ಸಂತರು ಸಂಗೀತದಿಂದ ಸಮಾಜವನ್ನು ಜಾಗೃತಗೊಳಿಸಿದರು -ಮಾಧವರಾವ್ ಇನಾಮದಾರ

ಪರಮಾತ್ಮನನ್ನು ಒಲಿಸಿಕೊಳ್ಳುವ ಅತಿ ಸುಲಭದ ಸಾಧನ ಸಂಗೀತ. ಭಕ್ತಿಯಿಂದ ಸಂಗೀತದ ಮಧುರ ಧ್ವನಿಯಲ್ಲಿ ಪರಮಾತ್ಮನನ್ನು ಕೊಂಡಾಡಿದ ದಾಸರು, ಶರಣರು, ಸಂತರು ಸಮಾಜವನ್ನು ಜಾಗೃತಗೊಳಿಸಿದರು ಎಂದು ಸಂಗೀತ ಭೀಷ್ಮಪಿತಾಮಹ ಮಾಧವರಾವ್ ಇನಾಮದಾರ ಹೇಳಿದರು.
ಅವರು ರವಿವಾರ ನಗರದ ಪ್ರಮೋದ ಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಕಿನ್ನಾಳ ಶ್ರೀ ಶಾರದಾ ಸಂಗೀತ ಕಲಾ ಶಿಕ್ಷಣ ಸಂಸ್ಥೆ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸಂಗೀತ ಸೌರಭ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಸಂಗೀತ ಗಂಧರ್ವ ಲೋಕದ ಅಪರೂಪದ ಕಲೆ ಇದರಲ್ಲಿ ತಲ್ಲೀನರಾದವರಿಗೆ ಜಗತ್ತಿನ ಯಾವ ಪದಾರ್ಥವು ಬೇಕಾಗುವುದಿಲ್ಲ. ನಾರದರು ನಿತ್ಯ ವೀಣೆ ನುಡಿಸಿ ಪರಮಾತ್ಮನನ್ನು ಪಾಡಿ ಅವನನ್ನು ಒಲಿಸಿಕೊಂಡು ಸಂಗತಿ ಯಾರಿಗೆ ಗೊತ್ತಿಲ್ಲಾ ಎಂದರು.
ಬಾಲಕಿಯರ ಸರಕಾರಿ ಪ.ಪೂ. ಮಹಾವಿದ್ಯಾಲಯದ ಪ್ರಾಂಶುಪಾಲ ಡಾ|| ವಿ.ಬಿ.ರಡ್ಡೇರ ಮುಖ್ಯ ಅತೀಥಿಯಾಗಿ ಪಾಲ್ಗೊಂಡು  ಮಾತನಾಡಿ, ಕರ್ನಾಟಕದಲ್ಲಿ ಹಿಂದೂಸ್ತಾನಿ ಮತ್ತು ಕ

ರ್ನಾಟಕ ಸಂಗೀತಕ್ಕೆ ಕಾಣಿಕೆ ನೀಡಿದ ಸಂಗೀತ ದಿಗ್ಗಜರ ಪಡೆ ಇದೆ. ಭಾರತ ಸಂಸ್ಕೃತಿಯ ಹಿರಿಮೆ-ಗರಿಮೆಗೆ ಇವರು ತಮ್ಮ ಶಕ್ತಿಯನ್ನು ಧಾರೆಯೆರೆದಿದ್ದಾರೆ. ನಮ್ಮ ಸಂಸ್ಕೃತಿಯ ಅಂತಸತ್ವ ಈ ಸಂಗೀತ ಪರಂಪರೆಯಲ್ಲದೆ. ಆಧ್ಯಾತ್ಮದ ಆನಂದಾನುಭವ ಇಂಥಹ ಸಂಗೀತದಿಂದ ಮಾತ್ರ ದೊರೆಯಲು ಸಾಧ್ಯ. ಭೀಮಶೇನ ಜೋಶಿ, ಮಲ್ಲಿಕಾರ್ಜುನ ಮನ್ಸೂರ, ಗಂಗೂಬಾಯಿ ಹಾನಗಲ್ ಮುಂತಾದವರ ಪರಂಪರೆಯನ್ನು ಪಂ. ವಿನಾಯಕ ತೊರವಿಯಂಥ ಮಹಾನ್ ಗಾಯಕರು ಮುಂದುವರೆಸಿಕೊಂಡು ಹೋಗುತ್ತಿರುವದು ಸಂತಸದ ವಿಷಯವಾಗಿದ್ದು, ಕೊಪ್ಪಳದಲ್ಲಿ ಹಿಂದೂಸ್ತಾನಿ, ಸಂಗೀತ ಸಭೆಗಳನ್ನು ಆಯೋಜಿಸುವ ಲಚ್ಚಣ್ಣ ಹಳೇಪೇಟೆಯವರನ್ನು ನಾವು ಅಭಿನಂದಿಸಬೇಕಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಂಥಹ ಕಾರ್ಯಕ್ರಮಗಳನ್ನು ನಿರಂತರವಾಗಿ ಪ್ರೋತ್ಸಾಹಿಸಬೇಕು ಎಂದರು.

 ದೇಶ ವಿದೇಶಗಳಲ್ಲಿ ಸಂಗೀತ ಪರಂಪರೆಗೆ ಮಹತ್ವದ ಸ್ಥಾನವಿದೆ. ಜಾಗತೀಕರಣದ ಅಬ್ಬರಕ್ಕೆ ಕೊಚ್ಚಿಕೊಂಡು ಹೋಗದಂತೆ ಈ ಶ್ರೀಮಂತ ಪರಂಪರೆಯನ್ನು ನಾವು ಮುಂದುವರೆಸಿಕೊಂಡು ಹೋಗುವ ಅನಿವಾರ್ಯತೆ ಇದೆ ಎಂದರು.
ದಿವ್ಯ ಸಾನಿಧ್ಯವನ್ನು ವಹಿಸಿದ   ಚೈತನ್ಯಾನಂದ ಸ್ವಾಮಿಗಳು ಶ್ರೀ ರಾಮಕೃಷ್ಣಾ ಆಶ್ರಮ ಕೊಪ್ಪಳ ಇವರು ಮಾತನಾಡಿ, ಭಾರತೀಯ ಸಂಸ್ಕೃತಿಯ ಮುಖ್ಯವಾಹಿನಿ ಎಂದರೆ ಸಂಗೀತ ಹಾಗೂ ಸಾಹಿತ್ಯ. ಇಂದಿನ ಆಧುನಿಕ ಕಾಲದ ಜೀವನ ಶೈಲಿಯಿಂದ ಜನರು ಹಲವಾರು ಮಾನಸಿಕವಾಗಿ, ದೈಹಿಕವಾಗಿ ಬಳಲಿದ್ದಾರೆ. ಇವು ಮನಸ್ಸಿನ ಪುನಶ್ಚೇತನವನ್ನು ಹಾಗೂ ಉತ್ಸಾಹವನ್ನು ತುಂಬುವ ಶಕ್ತಿ ಇರುವುದು ಭಾರತೀಯ ಸಂಗೀತ ತರಂಗಗಳಾದ ಹಿಂದೂಸ್ತಾನಿ ಸಂಗೀತ ಮತ್ತು ಕರ್ನಾಟಕ ಸಂಗೀತಕ್ಕೆ. ನಾವು ದೇಹ ಶುದ್ಧಿಗಾಗಿ ಸ್ನಾನವನ್ನು ಮಾಡುತ್ತೇವೆ. ಆದರೆ ಮನಸ್ಸಿನ ಸ್ನಾನಕ್ಕೆ ಹಾಗೂ ಆತ್ಮದ ಸ್ನಾನಕ್ಕೆ ಭಕ್ತಿ ಸಂಗೀತವೇ ಶ್ರೇಷ್ಠ ಸಾಧನ. ಈ ಸಾಧನೆಯಿಂದ ಹಲವಾರು ಸಂತರು ಶರಣರು, ಮಹಾತ್ಮರರಿಂದ ಉದಯಿಸಿದ್ದಾರೆ. ಆ ನಿಟ್ಟಿನಲ್ಲಿ ಶ್ರೀ ರಾಮಕೃಷ್ಣ ಪರಮಹಂಸರು, ಸ್ವಾಮಿವಿವೇಕಾನಂದರ. ಉನ್ನತ ಮಟ್ಟದ ಸಂಗೀತ ಬಲ್ಲವರಾಗಿದ್ದಾರೆ. ಇಂತಹ ಅಪೂರ್ವ ಸಂಗೀತ ಸುಧೆಯನ್ನು ಏರ್ಪಡಿಸಿದ ಈ ಸಂಸ್ಥೆ ಹಾಗೂ ಕೊಪ್ಪಳದ ಜನತೆಗೆ ಅಬಿನಂದಿಸುತ್ತಿದ್ದೇನೆ ಎಂದರು.
ಶ್ರೀ ಶಾರದಾ ಸಂಗೀತ ಕಲಾ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯಲಚ್ಚಣ್ಣ ಕಿನ್ನಾಳ ಸುಗಮ ಸಂಗೀತ ಹಾಗೂ ಭಕ್ತಿ ಸಂಗೀತವನ್ನು ಪ್ರಾರಂಭಿಸಿದರು. ನಂತರ ಗ್ವಾಲಿಯರ್ ಘರಾನ್ ಗಾಯನಾಚಾರ್ಯ ವಿದ್ವಾನ್ ಪಂ. ವಿನಾಯಕ ತೊರವಿಯವರು ಮೊದಲನೆಯದಾಗಿ ರಾಗ: ಪೂರ್ವಿ ವಿಲಂಬಿತ್ ಏಕತಾಲ್, ಎರಡನೆಯದಾಗಿ ರಾಗ : ಬಸಂತ್, ಬಹಾರ, ತಿನ್‌ತಾಲ್ ಛೋಟಾ ಖಾಯಿಲ್, ದೃತ್‌ಏಕತಾಲ್, ತರನಾ, ಅಭಂಗ, ವಚನ, ದಾಸವಾಣಿ ಈ ಸುಧೆಯನ್ನು ಕೊಪ್ಪಳದ ಜನತೆ ಚಪ್ಪಾಳಿ ತಟ್ಟಿ ಮಹಾದಾನಂದವನ್ನು ಸವಿದರು. 
ಸಹಕಲಾವಿದರಾಗಿ ಹಾರ್ಮೋನಿಯಮ್ ಸಾಥ್ : ಕು. ಶೃತಿಭಟ್ಟ, ತಬಲಾ ಸಾಥ್ ಶರಣಕುಮಾರ ಗುತ್ತರಗಿ ಹಾಗೂ ಕಿನ್ನಾಳದ ಶಿವಲಿಂಗಪ್ಪ ಹಳೇಪೇಟಿ, ತಾಳವಾದ್ಯವನ್ನು ಕೃಷ್ಣಾ ಸೊರಟೂರು, ತಾನಪೂರು ಸಾಥಿಯಾಗಿ ಸತೀಶ್ ದೇಸಾಯಿ ನೀಡಿದರು. 
ಶ್ರೀ ರಾಮಕೃಷ್ಣ ಆಶ್ರಮದ ಪರಮಪೂಜ್ಯ ಶ್ರೀ ಚೈತನ್ಯಾನಂದ ಸ್ವಾಮಿಜಿಗಳು ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿದ್ದರು. ಅಧ್ಯಕ್ಷತೆಯನ್ನು ನಗರಸಭೆ ಸದಸ್ಯೆ ವಿಜಯಾ ಹಿರೇಮಠ ವಹಿಸಿದ್ದರು. ವಿಶೇಷ ಅಥಿತಿಗಳಾಗಿ ನರಸಭೆ ಸದಸ್ಯ ಪ್ರಾಣೇಶ ಮಾದಿನೂರ, ಮುಖ್ಯ ಅತಿಥಿಗಳಾಗಿ  ಹೇಮರಾಜ್ ಶರ್ಮಾ, ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಸುರೇಶ ಭೂಮರಡ್ಡಿ,  ಶಿಕ್ಷಣ ಪ್ರೇಮಿ ರಾಘವೇಂದ್ರ ಉಪಾಧ್ಯ, ಗುತ್ತಿಗೆದಾರರು ಸುರೇಶ ಗಂಗೂರ ಭಾಗವಹಿಸಿದ್ದರು. ಶ್ರೀನಿವಾಸ ಅಶ್ವತಪುರ ನಿರ್ವಹಿಸಿದರು. ಶ್ರೀನಿವಾಸ ಜೋಷಿ ವದಿಸಿದರು. 
Please follow and like us:
error