತಿ ಗ್ರಾಮಿಣಾಭೀವೃದ್ಧಿ ಸಂಸ್ಥೆ(ರಿ) ಕೊಪ್ಪಳ, ಅಮರ ಜ್ಯೋತಿ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ,ಕೊಪ್ಪಳ, ವಂದೇಮಾತರಂ ಸೇವಾ ಸಂಘ(ರಿ)ಕೊಪ್ಪಳ ಮತ್ತು ಸ್ಥಳೀಯ ಸ್ವಾಮಿ ವಿವೇಕಾನಂದ ಯುವಕ ಸಂಘದ ಸಂಯುಕ್ತಾಶ್ರಯದಲ್ಲಿ ಬ್ಯೂಟೀಷಯನ್ ಮತ್ತು ಡಾಲ್ ಮೇಕಿಂಗ್ ತರಬೇತಿ ಶಿಬಿರವನ್ನು ಉದ್ಘಾಟಿಸಲಾಯಿತು. ಉದ್ಘಾಟನೆಯನ್ನು ಶ್ರೀಗಾದಿಲಿಂಗೇಶ್ವರ ತಾತನವರು ನೇರವೇರಿಸಿದರು. ಅಧ್ಯಕ್ಷತೆಯನ್ನು ಗ್ರಾಮಪಂಚಾಯತ್ ಸದಸ್ಯರಾದ  ಎ. ವಿ. ಗುರುರಾಜ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ವಂದೇಮಾತರಂ ಸೇವಾ ಸಂಘದ ಸಂಸ್ಥಾಪಕರಾದ ರಾಕೇಶ ಕಾಂಬ್ಳೇಕರ್‌ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ರಾಜಕಾರಣಿಗಳು ಮತ್ತು ಸರಕಾರಿ ಅಧಿಕಾರಿಗಳ ಸಂಬಂಧಿಗಳಿಗೆ ಮಾತ್ರ ಸರಕಾರಿ ಯೋಜನೆಗಳು ತಲುಪುತ್ತಿವೆ ವಿನಹ ಜನಸಾಮಾನ್ಯರಿಗೆ ತಲುಪುವುದು ಕಷ್ಟಕರ. ಇಂತಹ ಅನೇಕ ಯೋಜನೆಗಳನ್ನು ಸರಕಾರ ಮತ್ತು ಅರೆಸರಕಾರಿ ಸಂಸ್ಥೆಗಳು ಮಾಡುತ್ತಿರುವುದು, ವಿಶೇಷ ಮತ್ತು ಸ್ವಾಗತಾರ್ಹ, ಹಾಗೂ ಇಂತಹ ಯೋಜನೆಗಳನ್ನು ಜನಸಾಮಾನ್ಯರಾದ ನಾವು ಸದುಪಯೋಗ ಪಡೆದುಕೊಳ್ಳಬೇಕು  ಎಂದು ಹೇಳಿದರು. ಅಮರಜ್ಯೋತಿ ಸಂಸ್ಥೆಯ ಸಂಚಾಲಕರಾದ ಡಿ. ಕೆ. ಶರಣಪ್ಪನವರು ಸಂಸ್ಥೆಯ ಯೋಜನೆಗಳನ್ನು ತಿಳಿಸುತ್ತಾ ಯಾವುದೇ ರೀತಿಯ ಉಚಿತ ಕಾರ್ಯಕ್ರಮವೆಂದರೆ ಅದಕ್ಕೆ ಬೆಲೆ ನೀಡದೆ ಅದರ ದುರುಪಯೋಗವನ್ನು ಜನಸಾಮಾನ್ಯರು ಮಾಡುತ್ತಿರುವುದು ವಿಷಾದನೀಯ. ಇಂತಹ ಯೋಜನೆಗಳಿಂದ ಮಹಿಳೆಯರು ಸ್ವಾವಲಂಬನೆಯಾಗಿ ಬದುಕುವುದು ಸುಲಭ ಎಂದರು. ಹನುಮಂತಪ್ಪ ಹನ್ಮಂತಪ್ಪ ಹೊಳೆಯಾಚ, ಫಕೀರಪ್ಪ ಎಮ್ಮಿ, ದೇವಪ್ಪ ಮನ್ನಾಪುರ ಹಾಗೂ ಇನ್ನೀತರರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಸಂಘದ ಸದಸ್ಯರಾದ ಮುದಿಯಪ್ಪ ಡೋಲಿ, ಸ್ವಾಗತ ಭಾಷಣವನ್ನು ಕೆಂಚನಗೌಡ ಪಾಟೀಲ್, ವಂದನಾರ್ಪಣೆಯನ್ನು ಮಲ್ಲೇಶ ಗೊರೆಬಾಳ ನಡೆಸಿಕೊಟ್ಟರು.

Please follow and like us:
error