ಕರ್ನಾಟಕ ರಕ್ಷಣಾ ವೇದಿಕೆಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ಕೊಪ್ಪಳ: ದಿ ೦೭-೦೫-೨೦೧೫ ರಂದು ಕರ್ನಾಟಕ ರಕ್ಷಣಾ ವೇದಿಕೆವತಿಯಿಂದ ಜಿಲ್ಲಾಧಿಕಾರಿಗಳಿಗೆ ಅಕ್ರಮ ಮಣ್ಣು ಸಾಗಾಣಿಕೆ ತಡೆಗಟ್ಟುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು. 
ಕೊಪ್ಪಳ ಜಿಲ್ಲೆಯಾದ್ಯಂತ ಕೆರೆ ಹಾಗೂ ತುಂಗಭದ್ರಾ ನದಿ ದಂಡೆಯಿಂದ ಅಕ್ರಮವಾಗಿ ಮಣ್ಣನ್ನು ಅಗೆದು ತಮ್ಮ ಲಾಭಕ್ಕಾಗಿ ಸಾಗಾಣಿಕೆ ಮಾಡುತ್ತಿದ್ದಾರೆ. ಈ ಅಕ್ರಮ ದಂಧೆಯಲ್ಲಿ ಜನಪ್ರತಿಧಿಗಳು ಹಲವು ಗುತ್ತಿಗೆ ದಾರರು ಕೆಲ ಸಂಘಟನೆಕಾರರು ಭಾಗಿಯಾಗಿದ್ದಾರೆ. ಈ ಅಕ್ರಮ ಮಣ್ಣು ಸಾಗಾಣಿಕೆ ಮಾಡುವದನ್ನು ಹಲುಬಾರಿ ಸಂಬಂದಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ ಯಾವ ಪ್ರಯೋಜನವಾಗಿರುವುದಿಲ್ಲ. ಕೆಲವು ಪ್ರಬಾವಿಗಳ ಕೈವಾಡವಿದ್ದು ನಿಷ್ಠಾವಂತ ಅದಿಕಾರಿಗಳನ್ನು ಬೆದರಿಸುವುದು ಕಂಡು ಬಂದಿದೆ. ಇತ್ತೀಚೆಗೆ ಹತ್ಯೆಗೀಡಾದ ನಿಷ್ಠವಂತ ಅಧಿಕಾರಿ ಡಿ.ಕೆ.ರವಿ ಸಾವಿನಿಂದಾಗಿ ನಿಷ್ಠಾವಂತರು ಹೆದರುವ ಪರಸ್ಥಿತಿ ಉಂಟಾಗಿದೆ. ಆದ್ದರಿಂದ ಸಂಬಂದಪಟ್ಟವ ಅಧಿಕಾರಿಗಳಿಗೆ ತಿಳಿಸಿ ತಕ್ಷಣ ಈ ದಂದೆಯನ್ನು ನಿಲ್ಲಿಸಿ ಸರ್ಕಾರಿ ಭೂಮಿಯನ್ನು ರಕ್ಷಿಸಬೇಕು ಹಾಗೂ ಅಕ್ರಮ ದಂದೆಗಾರರನ್ನು ಹಿಡಿದು ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಮುಂದೆ ಈ ದಂದೆ ನಡೆಯದಂತೆ ಎಚ್ಚರ ವಹಿಸಬೇಕು. ಈ ದಂದೆಯಲ್ಲಿ ಭಾಗವಹಿಸಿದಂತೆ ಸಂಘಟನೆಗಳ ಪರವಾನಿಗೆಯನ್ನು ರದ್ದುಗೊಳಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. 
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಕಾರ್ಯಾಧ್ಯಕ್ಷ ಆರ. ವಿಜಯಕುಮಾರ, ಅಧ್ಯಕ್ಷ ಸ್ವಾಮಿನಥನ್, ಉಪಾಧ್ಯಕ್ಷ ನವಾಬಸಾಬ, ಕಾರ್ಯದರ್ಶಿ ದಯಾನಂದ ಸ್ವಾಮಿ, ತಾ. ಅಧ್ಯಕ್ಷ ಮೊಹಿದ್ದೀನ, ಬಿ.ಬಿ. ಜಾನ ಮುಂತಾದವರು ಉಪಸ್ಥಿತರಿದ್ದರು. 
Please follow and like us:
error