ಅ. ೨೭ ರಂದು ಹೈದರಾಬಾದ ಕರ್ನಾಟಕ ಉತ್ಸವ ಮತ್ತು ಯುವ ಸಾಹಿತ್ಯ ಸಮ್ಮೇಳನ.

ಕೊಪ್ಪಳ, ಸೆ. ೨೧ ಬರುವ ಅಕ್ಟೋಬರ್ ೨೭ ಮಂಗಳವಾರದಂದು ಕೊಪ್ಪಳ ಜಿಲ್ಲೆಯ ಹುಲಿಗೆಮ್ಮ ದೇವಿ ಪುಣ್ಯ ಕ್ಷೇತ್ರದಲ್ಲಿ ಹೈದರಾಬಾದ ಕರ್ನಾಟಕ ಉತ್ಸವ-೨೦೧೫ ಮತ್ತು ಯುವ ಸಾಹಿತ್ಯ ಸಮ್ಮೇಳನವನ್ನು ಹೈದರಾಬಾದ ಕರ್ನಾಟಕ ಸಾಂಸ್ಕೃತಿಕ ಕಲಾ ಕೇಂದ್ರ ಮತ್ತು ಹೈದರಾಬಾದ ಕರ್ನಾಟಕ ನಾಗರಿಕರ ವೇದಿಕೆ ಜಂಟಿಯಾಗಿ ಹಮ್ಮಿಕೊಳ್ಳಲಿವೆ.
    ಈ ಉತ್ಸವದಲ್ಲಿ ಹೈ ಕ ಕವಿ ಗೋಷ್ಠಿ, ಯುವ ಸಾಹಿತ್ಯ ಸಮ್ಮೇಳನ, ಎಲ್ಲಿಗೆ ಬಂತು ೩೭೧ ಕಲಮಿನ ಲಾಭಗಳು, ಯುವಕರಿಗೆ ನಿರುದ್ಯೋಗ ಸಮಸ್ಯೆ, ಹೈ.ಕ. ಪ್ರದೇಶದ ಲೇಖಕರ ಕೃತಿಗಳಿಗೆ ಸಾಹಿತ್ಯ ಪ್ರಶಸ್ತಿ ಮತ್ತು ರಂಗ ಸಾಂಸ್ಕೃತಿಕ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೈ. ಕ. ನಾಗರಿಕರ ವೇದಿಕೆಯ ಕೊಪ್ಪಳ ಜಿಲ್ಲಾಧ್ಯಕ್ಷ ಮಹ್ಮದ ಜಿಲಾನ ಜಿ, ಯುವ ಸಾಹಿತ್ಯ ಸಮ್ಮೇಳನಕ್ಕೆ ಹೈದರಾಬಾದ ಕರ್ನಾಟಕದ ಯುವ ಸಾಹಿತಿಗಳನ್ನ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಅವರ ಅಧ್ಯಕ್ಷತೆಯಲ್ಲಿ ಅ. ೨೭ ರಂದು ಸಮ್ಮೇಳನ ಜರುಗಲಿದೆ.
Please follow and like us:
error