ಅನ್ನ ಭಾಗ್ಯ ಯೋಜನೆ ಅಕ್ರಮ ಸಂಗ್ರಹಣೆ ಅಮಾನತ್ತಿಗೆ ಕನಸೆ ಆಗ್ರಹ

ಕೊಪ್ಪಳ : ರಾಜ್ಯ ಸರ್ಕಾರದ ಮಹತ್ವ್ವಾಕಾಂಕ್ಷಿ ಯೋಜನೆಯಾದ ಅನ್ನ ಭಾಗ್ಯ ಯೋಜನೆ ಕೊಪ್ಪಳ ಜಿಲ್ಲೆಯಲ್ಲಿ ಸಂಪೂರ್ಣ ಹಳ್ಳ ಹಿಡಿದಿದ್ದು ಬಡವರಿಗೆ ಸೇರಬೇಕಾಗಿದ್ದ ೧೩ ನೂರು ಅಕ್ಕಿ ಮತ್ತು ಗೋದಿ ಚೀಲಗಲನ್ನು ಅಕ್ರಮವಾಗಿ ಗಂಜ ವೃತ್ತದಲ್ಲಿ ಇರುವ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದು ಅಕ್ಕಿ ಮತ್ತು ಗೋದಿ ಚೀಲಗಳು ಅವು ಈಗ ಉಳು, ಇಲಿ ಹೆಗ್ಗಣಗಳ ಪಾಲಾಗಿವೆ. ಕಳೆದ ಒಂದು ವರ್ಷದಿಂದ ಹೆಚ್ಚಿನ ಬೆಲೆಗೆ ಮಾರಾಟ ಮಾಡುವು ದುರುದ್ಧೇಶದಿಂದ ಮಣ್ಣು ಪಾಲಾಗಿ ಹೋಗಿವೆ.                ಇಂತಹ ಅಕ್ರಮವಾಗಿ ಸಂಗ್ರಹಿ ಇಟ್ಟಂತಹ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಕೈಗೋಳ್ಳಬೇಕು ಅನ್ನದ ಮಹತ್ವ ಅರಿವಾಗಬೇಕಾದರೆ ಗೋದಾಮಿನ ವ್ಯವಸ್ಥಾಪಕ  ಏಕನಾಥನನ್ನು ಕೂಡಲೇ ಅಮಾನತು ಮಾಡಬೇಕು ಇದರ ವಿರುದ್ಧ ಸಮಗ್ರ ತನಿಖೆ ನಡೆಸಿ ಯ್ಯಾರು ಯ್ಯಾರು ಸ್ಯಾಮಿಲ್ ಆಗಿದ್ದಾರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಕರ್ನಾಕಟ ನವ ನಿರ್ಮಾಣ ಸೇನೆಯಿಂದ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಸಂಘಟನೆಯ ರಾಜ್ಯ ಸಂಚಾಲಕ ವಿಜಯ ಕುಮಾರ ಕವಲೂರು ತಿಳಿಸಿದ್ದಾರೆ ಈ ಸಂದರ್ಭದಲ್ಲಿ ಆನಂದ ಮಡಿವಾಳರ, ಪ್ರಕಾಶ ಮೈದೂರು, ಮರಿಯಪ್ಪ ಮಂಗಳೂರು, ರವಿ ಡೊಳ್ಳಿನ, ಶೇಷಣ್ಣ ಶಹಪೂರ, ಶಿವಪ್ಪ ಗುಡಗೇರಿ, ಮಲ್ಲು ಕೌಜಗೇರಿ, ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

Leave a Reply