ಎಂ.ಎಸ್. ಸವದತ್ತಿ ಅಭಿನಂದನಾ ಗ್ರಂಥಕ್ಕೆ ಲೇಖನ ಆಹ್ವಾನ.

ಕೊಪ್ಪಳ : ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಕೊಪ್ಪಳದ ಶ್ರೀ ಗವಿಸಿದ್ದೆಶ್ವರ ಪ್ರೌಢಶಾಲೆಯ ನಿವ್ರತ್ತ ಶಿಕ್ಷಕರಾದ ಎಂ.ಎಸ್. ಸವದತ್ತಿ ಅವರನ್ನು ಕುರಿತು ಅಭಿನಂದನಾ ಗ್ರಂಥವನ್ನು ಹೊರತರಲು ನಿರ್ಧರಿಸಿದೆ ಎಂದು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ತಿಳಿಸಿದ್ದಾರೆ. 
ಎಂ.ಎಸ್. ಸವದತ್ತಿ ಅವರ ಶಿಷ್ಯರು, ಅವರ ಒಡನಾಡಿಗಳು, ಸಾಹಿತಿಗಳು ಅವರನ್ನು ಕುರಿತು ಲೇಖನವನ್ನು ಹಾಗೂ ಅವರ ಅಪರೂಪದ ಭಾವಚಿತ್ರಗಳನ್ನು ಜೂನ ೦೧ ರ ಒಳಗಾಗಿ ಈ ಕೆಳಗಿನ ವಿಳಾಸಕ್ಕೆ ಕಳುಹಿಸಲು ವಿನಂತಿಸಿಕೊಳ್ಳಲಾಗಿದೆ. 
ಲೇಖನ ಕಳುಹಿಸುವ ವಿಳಾಸ : ಹನುಮಂತಪ್ಪ ಅಂಡಗಿ ಚಿಲವಾಡಗಿ, ಅಧಕ್ಷರು, ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು, ಅಂಚೆ ಪೆಟ್ಟಿಗೆ ಸಂಖ್ಯೆ  ೩೦, ಕೊಪ್ಪಳ  ೫೮೩೨೩೧, ಸನಿಹವಾಣಿ  ೯೦೦೮೯೪೪೨೯೦, 
ನಿಸ್ವಾರ್ಥದ ಉತ್ತುಂಗವೇ ತಾಯಿ – ಹನುಮಂತಪ್ಪ ಅಂಡಗಿ
ಕೊಪ್ಪಳ : ತಾಯಿಯ ಪ್ರೀತಿ, ಮಮತೆ, ಕರುಣೆಗೆ ಸರಿಸಮಾನವಾದುದು ಯಾವುದೂ ಇಲ್ಲ. ಗರ್ಭದಲ್ಲಿರುವ ಮಗುವನ್ನು ನವಮಾಸಗಳವರೆಗೆ ಕಪ್ಪೆ ಚಿಪ್ಪಿನಲ್ಲಿರುವ ಮುತ್ತಿನಂತೆ ಜೋಪಾನವಾಗಿ ಕಾಪಾಡುತ್ತಾಳೆ. ತನ್ನ ಜೀವವನನು ಒತ್ತೆಯಿಟ್ಟು ಮಗುವಿಗೆ ಜನ್ಮ ನೀಡಿ ಪುನರ್ಜನ್ಮ ಪಡೆಯುತ್ತಾಳೆ. ತಾಯಿಯ ಪ್ರೀತಿ, ತ್ಯಾಗ, ಮಮಕಾರ, ಅವರ್ಣನೀಯ. ತನ್ನ ಕರುಳ ಕುಡಿಯಬಗ್ಗೆ ತಾಯಿಗಿರುವ ಕಾಳಜಿ ಅಪಾರ. ತಾನು ಉರಿದು ಬೆಳಕು ನೀಡುವ ದೀಪ, ನಿಸ್ವಾರ್ಥದ ಉತ್ತುಂಗವೇ ತಾಯಿ. ನಮ್ಮೆಲ್ಲರ ಭಾವಕೋಶದ ಜೀವ, ದೈವ ಸ್ವರೂಪಿ, ತ್ಯಾಗ ಮೂರ್ತಿ, ಮiತಾಮಯಿಯೇ ತಾಯಿ. ಸಹನೆಯ ಕಡಲು, ಪ್ರೀತಿಯ ಒಡಲು ತಾಯಿ ಎಂದು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಹೇಳಿದರು.
ಅವರು ರವಿವಾರ ಕೊಪ್ಪಳದಲ್ಲಿ ಪ್ರಗತಿ ಮಹಿಳಾ ಮಂಡಳ ಹಮ್ಮಿಕೊಂಡ ತಾಯಂದಿರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಅಮೇರಿಕಾದಲ್ಲಿನ ಮಕ್ಕಳಿಗೆ ವರ್ಷಕ್ಕೆ ಒಂದು ತಾಯಂದಿರ ದಿನ. ಆ ದಿನ ಮಕ್ಕಳೆಲ್ಲ ತಮ್ಮ ತಾಯಿಗೆ ಶುಭಾಷಯ ಪತ್ರಕೊಟ್ಟು, ಜೊತೆಗೊಂದು ಉಡುಗೊರೆ ನೀಡಿ ಪ್ರೀತಿ ತೋರಿಸುತ್ತಾರೆ. ಆದರೆ ನಮ್ಮಲ್ಲಿ ಪ್ರತಿದಿನವು ತಾಯಂದಿರ ದಿನವೇ ಆಗಿದೆ ಎಂದರು. 
ಪ್ರಗತಿ ಮಹಿಳಾ ಮಂಡಳದ ಅಧ್ಯಕ್ಷರಾದ ಮಮತಾ ಬ. ಕುದರಿಮೋತಿ ಅಧಕ್ಷತೆ ವಹಿಸಿದ್ದರು. ಪ್ರಗತಿ ಮಹಿಳಾ ಮಂಡಳದ ಕಾರ್ಯದರ್ಶಿಗಳಾದ ನೀ ಎಸ್. ಪಾಟೀಲ, ಖಜಾಂಚಿ ಜ್ಯೋತಿ ಎಸ್. ಅಗಡಿ ವೇದಿಕೆಮೇಲೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಾಯಕ ಜೀವಿ ದೇವಿರಮ್ಮರವರನ್ನು ಸನ್ಮಾನಿಸಲಾಯಿತು. ಪತ್ರಕರ್ತೆ ಸಾವಿತ್ರಿ ಮುಜುಮದಾರ, ಹೇಮಲತಾ ನಾಯಕ ಈ ಸಂದರ್ಭದಲ್ಲಿ ಮಾತನಾಡಿದರು. ಸಹ ಖಜಾಂಚಿ ವಿಜಯಾ ಶೆಟ್ಟರ್, ಕಾರ್ಯಕಾರಿ ಸಮಿತಿ  ಸದಸ್ಯರಾದ ವರ್ಷಾ ಮುದಗಲ್, ಸದಸ್ಯರಾದ ಡಾ. ರಾಧಾ ಕುಲಕರ್ಣಿ, ವಿದ್ಯಾ, ಶೈಲಜಾ, ವೈಷ್ಣವಿ ಹುಲಿಗಿ, ಸುನಂದಾ, ಶಾರದಾ ದಾದಮಿ, ಶಾರದಾ ಬಂಗಾರ ಶೆಟ್ಟರ್, ಸುಜಾತಾ ಹಲಗೇರಿ, ರೇಖಾ ಹೆಬ್ಬಾಳ, ಸುಮಾ, ಅನುರಾಧಾ ಬಿಜಕಲ್, ಜ್ಯೋತಿ ವಡ್ಡಟ್ಟಿ, ವಿಜಯಾ ಬಳ್ಳೊಳ್ಳಿ, ವಿನುತಾ ಉಪಸ್ಥಿತರಿದ್ದರು. 
ಭೀಮಾಂಬಿಕಾ ಹಿರೇಮಠ ಪ್ರಾರ್ಥಿಸಿದರು. ಸುಜಾತಾ ಎಸ್. ಮಾಲಿಪಾಟೀಲ ನಿರೂಪಿದರು. ಮಮತಾ ಕುದರಿಮೋತಿ ಸ್ವಾಗತಿಸಿದರು. ವರ್ಷಾ ಮುದಗಲ್ ವಂದಿಸಿದರು. 
Please follow and like us:
error