fbpx

ಗಮನಸೆಳೆದ ವ್ಯಂಗ್ಯಚಿತ್ರ ಹಾಗೂ ಛಾಯಾಚಿತ್ರ ಪ್ರದರ್ಶನ.

ಕೊಪ್ಪಳ-02- ಇಲ್ಲಿಗೆ ಸಮೀಪದ ಭಾನಾಪುರದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ನಾಡು, ನುಡಿ,ನೆಲ, ಜಲಗಳ ಬಗ್ಗೆ ಅಪಾರ ಪ್ರೇಮ ಹೊಂದಿರುವ ನಾಗರಾಜ್ ಕುರುಗೋಡ ಎಂಬ ಯುವಕ ನಿರಂತರವಾಗಿ ಸುಮಾರು ೨೦ ವರ್ಷಗಳಿಂದ ರಾಜ್ಯೋತ್ಸವ ಮತ್ತು  ರಾಷ್ಟ್ರೀಯ ಹಬ್ಬಗಳಾದ ಗಣರಾಜ್ಯೋತ್
    ಕನ್ನಡಧ್ವಜಾರೋಹಣ, ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ, ನಾಡಿನ ಕಳಕಳಿಯುಳ್ಳ  ಬದರಿ ಪುರೋಹಿತ್‌ರ ವ್ಯಂಗ್ಯಚಿತ್ರ ಹಾಗೂ  ಕೃಷ್ಣ ಸೊರಟೂರ್‌ರ ನಾಡಿನ ಸುಂದರ ತಾಣಗಳ ಛಾಯಾಚಿತ್ರ ಪ್ರದರ್ಶನಮಾಡುವುದರ ಮೂಲಕ ವಿಶಿಷ್ಟವಾಗಿ ಆಚರಿಸಲಾಯಿತು.  ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ಯಲ್ಲಪ್ಪ ಮೇಟಿ  ಭುವನೇಶ್ವರಿ ಭಾವಚಿತ್ರಕ್ಕೆ ಹೂ ಅರ್ಪಿಸುವುದ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾ.ಪಂ.ಅಧ್ಯಕ್ಷ ಬಸವರಾಜ್ ಮುಳಗುಂಡಮಠ ವ್ಯಂಗ್ಯಚಿತ್ರ, ಛಾಯಾಚಿತ್ರಗಳ ಉದ್ಘಾಟನೆ ನೆರವೇರಿಸಿದರು.
  ಈ ಸಂದರ್ಭದಲ್ಲಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಶರಣಪ್ಪ ಕಡಿ, ಪ್ರಾಥಮಿಕ ಶಾಲಾ ಮುಖ್ಯಗುರು ವೀರಣ್ಣ ಎಂ.ಆರ್.  ಕಾರ್ಯಕ್ರಮ ಸಂಯೋಜಕ  ಕನ್ನಡ ಗೆಳೆಯರ ಬಳಗದ ಮುಖ್ಯಸ್ಥ ನಾಗರಾಜ್ ಕುರುಗೋಡ್, ಗ್ರಾ.ಪಂ ಸದಸ್ಯರಾದ ಪ್ರಕಾಶ ಸುಳ್ಯದ್, ಸಿದ್ದಲಿಂಗಯ್ಯ, ರಹೇಮಾನ್ ಸಾಬ್ ನದಾಫ್, ಛಾಯಾಚಿತ್ರಕಾರ ಕೃಷ್ಣ ಸೊರಟೂರ್, ವ್ಯಂಗ್ಯಚಿತ್ರಕಾರ ಬದರಿ ಪುರೋಹಿತ್, ಶ್ರೀನಿವಾಸ ಕುರುಗೋಡ್, ಶಂಕರ್ ಕುರುಗೋಡ್ ಮುಂತಾದವರುಗಳು ಇದ್ದರು.

ಸವ ಸ್ವತಂತ್ರ್ಯ ದಿನಾಚರಣೆ ದಿನಗಳಲ್ಲಿ ಶಾಲಾದಿನಗಳಿಂದಲೇ ತಮ್ಮ ಮನೆಯ ಮುಂದಿನ ಆವರಣದಲ್ಲಿ  ಮನೆಯವರೆಲ್ಲರ ಸಹಕಾರದಿಂದ ಪ್ರತಿವರ್ಷವೂ ಆಚರಿಸಿಕೊಳ್ಳುತ್ತಾ ಬಂದಿದ್ದಾರೆ. ಪ್ರತಿವರ್ಷವೂ ನಾಡಿನ ಜಾಗೃತಿಗಾಗಿ  ವಿಶೇಷ ಕಾರ್ಯಕ್ರಮಗಳನ್ನು ಹಮ್ಮಕೊಳ್ಳುತ್ತಾ ಬಂದಿರುತ್ತಾರೆ.

Please follow and like us:
error

Leave a Reply

error: Content is protected !!