You are here
Home > Koppal News > ರಾಜ್ಯೋತ್ಸವದ ಪ್ರಯುಕ್ತ ಹಲಗೇರಿ ಗ್ರಾಮದಲ್ಲಿ ಜಾನಪದ ಸಂಜೆ ಮತ್ತು ಚರ್ಚಾ ಸ್ಪರ್ಧೆ

ರಾಜ್ಯೋತ್ಸವದ ಪ್ರಯುಕ್ತ ಹಲಗೇರಿ ಗ್ರಾಮದಲ್ಲಿ ಜಾನಪದ ಸಂಜೆ ಮತ್ತು ಚರ್ಚಾ ಸ್ಪರ್ಧೆ

ಹಲಗೇರಿ ಗ್ರಾಮದಲ್ಲಿ ಕರುನಾಡ ಕಲಿಗಳ ಕ್ರಿಯಾ ವೇದಿಕೆ ಗ್ರಾಮ ಪಂಚಾಯತ ಕಾರ್ಯಲಯ ಹಾಗೂ ಕರ್ನಾಟಕ ರಕ್ಷಣಾವೇದಿಕೆ ಪ್ರವೀಣ ಶೆಟ್ಟಿ ಬಣ ಹಾಗೂ ಸಿರಿಗನ್ನಡ ವೇದಿಕೆ ತಾಲೂಕ ಘಟಕ ಕೊಪ್ಪಳ, ಇವರ ಸಹಯೋಗದಲ್ಲಿ ಜಾನಪದ ಸಂಜೆ ಮತ್ತು ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಪ್ರೌಢಶಾಲೆ & ಕಾಲೇಜು ವಿದ್ಯಾರ್ಥಿಗಳು ಅಖಂಡ ಕರ್ನಾಟಕ ಬೇಕೆಂದು ಪ್ರತಿಪಾದಿಸಿದ್ದು ವಿಶೇಷವಾಗಿತ್ತು. 
ಈ ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕ ಪಂಚಾಯತಯ ಸದಸ್ಯರಾದ ದೇವಪ್ಪ ಎಚ್ ಗುಡ್ಲಾನೂರ ರವರು ನೆರವೆರಿಸಿದರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪರಮೇಶ್ವರಗೌಡ ಬಿ ಪಾಟೀಲರವರು ರಂಗಭೂಮಿ ಕಲೆಯಲ್ಲಿ ಹಲಗೇರಿ ಗ್ರಾಮ ಹಿರಿಮೆಯನ್ನು ಹೊಂದಿದೆ. ಎಂದು ತಿಳಿಸುವುದರ ಜೊತೆಗೆ ಕರ್ನಾಟಕ ನಾಟಕ ರಂಗದ ಇತಿಹಾಸದಲ್ಲಿ  ಮೊಟ್ಟ ಮೊದಲಿಗೆ ಕೃತಕ ಪುರ ನಾಟಕ ಮಂಡಳಿಯನ್ನು ೧೮೭೭ ರಲ್ಲಿ ಸ್ಥಾಪಿಸಿದ ಶಿರಹಟ್ಟಿ ವೆಂಕಟರಾಯರು ಹಲಗೇರಿ ಹನುಮಂತರಾಯ ವಕೀಲರ ಮಗ ಎಂಬುದು ತಿಳಿಸಿದರು. ಮೈಸೂರು ಮಹಾರಾಜರಿಂದ ಸನ್ಮಾನಿಸಲ್ಪಟ್ಟಿದ್ದ ಹಮ್ಮಿಗಿ  ನೀಲಕಂಠಪ್ಪನವರು ರಂಗಭೂಮಿ ರಾಣಿ ಹಾಗೂ ನಟ ಸಾಮ್ರಾಜ್ಞೆ ಸ್ವತ ಗರುಡ ಸದಾಶಿವರಾಯರೇ ವರ್ಣಿಸಿದ್ದಾರೆ. ಕರ್ನಾಟಕ ರಂಗಭೂಮಿಯಲ್ಲಿ ಪ್ರಖ್ಯಾತ ಅನೇಕ ಬಿರುದಗಳನ್ನು ಪಡೆದ ಖಳನಾಯಕ  ಹಲಗೇರಿ ಭೀಮರಾಯ ಇವರಿಗೆ ನಟರತ್ನ ಎಂಬ ಬಿರುದು ನೀಡಿದ್ದು ಹಲಗೇರಿಯ ಕಲೆಗೆ ಹಿಡಿದ ರನ್ನಗನ್ನಡಿಯಾಗಿದೆ. ಇನ್ನೂ ಅನೇಕ ಬಯಲಾಟದ ಕಲಾವಿದರು ನಾಟಕ ರಚನೆಕಾರರು ಹಲಗೇರಿಯ ರಂಗಪ್ರತಿಭೆಗೆ ಸಾಕ್ಷಿಯಾಗಿದೆ ಎಂದು ನುಡಿದರು ವೇದಿಕೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷರು ಸರ್ವಸದಸ್ಯರು ಹಾಗೂ  ಶ್ರೀನಿವಾಸ್ ಎಸ್ ಎಮ್ ರಾಯನಗೌಡ ಪಾಟೀಲ, ದೇವೇಂದ್ರಪ್ಪ ಬಡಿಗೇರ, ಕುಬೇರಪ್ಪ ಗೊರವರ, ಕರವೇ ಜಿಲ್ಲಾಧ್ಯಕ್ಷರು ಪಂಪಣ್ಣ ನಾಯಕ್, ವಿಜಯಕುಮಾರ ಖಾಜಾವಲಿ, ಶಿವನಗೌಡ ವಿ ಪಾಟೀಲ, ಎಸ್.ಡಿ.ಎಮ್.ಸಿ ಅಧ್ಯಕ್ಷರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜೀವನಸಾಬ ಬಿನ್ನಾಳ ರವರಿಂದ ಮೂಡಿಬಂದ ಜಾನಪದ ಸಂಜೆ ಕಾರ್ಯಕ್ರಮ ನೆರೆದ ಪ್ರೇಕ್ಷಕರ ಮನಸೆಳೆಯಿತು. ಅಧ್ಯಕ್ಷೀಯ ಭಾಷಣವನ್ನು ಕರಿಯಪ್ಪ ಡಿ ಹಳ್ಳಿಕೇರಿ ಮಾಡಿದರು. ಸ್ವಾಗತವನ್ನು ಯಲ್ಲಪ್ಪ ಗುಡ್ಲಾನೂರ ಕಾರ್ಯಕ್ರಮವನ್ನು ಪರಮೇಶ ಎಸ್ ಚಿಂತಾಮಣಿಯವರು ನಿರೂಪಿಸಿದರು. ಕರುನಾಡ ಕಲಿಗಳ ಕ್ರೀಯಾ ವೇದಿಕೆಯ ಸದಸ್ಯರು ಕಾರ್ಯಕ್ರಮವನ್ನು ಸಂಘಟಿಸಿದರು
ಇದೇ ಸಂದರ್ಭದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಶರಣಪ್ಪ ಹೂಗಾರ ರವರಿಗೆ ಸನ್ಮಾನಿಸಿ ಗೌರವಿಸಲಾಯಿತು. 

Leave a Reply

Top