‘ವಿಜ್ಞಾನ ಪ್ರತಿಭಾ ಪರೀಕ್ಷೆ’ ಪ್ರಶಸ್ತಿ ವಿತರಣೆ’

ಕೊಪ್ಪಳ;- ತಾಲ್ಲೂಕಿನ ಮುದ್ದಾಬಳ್ಳಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ವಿಜ್ಞಾನ ಬಳಗ ಸಂಘಟಿಸಿದ ಅಂತರಾಷ್ಟ್ರೀಯ ಮಟ್ಟದ ವಿಜ್ಞಾನ ಹಾಗೂ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ತೋರಿದ ಕ್ರಿಯಾಶೀಲತೆಗಾಗಿ ೨೦೧೫ರ ಬೆಳ್ಳಿಹಬ್ಬದ ಸಂಭ್ರಮಾಚರಣೆಯ ಸವಿನೆನಪಿಗಾಗಿ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಪ್ರಜ್ಞೆ ಪ್ರೇರೇಪಿಸಲು  ವಿದ್ಯಾರ್ಥಿಗಳಿಗೆ  ಪುಟಾಣಿ ವಿಜ್ಞಾನ [ಮಕ್ಕಳ ವಿಜ್ಞಾನ ಬಳಗ] ಸಂಸ್ಥೆ ಚಿತ್ರದುರ್ಗ ಈ ಸಂಸ್ಥೆಯು ಸಂಘಟಿಸಿದ  ವಿಜ್ಞಾನ ಪ್ರತಿಭಾ ಪರೀಕ್ಷೆ ಯಲ್ಲಿ ಶಾಲೆಯ ೨೨ ವಿದ್ಯಾರ್ಥಿಗಳು ಪಾಲ್ಗೊಂಡು ರಾಷ್ರ ಹಾಗೂ ರಾಜ್ಯ ಮಟ್ಟದಲ್ಲಿ  ಉತ್ತಮ  ಅಂಕಗಳಿಸಿ ೫ ವಿದ್ಯಾರ್ಥಿಗಳು ರಾಜ್ಯ, ಜಿಲ್ಲಾ, ಮಟ್ಟದಲ್ಲಿ ರ್‍ಯಾಂಕ್  
ಗಳಿಸಿದ್ದಾರೆ, ೧೭ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ
ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಣೆ ಸಮಾರಂಭ ನಡೆಯಿತು, ಸಮಾರಂಭದ  
ಅಧ್ಯಕ್ಷತೆಯನ್ನು,ಶಾಲೆಯಎಸ್,ಡಿ,ಎಮ್,ಸಿಅದ್ಯಕ್ಷರಾದ ರಾಮನಗೌಡ ಪೋಲೀಸ್ ಪಾಟೀಲ್ ಹಾಗೂ
ಮುಖ್ಯ ಅತಿಥಿ ಸ್ಥಾನವನ್ನು ಮುಖ್ಯೋಪಾಧ್ಯಾಯರಾದ ಚಂದ್ರಶೇಖರ ಹತ್ತಿಕಟಿಗಿ ವಹಿಸಿ
ಬಹುಮಾನ ವಿತರಿಸಿದರು, ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಾದ ಕವಿತಾ ಕಟ್ಟಿಮನಿ, ರೇಖಾ
ಕುಲಕರ್ಣಿ,ವೀರೇಂದ್ರ ಪತ್ತಾರ, ಇತರರು ಉಪಸ್ಥಿತರಿದ್ದರು,

Please follow and like us:
error