ವಿಧಾನ ಪರಿಷತ್ ಚುನಾವಣೆ ಅಧಿಸೂಚನೆ ಪ್ರಕಟ.

ಕೊಪ್ಪಳ ಡಿ ೦೨(ಕ ವಾ) ರಾಯಚೂರು-ಕೊಪ್ಪಳ ವಿಧಾನಪರಿಷತ್ (ಸ್ಥಳೀಯ ಸಂಸ್ಥೆ) ಸದಸ್ಯ ಸ್ಥಾನದ ಚುನಾವಣೆಗಾಗಿ ಅಧಿಸೂಚನೆ ಪ್ರಕಟಗೊಂಡಿದ್ದು, ಈಗಾಗಲೆ ಚುನಾವಣಾ ನೀತಿ ಸಂಹಿತೆ ನ. ೨೪ ರಿಂದಲೇ ಜಾರಿಗೆ ಬಂದಿದೆ.
     ಅಧಿಸೂಚನೆಯನ್ವಯ ನಾಮ ಪತ್ರ ಸಲ್ಲಿಸುವ ಕೊನೆಯ ಡಿ. ೦೯ (ಬೆಳಿಗ್ಗೆ ೧೧.೦೦ ಗಂಟೆಯಿಂದ ಮಧ್ಯಾಹ್ನ ೩.೦೦ ಗಂಟೆಯೊಳಗೆ ಸರಕಾರಿ ರಜಾದಿನಗಳನ್ನು ಹೊರತು ಪಡಿಸಿ), ನಾಮ ಪತ್ರ ಪರಿಶೀಲನೆ ದಿನಾಂಕ: ಡಿ. ೧೦ ರಂದು ಬೆಳಿಗ್ಗೆ ೧೧.೦೦ ಗಂಟೆಗೆ.  ಉಮೇದುವಾರಿಕೆ ಹಿಂತೆಗೆದುಕೊಳ್ಳುವ ಕೊನೆಯ ದಿನಾಂಕ: ಡಿ. ೧೨ ರಂದು ಮಧ್ಯಾಹ್ನ ೩.೦೦ ಗಂಟೆಯೊಳಗಾಗಿ. ಮತದಾನ ಜರುಗುವ ದಿನಾಂಕ: ಡಿ. ೨೭ ರಂದು ಬೆಳಿಗ್ಗೆ ೮.೦೦ ಗಂಟೆಯಿಂದ ಸಾಯಂಕಾಲ ೪.೦೦ ಗಂಟೆಯವರೆಗೆ. ಮತ ಎಣಿಕೆ ದಿನಾಂಕ: ಡಿ. ೩೦ ರಂದು ಬೆಳಿಗ್ಗೆ ೮.೦೦ ಗಂಟೆಯಿಂದ. 
ಕರಡು ಪಟ್ಟಿಗೆ ಆಕ್ಷೇಪಣೆ ಆಹ್ವಾನ : ರಾಯಚೂರು ಸ್ಥಳೀಯ ಸಂಸ್ಥೆಗಳ ಚುನಾವಣೆ ೨೦೧೫ರ ಕರಡು ಮತದಾನ ಕೇಂದ್ರಗಳ ಪಟ್ಟಿ ಹಾಗೂ ಕರಡು ಮತದಾರರ ಯಾದಿಯನ್ನು ಈಗಾಗಲೆ ಮುಖ್ಯ ಕಾರ್ಯನಿರ್ವಾಹ ಅಧಿಕಾರಿಗಳು ಜಿಲ್ಲಾ ಪಂಚಾಯತ ರಾಯಚೂರು, ಸಂಬಂಧಪಟ್ಟ ಎಲ್ಲಾ ತಹಸೀಲ್ ಕಾರ್ಯಾಲಯ, ಸಹಾಯಕ ಆಯುಕ್ತರ ಕಾರ್ಯಾಲಯ, ಕಾರ್ಯನಿರ್ವಾಹಕ ಅಧಿಕಾರಿಗಳ ಕಾರ್ಯಾಲಯ ಹಾಗೂ ಸಂಬಂಧಪಟ್ಟ ಎಲ್ಲಾ ಗ್ರಾಮ ಪಂಚಾಯತ ಮತ್ತು ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಕಾರ್ಯಾಲಯಗಳಲ್ಲಿ ಪ್ರಚುರಪಡಿಸಲಾಗಿದೆ. ಹೀಗೆ ಪ್ರಚುರ ಪಡಿಸಲಾಗಿರುವ ಕರಡು ಮತದಾನ ಕೇಂದ್ರ ಹಾಗೂ ಕರಡು ಮತದಾರರ ಯಾದಿ ಕುರಿತಾಗಿ ಆಕ್ಷೇಪಣೆಗಳಿದ್ದಲ್ಲಿ ಡಿ. ೦೩ ರೊಳಗಾಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಚುನಾವಣಾ ಶಾಖೆಯಲ್ಲಿ ಹಾಗೂ ಸಂಬಂಧಪಟ್ಟ ತಾಲೂಕಿನ ತಹಸೀಲ್ ಕಾರ್ಯಾಲಯದ ಚುನಾವಣಾ ಶಾಖೆಯಲ್ಲಿ ಖುದ್ದಾಗಿ ಲಿಖಿತ ಆಕ್ಷೇಪಣೆಯನ್ನು ಪೂರಕವಾಗಿರುವ ದಾಖಲೆಗಳೊಂದಿಗೆ ಸಲ್ಲಿಸಬಹುದಾಗಿದೆ.
ಮತದಾರರಿವರು : ಈ ಚುನಾವಣೆಯ ಪ್ರಾದೇಶಿಕ ಕ್ಷೇತ್ರ ವ್ಯಾಪ್ತಿಯು ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಯ ಲೋಕಸಭಾ, ವಿಧಾನಸಭಾ, ವಿಧಾನ ಪರಿಷತ ಸದಸ್ಯರು, ಜಿಲ್ಲೆಯ ಎಲ್ಲಾ ಜಿಲ್ಲಾ ಪಂಚಾಯತ, ತಾಲೂಕಾ ಪಂಚಾಯತ, ಗ್ರಾಮ ಪಂಚಾಯತ ಹಾಗೂ ನಗರಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಸದಸ್ಯರಾದ ನಗರ ಸಭೆ ಹಾಗೂ ಪುರಸಭೆ / ಪಟ್ಟಣ ಪಂಚಾಯತಿ ಸದಸ್ಯರು, ಮತದಾರರಾಗಿರುತ್ತಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಸರಕಾರದಿಂದ ನಾಮ ನಿರ್ದೇಶನಗೊಂಡಂತಹ ಸದಸ್ಯರು ಸಹ ಈ ಚುನಾವಣೆಯಲ್ಲಿ ಮತದಾನದ ಹಕ್ಕನ್ನು ಹೊಂದಿರುತ್ತಾರೆ.
ಮತದಾನ ಕೇಂದ್ರ ಹಾಗೂ ಮತದಾರರ ಸಂಖ್ಯೆ : ರಾಯಚೂರು ಜಿಲ್ಲೆಯ ರಾಯಚೂರು ತಾಲೂಕಿನಲ್ಲಿ ಒಟ್ಟು ಮತದಾನ ಕೇಂದ್ರಗಳು ೩೩, ಮತದಾರರು ಒಟ್ಟು ೭೩೩. ಮಾನವಿ ತಾಲೂಕಿನಲ್ಲಿ ೩೯ ಮತ ಕೆಂದ್ರಗಳಿದ್ದು ಒಟ್ಟು ಮತದಾರರು ೭೯೭. ದೇವದುರ್ಗ ತಾಲೂಕಿನಲ್ಲಿ ಮತದಾನ ಕೇಂದ್ರಗಳು-೩೨, ಮತದಾರರು-೬೬೪, ಲಿಂಗಸೂಗೂರು- ಮತದಾನ ಕೇಂದ್ರಗಳು-೪೦, ಮತದಾರರು-೭೬೩. ಸಿಂದನೂರು- ಮತದಾನ ಕೇಂದ್ರಗಳು-೩೭, ಮತದಾರರು-೮೧೦ ಸೇರಿದಂತೆ ರಾಯಚೂರು ಜಿಲ್ಲೆಯಲ್ಲಿ ಒಟ್ಟು ೧೮೧ ಮತದಾನ ಕೇಂದ್ರಗಳು ಹಾಗೂ ಒಟ್ಟು ಮತದಾರರ ಸಂಖ್ಯೆ ೩೭೬೭.
      ಕೊಪ್ಪಳ ಜಿಲ್ಲೆಯ ಜಿಲ್ಲೆಯ ಕೊಪ್ಪಳ ತಾಲೂಕಿನಲ್ಲಿ ೪೧ ಮತದಾನ ಕೇಂದ್ರಗಳಿದ್ದು, ೮೧೫ ಮತದಾರರಿದ್ದಾರೆ.  ಗಂಗಾವತಿ- ೪೪ ಮತದಾನ ಕೇಂದ್ರಗಳು, ೮೬೪- ಮತದಾರರು. ಯಲಬುರ್ಗಾ-  ೩೮ ಮತದಾನ ಕೇಂದ್ರಗಳು, ೬೩೪- ಮತದಾರರು ಹಾಗೂ ಕುಷ್ಟಗಿ ತಾಲೂಕಿನಲ್ಲಿ  ೩೮ ಮತದಾನ ಕೇಂದ್ರಗಳು ಹಾಗೂ ೬೭೫ ಮತದಾರರಿದ್ದಾರೆ.
ಅಭ್ಯರ್ಥಿಗಳಿಗೆ ಸೂಚನೆ : ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಚುನಾವಣಾಧಿಕಾರಿಗಳ ಕಾರ್ಯಾಲಯದಿಂದ ನಾಮಪತ್ರ, ಅಫಿಡೆವಿಟ್, ಶಪತ ಪತ್ರಗಳನ್ನು ಪಡೆಯಬಹುದಾಗಿದೆ. ಮತ ಪತ್ರದಲ್ಲಿ ಅಭ್ಯರ್ಥಿಯ ಹೆಸರು ಪಕ್ಷದ ಹೆಸರು ಹಾಗೂ ಪ್ರಥಮ ಬಾರಿಗೆ, ಸ್ಪರ್ಧಿಸುವ ಅಭ್ಯರ್ಥಿಯ ಭಾವಚಿತ್ರವನ್ನು ನಮೂದಿಸಲಾಗುವುದು. ಅಭ್ಯರ್ಥಿಯ ಇತ್ತೀಚಿನ (೩ ತಿಂಗಳೊಳಗಿನ) ಭಾವ ಚಿತ್ರ, ಅದರ ಅಳತೆ ೨ * ೨.೫ ಸೆಂಟಿ ಮೀಟರ್ ಹೊಂದಿರಬೇಕು ಹಾಗೂ ಸದರಿ ಭಾವಚಿತ್ರವು ಸರಳ ಉಡುಪುಗಳನ್ನು ಧರಿಸಿರಬೇಕು, ಯಾವುದೇ ಟೋಪಿ ಅಥವಾ ಕಪ್ಪುಕನ್ನಡಕವನ್ನ ಹೊಂದಿರಬಾರದು. ಅಭ್ಯರ್ಥಿಯು ಯಾವುದೇ ತರಹದ ಭಂಗಿ (ಇxಠಿಡಿessioಟಿ) ಇಲ್ಲದೇ, ಕಣ್ಣು ಮುಚ್ಚದೇ ನೇರವಾಗಿ ಕ್ಯಾಮರದ ಕಡೆಗೆ ಮುಖಮಾಡಿ ಫೋಟೋವನ್ನು ತೆಗೆಯಿಸಿಕೊಂಡಿರಬೇಕು. ಈ ರೀತಿಯ ಷರತ್ತುಬದ್ದ ಭಾವ ಚಿತ್ರಗಳನ್ನು ನಾಮಪತ್ರದೊಂದಿಗೆ (ಪಾಸಪೋರ್ಟ ಸೈಜ ಫೋಟೋಗಳನ್ನು) ಸಲ್ಲಿಸಬೇಕು.  ಠೇವಣಿಯ ಮೊತ್ತ ಸಾಮಾನ್ಯ ಅಭ್ಯರ್ಥಿಗಳಿಗೆ ರೂ. ೧೦,೦೦೦/- ಗಳು ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥೀಗಳಿಗೆ ರೂ. ೫,೦೦೦/- ನಿಗದಿಪಡಿಸಲಾಗಿದೆ.
        ಮಾನ್ಯತೆ ಪಡೆದ ರಾಜಕೀಯ ಪಕ್ಷದ ಮುಖಾಂತರ ಸ್ಪರ್ಧಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ನಮೂನೆ-ಂಂ ಹಾಗೂ ನಮೂನೆ-ಃಃ ಯನ್ನು ನಾಮ ಪತ್ರ ಸಲ್ಲಿಸುವ ಕೊನೆಯ ದಿನಾಂಕವಾದ ಡಿ. ೦೯ ರಂದು ಮಧ್ಯಾಹ್ನ ೩.೦೦ ಗಂಟೆಯೊಳಗಾಗಿ ಕಡ್ಡಾಯವಾಗಿ ಸಲ್ಲಿಸಬೇಕು.  ಚುನಾವಣಾ ಅಭ್ಯರ್ಥಿಗೆ ೧೦ ಜನ ಸೂಚಕರಿರುವುದು ಕಡ್ಡಾಯ. ಸ್ಪರ್ಧಿಸುವ ಅಭ್ಯರ್ಥಿಯ ಹೆಸರು ಕರ್ನಾಟಕ ವಿಧಾನ ಸಭಾ ಮತದಾರರ ಯಾದಿಯಲ್ಲಿ ಇರಬೇಕು. ಆದರೆ ಸೂಚಕರು ಮಾತ್ರ ಈ ಚುನಾವಣಾ ಕ್ಷೇತ್ರಕ್ಕೆ ತಯಾರಿಸಿರುವ ಮತದಾರರ ಯಾದಿಯಲ್ಲಿನ ಮತದಾರರಾಗಿರಬೇಕು. ಮತದಾನವು ಡಿ. ೨೭ ರಂದು ಬೆಳ್ಳಿಗೆ ೮.೦೦ ಗಂಟೆಯಿಂದ ಸಾಯಂಕಾಲ ೪.೦೦ ಗಂಟೆಯವರೆಗೆ ಜರುಗಲಿದೆ. ಈ ಚುನಾವಣೆಗೂ ಸಹ ಓಔಖಿಂ ಅನ್ವಯವಾಗಲಿದೆ. ಸೂಕ್ಷ್ಮ, ಅತೀಸೂಕ್ಷ್ಮ ಹಾಗೂ ಸಾಮಾನ್ಯ ಮತದಾನ ಕೇಂದ್ರದ ಮಾಹಿತಿಯನ್ನು ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳ ಆಧಾರದ ಮೇರೆಗೆ ನಿರ್ಧರಿಸಲಾಗುವುದು. ಈ ಚುನಾವಣೆಯಲ್ಲಿ ಮತ ಚಲಾಯಿಸಲಾದ ಮತ ಪೆಟ್ಟಿಗೆಗಳನ್ನು ಶೇಖರಿಸಿ ಇಡಲು ರಾಯಚೂರಿನ ಎಲ್.ವಿ.ಡಿ ಪದವಿಪೂರ್ವ ಕಾಲೇಜಿನಲ್ಲಿ ಭದ್ರತಾ ಕೋಠಡಿಯನ್ನು ಸ್ಥಾಪಿಸಲು ಯೋಜಿಸಲಾಗಿದೆ. ಅಲ್ಲದೇ ಅದೇ ಕಟಡ್ಡದಲ್ಲಿಯೆ ಮತ ಎಣಿಕೆಯನ್ನೂ ಸಹ ಕೈಗೊಳ್ಳಲಾಗುವುದು ಎಂದು ಚುನಾವಣಾಧಿಕಾರಿಯೂ ಆಗಿರುವ ರಾಯಚೂರು ಜಿಲ್ಲಾಧಿಕಾರಿ ಎಸ್. ಸಸಿಕಾಂತ್ ಸೆಂಥಿಲ್ ಅವರು ತಿಳಿಸಿದ್ದಾರೆ.

Please follow and like us:
error