ಭೋವಿ ಅಭಿವೃದ್ಧಿ ನಿಗಮ ಶೀಘ್ರ ಕಾರ್ಯರೂಪಕ್ಕೆ ಆಗ್ರಹ-ಬಸವರಾಜ್ ಭೋವಿ.

ಕೊಪ್ಪಳ-16- ಭೋವಿ ಅಭಿವೃದ್ಧಿ ನಿಗಮ ಸ್ಥಾಪಿಸುವುದಾಗಿ ಘೋಷಿಸಿದ್ದ ಸರ್ಕಾರ, ಇದುವರೆಗೂ ಅನುಷ್ಠಾನಕ್ಕೆ ತಂದಿಲ್ಲ, ನಿಗಮ ಸ್ಥಾಪನೆ ಮಾಡವುದಾಗಿ ಬೆಂಗಳೂರಿನಲ್ಲಿ ಸಿಎಂ ಸಿದ್ಧರಾಮಯ್ಯ ಬೃಹತ್ ಭೋವಿ ಸಮಾವೇಶದಲ್ಲಿ ಘೋಷಿಸಿ ಕಳೆದ ಬಜೆಟ್‌ನಲ್ಲಿ ಸುಮಾರು ೨೪ ಕೋಟಿ ರೂ ಹಣ ಮೀಸಲಿಟ್ಟಿದ್ದಾರೆ ಆದರೆ ನಿಗಮ ಇದುವರೆಗೂ ಅನುಷ್ಠಾನಗೊಂಡಿಲ್ಲ ಕೂಡಲೇ ಮುಖ್ಯಮಂತ್ರಿಗಳು ಶೀಘ್ರ ನಿಗಮವನ್ನು ಕಾರ್ಯರೂಪಕ್ಕೆ ತಂದಲ್ಲಿ, ಭೋವಿ ಸಮಾಜವೂ ಕೂಡ ಆರ್ಥಿಕ ಸಬಲತೆ ಸಾಧಿಸಲು ಸಹಕಾರಿಯಾಗಲಿದೆ ಎಂದು ಜಿಲ್ಲಾ ಭೋವಿ ಸಮಾಜದ ಪ್ರಧಾನ ಕಾರ್ಯದರ್ಶಿ ಬಸವರಾಜ್ ಭೋವಿ ಆಗ್ರಹಿಸಿದರು.
ಅವರು ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಶ್ರೀಸಿದ್ಧರಾಮೇಶ್ವರ ಜಯಂತಿ ಆಚರಣೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ ಭೋವಿ ಸಮಾಜದ ಅಭಿವೃದ್ಧಿ ನಿಗಮದ ಬಗ್ಗೆ ಆಶಾಭಾವನೆ ಹೊಂದಲಾಗಿತ್ತು ಆದರೆ ಇನ್ನೂವರೆಗೆ ಕೂಡ ಅನುಷ್ಠಾನಗೊಂಡಿಲ್ಲ, ಭೋವಿ ಜನಾಂಗ
ಶಿಕ್ಷಣ,ಆರ್ಥಿಕತೆ, ಅನೇಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ, ಸಿಎಂ ಸಿದ್ಧರಾಮಯ್ಯನವರು
ಸಮಾವೇಶದಲ್ಲಿ ಮಾತನಾಡುತ್ತ ಭೋವಿ ಸಮಾಜ ನಿರಂತರವಾಗಿ ಸೌಲಭ್ಯಗಳಿಂದ ವಂಚಿತರಾಗಿ ಶೇ ೨೫%
ರಷ್ಟು ಅಭಿವೃದ್ಧಿ ಹೊಂದಬೇಕಾಗಿತ್ತು ಆದರೆ ಕೇವಲ ಶೇ ೪% ಮಾತ್ರ ಅಭಿವೃದ್ದಿ
ಹೊಂದುವಲ್ಲಿ ಸಫಲರಾಗಿದ್ದಿರೆಂದು ಅವರೇ ಹೇಳಿದ್ದಾರೆ,ಕೂಡಲೇ ಮುಖ್ಯಮಂತ್ರಿಗಳು
ನಿಗಮವನ್ನು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಬಸಮ್ಮ ರಾಮಣ್ಣ ಹಳ್ಳಿಗುಡಿ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.  ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್, ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್, ಡಿವೈಎಸ್‌ಪಿ ಶ್ರೀಕಾಂತ್ ಕಟ್ಟಿಮನಿ,    ಪೌರಾಯುಕ್ತ ರಮೇಶ್ ಪಟ್ಟೇದಾರ, ಜಿ.ಪಂ. ಸದಸ್ಯ ಜನಾರ್ಧನ ಹುಲಿಗಿ, ಬೋವಿ ಸಮಾಜದ ಅಧ್ಯಕ್ಷ ಸತ್ಯಪ್ಪ ಬೋವಿ,  ಸಂಚಾಲಕ ನಿಂಗಪ್ಪ ಭೋವಿ, ಯುವವೇದಿಕೆಯ ಯಮನೂರ ಭೋವಿ, ರಾಮಣ್ಣ ಪೂಜಾರ್, ಮಾಸ್ತಿ ಕಟ್ಟಿಮನಿ, ಬಸವರಾಜ್ ವಕೀಲರು, ಸುರೇಶ ಕಿನ್ನಾಳ, ವೆಂಕಟೇಶ ಬಗನಾಳ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Please follow and like us:
error