ರೂ ೩.೫ ಕೋಟಿ ರಸ್ತೆ ಕಾಮಗಾರಿಗೆ ಶಾಸಕರಿಂದ ಭೂಮಿಪೂಜೆ.

ಕೊಪ್ಪಳ-೨೬, ಕ್ಷೇತ್ರದ ಹಂದ್ರಾಳ ಗ್ರಾಮದಲ್ಲಿ ೫೦೫೪ ಜಿಲ್ಲಾ ಮುಖ್ಯರಸ್ತೆಗಳ ಸುಧಾರಣೆ ೨೦೧೪-೧೫ನೇ ಅನುದಾನ ಅಡಿಯಲ್ಲಿ ಮೈನಹಳ್ಳಿ, ಹಂದ್ರಾಳ, ವದಗನಾಳ, ಗ್ರಾಮಗಳ ರೂ.೩.೫ ಕೋಟಿಯ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಶಾಸಕ ಕೆ. ರಾಘವೇಂದ್ರ ಹಿಟ್ನಾಳರವರು

ರಾಜ್ಯದ ಜನಪ್ರೀಯ ಕಾಂಗ್ರೆಸ್ ಸರ್ಕಾರವು ಗ್ರಾಮಗಳ ಅಭಿವೃದ್ಧಿಗೆ ಹೆಚ್ಚು ಅನುದಾನ ನೀಡುತ್ತಿದ್ದು, ಗ್ರಾಮಗಳು ಸರ್ವಾಂಗೀಣ ಅಭಿವೃದ್ಧಿ ಹೊಂದಲು ಸಹಾಯಕವಾಗುತ್ತಿವೆ. ನನ್ನ ಈ ಅವದಿಯಲ್ಲಿ ಪ್ರತಿ ಸಣ್ಣ ಗ್ರಾಮಕ್ಕೆ ರೂ.೫೦ ಲಕ್ಷ ದೊಡ್ಡ ಗ್ರಾಮಗಳಿಗೆ ೧ ಕೋಟಿಗಿಂತ ಹೆಚ್ಚಿನ ಅನುದಾನವನ್ನು ನೀಡಿದ್ದು ಗ್ರಾಮಗಳ ವಿಕಸನಕ್ಕೆ ನಾನು ಹೆಚ್ಚಿನ ಆಧ್ಯತೆ ನೀಡಿದ್ದು ಬರುವ ಆರ್ಥಿಕ ವರ್ಷದಲ್ಲಿ ಕ್ಷೇತ್ರದ ಎಲ್ಲಾ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಕ್ಷೇತ್ರವನ್ನು ಮಾದರಿಯ ಕ್ಷೇತ್ರವನ್ನಾಗಿ ಮಾಡುವೆ ಅಭಿವೃದ್ಧಿ ಕಾರ್ಯಗಳಿಗೆ ಗ್ರಾಮದ ಎಲ್ಲಾ ಜನತೆಗೆ ಕೈಜೋಡಿಸಿ ಗುಣಮಟ್ಟದ ಕಾಮಗಾರಿಗಳನ್ನು ತಗೆದುಕೊಳ್ಳಬೇಕೆಂದು ಕರೆ ನೀಡಿದರು.

Please follow and like us:
error