ದಲಿತರನ್ನು ಮುಖ್ಯವಾಹಿನಿಯಲ್ಲಿ ಗುರುತಿಸಬೇಕು-ಹಿರೇಮಠ

ಕೊಪ್ಪಳ, ಅ. ೩೧. ದಲಿತರನ್ನು ಸಮಾಜದ ಹಾಗೂ ರಾಜಕೀಯದ ಮುಖ್ಯವಾಹಿನಿಯಲ್ಲಿ ಗುರುತಿಸಬೇಕು ಕರ್ನಾಟಕ ಪ್ರದೇಶ ಕಾಂಗ್ರೇಸ್ ಕಿಸಾನ್ ಸೆಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದಲಿಂಗಯ್ಯ ಎಚ್. ಹಿರೇಮಠ ಹೇಳಿದರು.
ಅವರು ನಗರದಲ್ಲಿಂದು ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ಹಾಗೂ ವಿಶ್ವ ಎಜ್ಯುಕೇಶನಲ್ ಆಂಡ್ ವೆಲ್‌ಫೇರ್ ಅಕಾಡೆಮಿ ಆಶ್ರಯದಲ್ಲಿ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಮಾತನಾಡುತ್ತಿದ್ದರು.
ದಲಿತರು ಬಹುಸಂಖ್ಯಾತರಾಗಿದ್ದರೂ ಸಹ ಸಾಮಾಜಿಕ ನ್ಯಾಯದಲ್ಲಿ ಅವರಿಗೆ ಸಿಗಬೇಕಾದ ಪಾಲು ಸಿಗುತ್ತಿಲ್ಲ, ರಾಜಕೀಯದಲ್ಲಿ ೨೨ ರಷ್ಟು ಮೀಸಲಾತಿ ಹೊಂದಿರುವ ಸಮುದಾಯ ಜನಸಂಖ್ಯೆಯಲ್ಲಿ ಅರ್ಧಕ್ಕೂ ಹೆಚ್ಚಿದೆ, ರಾಜಕೀಯ ಪಕ್ಷಗಳು ಮತ್ತು ಸಮಾಜದ ಜನರು ಮೀಸಲಾತಿ ಇಲ್ಲದ ಸ್ಥಳಗಳಲ್ಲಿ ಅಷ್ಟಾಗಿ ಗುರುತಿಸುತ್ತಿಲ್ಲ ಎಂಬುದು ಖೇದನೀಯ ಸಂಗತಿ. ಮತಬ್ಯಾಂಕ್ ರಾಜಕೀಯ ಇಂದು ತಾಂಡವಾಡುತ್ತಿದೆ, ಶೋಷಿತರ ನಿಜವಾದ ಕಾಳಜಿ ಇರುವ ಜನ ನಮ್ಮ ನಾಯಕರಾಗಬೇಕು ಎಂದರು.
ಕಾರ್ಯಕ್ರಮ ಸಂಘಟಕ ಕರ್ನಾಟಕ ವಾಲ್ಮೀಕಿ ಸೇನೆ ರಾಜ್ಯ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಮಾತನಾಡಿ ಎಡ-ಬಲ ಎಂದು ನಮ್ಮನ್ನು ಒಡೆದು ಆಳುತ್ತಿದ್ದಾರೆ, ದಿನೇ ದಿನೇ ಹೊಸ ಹೊಸ ಜಾತಿಗಳನ್ನು ಎಷ್ಟಿ ಗುಂಪಿಗೆ ಸೇರಿಸಲಾಗುತ್ತಿದೆ, ಇದೂವರೆಗೆ ಶೋಷಿತರಲ್ಲದವರು ಇದ್ದ ಮೀಸಲಾತಿಯನ್ನೂ ಕಸಿದುಕೊಳ್ಳಲು, ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ನಿಂತಿದ್ದಾರೆ ಎಂದು ಬೇಸರವ್ಯಕ್ತಪಡಿಸಿದರು. ಕಾಂಗ್ರೇಸ್ ಮುಖಂಡರಾದ ಭರಮಪ್ಪ ಬೆಲ್ಲದ ಮತ್ತು ಬಿಜೆಪಿ ಮುಖಂಡರಾದ ಡಾ. ಜ್ಞಾನಸುಂದರ ರವರಿಗೆ ಕರ್ನಾಟಕಜ್ಯೋತಿ ರಾಜ್ಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಈರ್ವರು ದಲಿತರನ್ನು ಗುರುತಿಸುವದೇ ಅಪರೂಪದ ಸಂಗತಿ, ಅಂಥಹ ಸಂದರ್ಭದಲ್ಲಿ ತಮ್ಮನ್ನು ಪ್ರಶಸ್ತಿಯೊಂದಿಗೆ ಸನ್ಮಾನಿಸಿದ್ದು ಸಂತಸ ತಂದಿದೆ, ಜೀವನ ಪರ್ಯಂತ ಸಮಾಜವನ್ನು ಕಟ್ಟುವ ಕೆಲಸ ಮಾಡುತ್ತೇವೆ, ಸಮಾಜದ ಹಾಗೂ ಸನ್ಮಾನಿಸಿದ ಸಂಸ್ಥೆಗಳ ಋಣವನ್ನು ತೀರಿಸುತ್ತೇವೆ ಎಂದರು. ಈ ಸಂದರ್ಭದಲ್ಲಿ ವಿರೇಶ ಅಳ್ಳಳ್ಳಿ, ಬಸವರಾಜ, ಹನುಮಂತಪ್ಪ, ಆನಂದ ಗೊಂಡಬಾಳ ಅನೇಕ ಮುಖಂಡರು ಇದ್ದರು.
Please follow and like us:
error