ನಗರ ಆಶ್ರಯ ಯೋಜನೆ : ವಂತಿಗೆ ಹಣ ಭರಿಸಲು ಸೂಚನೆ

 : ಕೊಪ್ಪಳ ನಗರದಲ್ಲಿ ನಗರ ಆಶ್ರಯ ಯೋಜನೆಯಡಿ ಆಯ್ಕೆಯಾಗಿರುವ ೨೦೦೦ ಅರ್ಹ ಫಲಾನುಭವಿಗಳು ತಲಾ ೩೦,೦೦೦ ರೂ. ವಂತಿಗೆ ಹಣವನ್ನು   ಪಾವತಿಸಬೇಕು ಎಂದು ಕೊಪ್ಪಳ ನಗರಸಭೆ ಪೌರಾಯುಕ್ತ ರಮೇಶ್ ಪಟ್ಟೇದ್ ತಿಳಿಸಿದ್ದಾರೆ. 
  ನಗರ ಆಶ್ರಯ ಯೋಜನೆಗೆ ಆಯ್ಕೆಯಾಗಿರುವ ಫಲಾನುಭವಿಗಳ ಪಟ್ಟಿಯನ್ನು ಕೊಪ್ಪಳ ನಗರಸಭೆಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.  ಆಯ್ಕೆಯಾದ ಅರ್ಹ ಫಲಾನುಭವಿಗಳು ನಗರಸಭೆಯ ಸೂಚನಾ ಫಲಕದಲ್ಲಿ ಲಗತ್ತಿಸಲಾಗಿರುವ ಆಯ್ಕೆಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಖಾತರಿಪಡಿಸಿಕೊಂಡು ೩೦,೦೦೦ ರೂ. ವಂತಿಗೆ ಹಣವನ್ನು ೧೫ ದಿನಗಳೊಳಗಾಗಿ ನಗರಸಭೆ ಕಾರ್ಯಾಲಯಕ್ಕೆ ಡಿ.ಡಿ ಮೂಲಕ ಸಲ್ಲಿಸಬೇಕು ಎಂದು ನಗರಸಭೆ ಪೌರಾಯುಕ್ತರು  ತಿಳಿಸಿದ್ದಾರೆ. 

Leave a Reply