ವಕ್ಫ್ ಆಸ್ತಿ ಸಂರಕ್ಷಿಸಲು ಜಿಲ್ಲಾ ಸಮಿತಿಯ ನಿರ್ಣಯ

Koppal :  ಜಿಲ್ಲೆಯ ವಕ್ಫ್ ಆಸ್ತಿಯನ್ನು ಸಂರಕ್ಷಿಸಲು ಜಿಲ್ಲಾ ವಕ್ಫ್ ಸಮಿತಿಯು ನ. ೧೬ ರಂದು ನಡೆದ ಸಮಿತಿ ಸಭೆಯಲ್ಲಿ ನಿರ್ಣಯ ಅಂಗೀಕರಿಸಿದೆ.
  ವಕ್ಫ್ ಆಸ್ತಿಗಳಲ್ಲಿ ಜಿಲ್ಲಾ ಮಟ್ಟದ ಕಾರ್ಯಾಲಯದ ಪರವಾನಿಗೆ ಪಡೆಯದೆ, ಕಟ್ಟಡಗಳನ್ನು ಕಟ್ಟುವುದು, ಅಥವಾ ವಕ್ಫ್ ಆಸ್ತಿಗಳನ್ನು ತೆರವುಗೊಳಿಸುವುದು ಮತ್ತು ತಮ್ಮದೇ ಆದ ನಿರ್ಣಯಗಳನ್ನು ಕೈಗೊಂಡಲ್ಲಿ, ಕಾನೂನು ಉಲ್ಲಂಘಿಸಿದಲ್ಲಿ ಅವರ ಮೇಲೆ ಕಾನೂನಿನ ಚೌಕಟ್ಟಿನ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಕಾರ್ಯಾಲಯದಲ್ಲಿ ನ. ೧೬ ರಂದು ನಡೆದ ಸಭೆಯಲ್ಲಿ ಚರ್ಚಿಸಿ ಠರಾವು ಪಾಸ್ ಮಾಡಲಾಗಿದೆ.  ಸಭೆಯಲ್ಲಿ  ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅರ್ಧಯಕ್ಷ ನೂರ್ ಅಹ್ಮದ್ ಹಣಜಗೇರಿ, ಉಪಾಧ್ಯಕ್ಷ ಪೀರಾಹುಸೇನ್ ಹೊಸಳ್ಳಿ, ಸದಸ್ಯರುಗಳಾದ ಶರೀಫ್‌ಸಾಬ ಇಟಗಿ, ಗೌಸ್ ಸಾಬ್ ಹಾಜೀಸಾಬ, ರಶೀದ ಸಾಬ ಮಿಠಾಯಿ, ಹುಸೇನ್‌ಸಾಬ ನದಾಫ್ ಮತ್ತು ಚಂದ್ದುಸಾಬ ಬಳೂಟಗಿ ಅವರು ಉಪಸ್ಥಿತರಿದ್ದರು .

Leave a Reply