ರಕ್ತದಾನಕ್ಕೆ ಪಣತೊಡಲು ಕರೆ

 

  ಕೊಪ್ಪಳ. ೬-ಹಿಂದುಳಿದ ಹೈದ್ರಾಬಾದ್ ಕರ್ನಾಟಕ  ಹಿಂದುಳಿದ ಕೊಪ್ಪಳ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿಹೆಚ್ಚು ರಕ್ತದ ಬೇಡಿಕೆ ಇದ್ದು ಅದನ್ನು ಪೂರೈಸಲು ಜಿಲ್ಲೆಯ ಪ್ರತಿಯೊಬ್ಬ ನಾಗರಿಕರು ಪಣ ತೊಡಬೇಕೆಂದು ಅಪರ ಜಿಲ್ಲಾಧಿಕಾರಿ ಸುರೇಶ ಹಿಟ್ನಾಳ ಹೇಳಿದರು.

     ಅವರು ಗುರುವಾರ ಬೆಳಿಗ್ಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ, ಬ್ಲಡ್ ಬ್ಯಾಂಕ್ ಗೆ ಭೇಟಿ ನೀಡಿ ಮಾತನಾಡುತ್ತಿದ್ದರು. 
     ಬ್ಲಡ್ ಬ್ಯಾಂಕ್‌ನಲ್ಲಿ ಪ್ರತಿ ದಿನ ಸುಮಾರು ೫೦ ಯುನಿಟ್‌ನಷ್ಟು ರಕ್ತದ ಬೇಡಿಕೆ ಇದ್ದು ಅದರ ಪೂರೈಕೆಗೆ ಹೆಚ್ಚು ಹೆಚ್ಚು ರಕ್ತದಾನ ಶಿಬಿರಗಳು ನಡೆಯ ಬೇಕಿದ್ದು ಜನ ಪರ ಸಂಘಟನೆಗಳು ಹಾಗೂ ಪ್ರಗತಿ ಪರ ಚಿಂತಕರು, ಸರಕಾರಿ ನೌಕರರು ಮತ್ತು ಸರ್ವರೂ ರಕ್ತದಾನ ಮಾಡಿ ಎಂದು ಕರೆ ನೀಡಿದರು. 
     ಜಿಲ್ಲೆಯಲ್ಲಿ ಗರ್ಭಿಣಿ ಮಹಿಳೆಯರು ಹಾಗೂ ಡೆಂಗ್ಯೂ ರೋಗಿಗಳಿಗೆ, ಅಪಘಾತ ಸಂದರ್ಭದಲ್ಲಿ ರಕ್ತ ಅವಶ್ಯಕವಾಗಿ ಬೇಕಾಗುತ್ತದೆ. ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕೊಪ್ಪಳದಲ್ಲಿ ಬ್ಲಡ್ ಬ್ಯಾಂಕ್ ಮಾಡಿ ಉತ್ತಮ ಸೇವೆ ಮಾಡುತ್ತಿದೆ ಎಂದು ಅಭಿನಂದಿಸಿದರು. 
     ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಡಾ. ಕೆ.ಜಿ. ಕುಲಕರ್ಣಿ ವಹಿಸಿದ್ದರು. ಈ ಸಂಧರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಡಾ. ಶ್ರೀನಿವಾಸ ಹ್ಯಾಟಿ, ಖಜಾಂಚಿ ಸುಧೀರ ಅವರಾಧಿ ಮತ್ತು ನಿರ್ದೇಶಕರಾದ ಸೋಮರೆಡ್ಡಿ ಅಳವಂಡಿ, ಸಂತೋಶ ದೇಶಪಾಂಡೆ, ಡಾ. ಮಂಜುನಾಥ ಸಜ್ಜನ, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Leave a Reply