fbpx

ಗುರುವಂದನಾ ಕಾರ್ಯಕ್ರಮ

 ಜಗತ್ತಿನಲ್ಲಿಯೇ ಸ್ವಾರ್ಥ ಮನೋಭಾವ ಇಲ್ಲದ ವೃತ್ತಿ ಎಂದರೆ ಶಿಕ್ಷಕ ವೃತ್ತಿ. ದೇಶ ಸುಧಾರಣೆ ಮತ್ತು ಅಭಿವೃದ್ಧಿ ಆದರ್ಶ ಶಿಕ್ಷಕರಿಂದ ಮಾತ್ರ ಸಾಧ್ಯ. ಶಿಕ್ಷಕರು ಮಕ್ಕಳ ಸೇವಕರಂತೆ ಸೇವೆ ಸಲ್ಲಿಸಬೇಕು ಆಗ ಮಾತ್ರ ಮಕ್ಕಳು ಉತ್ತಮವಾದ ಮೌಲ್ಯಧಾರಿತ ಜೀವನವನ್ನು ಪಡೆಯಲು ಸಾಧ್ಯ ಎಂದು ಹುಲಗಪ್ಪ ಕಟ್ಟಿಮನಿ ಮಾತನಾಡಿದರು.

             ಅವರು ನಗರದ ಕುಷ್ಟಗಿ ರಸ್ತೆಯಲ್ಲಿರುವ ಜೀನಿಯಸ್ ಪಬ್ಲಿಕ್ ಸ್ಕೂಲ್‌ನಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯ ನಿಮಿತ್ಯ ಮುಖ್ಯಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು.
             ಕಾರ್ಯಕ್ರಮದ ಮುಖ್ಯಅತಿಥಿಗಳಾಗಿ ಪತ್ರಕರ್ತರಾದ ಎಮ್.ಎನ್.ದೊಡ್ಡಮನಿ, ಮಂಜುನಾಥ, ಮಾರ್ಕಂಡೆಪ್ಪ, ಚನ್ನಬಸಪ್ಪ ಹೊಣೆಯಪ್ಪನವರ, ಹಾಗೂ ಶ್ರೀಮತಿ ಅನ್ನಪೂರ್ಣ ಶಿಕ್ಷಕಿ  ಹಾಗೂ ಶಾಲಾ ಪ್ರಧಾನ ಕಾರ್ಯದರ್ಶಿ ನಾಗರಾಜ ಚಿಲವಾಡಗಿ ವೇದಿಕೆಯಲ್ಲಿ ಇದ್ದರು.
              ಶಾಲಾ ವಿದ್ಯಾರ್ಥಿಗಳಾದ ನೇತ್ರಾ, ತನುಜಾ, ರಿಂಕೂ ಮತ್ತು ಸ್ವಪ್ನಾ ಶಿಕ್ಷಕರ ದಿನಾಚರಣೆ ಹಾಗೂ ಡಾ.ರಾಧಾಕೃಷ್ಣನ್ ರವರ ಬಗ್ಗೆ ಭಾಷಣ ಮಾಡಿದರು.
              ಶಾಲಾ ಶಿಕ್ಷಕಿಯರಾದ ನೇತ್ರಾವತಿ ಬಂಗಾರಿ , ಅರುಣಾ ಮುದಗಲ್, ನೇತ್ರಾವತಿ ಚನ್ನಯ್ಯ ಮಾತನಾಡಿದರು. 
              ನಿವೃತ್ತ ಶಿಕ್ಷಕಿಯರಾದ ಶ್ರೀಮತಿ ಇಂದುಮತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಶಾಲೆಯ ಪ್ರತಿ ಶಿಕ್ಷಕರು ಮಕ್ಕಳಿಗೆ ಶಿಕ್ಷಣ ನೀಡುವವದರ ಜೊತೆಗೆ ಜೀವನವನ್ನು ರೂಪಿಸಿಕೊಳ್ಳುವ ಅಂಶಗಳನ್ನು  ಕೂಡ ಕಲಿಸುತ್ತಾ ಸಾಮಾಜಿಕ ಜವಾಬ್ದಾರಿ ನಿರ್ವಹಿಸುವ ಉತ್ತಮ ನಾಗರಿಕರನ್ನಾಗಿ ಮಾಡಲು ಕರೆ ನೀಡಿದರು.
               ಕಾರ್ಯಕ್ರಮವನ್ನು ಶಾಲಾ ವಿದ್ಯಾರ್ಥಿಗಳಾದ ಬಸಮ್ಮ ನಿರೂಪಿಸಿದರು, ಶಾಲಾ ವಿದ್ಯಾರ್ಥಿಗಳಾದ ಚೈತ್ರ ಮತ್ತು ಮಮತಾ ಪಾರ್ಥಿಸಿದರು, ಕೋಟೇಶ ಸ್ವಾಗತಿಸಿದರು,  ಚೈತ್ರ ವಂದಿಸಿದರು.
Please follow and like us:
error

Leave a Reply

error: Content is protected !!