fbpx

ಗಾಂಧಿ ತೇಜೋವಧೆ ಈಗೇಕೆ?

 ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವುದಾಗಿ ಆರೆಸ್ಸೆಸ್ ಸರಸಂಘಚಾಲಕ ಮೋಹನ ಭಾಗವತ್ ಹೇಳಿದ್ದಾರೆ. ಹಿಂದೂ ರಾಷ್ಟ್ರ ಅಜೆಂಡಾದ ಭಾಗವಾಗಿ ಮದರ್ ತೆರೆಸಾ ನಿಂದನೆ ನಡೆದಿದೆ. ಇನ್ನೊಂದೆಡೆ ಹಿಂದೂ ಹೆಣ್ಣು ಮಕ್ಕಳು ಹತ್ತು ಮಕ್ಕಳನ್ನು ಹಡೆಯಬೇಕೆಂದು ಟಿಂಗ ಸಾಧುಗಳು ರ್ಮಾನು ಹೊರಡಿ ಸುತ್ತಿದ್ದಾರೆ. ಪೆರಿಯಾರ ರಾಮಸ್ವಾಮಿ ನಾಯ್ಕರ ವಿಚಾರವಾದದ ಬೆಳಕನ್ನು ನೀಡಿದ ತಮಿಳುನಾಡಿನಲ್ಲಿ ಪೆರುಮಾಳ ಮುರುಗನ್ ಅವರಂಥ ವಿಚಾರವಾದಿ ಸಾಹಿತಿ ಹಲ್ಲೆಗೆ ಗುರಿಯಾಗುತ್ತಿದ್ದಾರೆ. 
            ಜೆಸ್ಟಿನ್ ತಮಿಳು ಟಿವಿ ಚಾನೆಲ್ ಕಚೇರಿ ಎದುರು ಹಿಂದೂ ಮುನ್ನನಿ ಗೂಂಡಾಗಳು ಬಾಂಬ್ ಸೊಓಂೀಟ ಮಾಡಿದ್ದಾರೆ. ಒಂದೇ, ಎರಡೇ ಇಡೀ ದೇಶವ್ಯಾಪಿ ಯಾಗಿ ಜಾತ್ಯತೀತ, ಪ್ರಗತಿಪರ ಪರಂಪರೆಯ ಮೇಲೆ ಸಹಬಾಳ್ವೆಯ ಸಂಸ್ಕೃತಿಯ ಮೇಲೆ ಆಕ್ರಮಣ ನಡೆದಿದೆ. ಭಾರತದ ನೂರಾ ಇಪ್ಪತ್ತೈದು ಕೋಟಿ ಜನರನ್ನು ಹಿಂದುತ್ವದ ಗೂಟಕ್ಕೆ ಕಟ್ಟಿ ಹಾಕಿ ಅವರ ಮೆಲೆ ವರ್ಣಾಶ್ರಮ ಧರ್ಮದ ಜಾತಿ ವ್ಯವಸ್ಥೆಯ ಅಮೇಧ್ಯವನ್ನು ಹಾಕಲು ಷಡ್ಯಂತ್ರ ರೂಪುಗೊಂಡಿದೆ. ಇನ್ನೊಂದೆಡೆ ಇದೇ ್ಯಾಸಿಸ್ಟ್ ಪರಿವಾರಕ್ಕೆ ಸೇರಿದ ಪ್ರಧಾನಿ ಭಾರತವನ್ನು ವಿದೇಶಿ ಕಾರ್ಪೊರೇಟ್ ಕಂಪೆನಿಗಳಿಗೆ ಮಾರಾಟ ಮಾಡುವ ಮಸಲತ್ತು ನಡೆಸಿದ್ದಾರೆ. ಇಂಥ ಅಪಾಯಕಾರಿ ಸನ್ನಿವೇಶದಲ್ಲಿ ಕೆಲವ ರಿಗೆ ಗಾಂಯ ನೆನಪಾ ಗಿದೆ. ಗೋಡ್ಸೆಯ ಗುಂಡಿಗೆ ಬಲಿಯಾಗಿ ಕೊನೆ ಯುಸಿರೆಳೆದು ಆರೂ ವರೆ ದಶಕಗಳ ನಂತರ ಗಾಂಯ ರಾಷ್ಟ್ರಭಕ್ತಿ ಯನ್ನು ಪ್ರಶ್ನಿಸಿರುವ ಪತ್ರಿಕಾ ಮಂಡಳಿಯ ಮಾಜಿ ಅಧ್ಯಕ್ಷ, ಮಾಜಿ ನ್ಯಾಯಾೀಶ ಮಾರ್ಕಂಡೇಯ ಕಟ್ಜೂ ಗಾಂೀಜಿಯನ್ನು ಬ್ರಿಟಿಷ್ ಏಜೆಂಟ್‌ರೆಂದು, ಸುಭಾಶ್ ಚಂದ್ರ ಭೋಸರನ್ನು ಜಪಾನ್ ಏಜೆಂಟ ರೆಂದೂ ಟೀಕಿಸಿದ್ದಾರೆ. ಗಾಂೀಜಿಯನ್ನು ಈ ದೇಶ ಈಗಾಗಲೇ ಮರೆತು ಬಿಟ್ಟಿದೆ. ಗಾಂಧೀಜಿ ಎಂಬಾತ ದೇಶವನ್ನು ವಿಭಜಿಸಿದ ಪಾತಕಿ ಎಂದು ಹೊಸ ಪೀಳಿಗೆಯನ್ನು ನಂಬಿಸಲಾಗುತ್ತಿದೆ. ಗಾಂಧೀಜಿಯನ್ನು ಕೊಂದ ನಾಥೂರಾಮ ಗೋಡ್ಸೆ ಮಹಾನ್ ರಾಷ್ಟ್ರಭಕ್ತ ಎಂದು ಬಿಂಬಿಸಲಾಗುತ್ತಿದೆ. ಇತ್ತೀಚೆಗೆ ಕರ್ನಾಟಕದ ವಿಶ್ವವಿದ್ಯಾಲಯ ವೊಂದರ ಉಪನ್ಯಾಸಕರೊಬ್ಬರಿಗೆ ‘‘ಗೋಡ್ಸೆ ಗಾಂಯನ್ನು ಕೊಂದಿದ್ದು ಸರಿಯಲ್ಲವೇ?’’ ಎಂದು ವಿದ್ಯಾರ್ಥಿಯೊಬ್ಬ ಪ್ರಶ್ನಿಸಿದನಂತೆ. ಆ ಉಪನ್ಯಾಸಕ ಆತಂಕದಿಂದ ಈ ವಿಷಯವನ್ನು ನನಗೆ ಹೇಳಿದ.
ಈಗ ಗಾಂಧೀಜಿಯನ್ನು ಸಮರ್ಥಿ ಸುವ ಯಾರೂ ಬದುಕಿಲ್ಲ. ದೊರೆಸ್ವಾಮಿಯವರಂಥ ಕೆಲವೇ ಗಾಂವಾದಿಗಳಿದ್ದರೂ ಅವರ ದನಿಯೂ ಯಾರಿಗೂ ಕೇಳದಂತೆ ಗೋಡ್ಸೆವಾದಿಗಳ ಆರ್ಭಟದ ಸದ್ದು ದೇಶದೆಲ್ಲೆಡೆ ಕೇಳುತ್ತಿದೆ. ಗಾಂ ಕಲ್ಪನೆಯ ಖಾದಿ ಗ್ರಾಮೋದ್ಯೋಗ ಮಂಡಲಿಯನ್ನೇ ಬಾಬಾ ರಾಮದೇವ ಜೋಳಿಗೆಗೆ ಹಾಕಲು ಹುನ್ನಾರ ನಡೆದಿದೆ. ಇನ್ನೊಂದೆಡೆ ಗಾಂ ವಿಚಾರಧಾರೆ ಯನ್ನು ಎಲ್ಲೆಡೆ ತಲುಪಿಸುವ ಗಾಂ ಭಾವನೆಗಳನ್ನೆ ಸಂಘ ಪರಿವಾರದ ಕೋಮುವಾದಿಗಳು ಆಕ್ರಮಿಸಿ ಕೊಳ್ಳುತ್ತಿದ್ದಾರೆ. ಇಂಥ ಸನ್ನಿವೇಶದಲ್ಲಿ ನಮ್ಮ ಹೋರಾಟ ಯಾರ ವಿರುದ್ಧ ಇರಬೇಕು. ್ಯಾಸಿಸ್ಟರು ಇಡೀ ಭಾರತಕ್ಕೆ ಬೆಂಕಿ ಹಚ್ಚುತ್ತಿರುವಾಗ ಅವರ ವಿರುದ್ಧ ದನಿಯೆತ್ತದ ಕಟ್ಜೂರಂಥವರು ಅನಗತ್ಯವಾಗಿ ಗಾಂಯನ್ನು ಹೀಯಾಳಿಸಿ ವಿವಾದವನ್ನು ಸೃಷ್ಟಿಸುವುದೇಕೇ?
ಗಾಂಧೀಜಿಯನ್ನು ವಿಮರ್ಶಿಸಲೇ ಬಾರದೆಂದಲ್ಲ. ಸ್ವಾತಂತ್ರ ಸಂಗ್ರಾಮದಲ್ಲಿ ಗಾಂ ತಾಳಿದ ನಿಲುವುಗಳ ಬಗ್ಗೆ ಟೀಕೆಗಳಿವೆ. ಭಗತ್ ಸಿಂಗ್ ಗಲ್ಲಿಗೇರು ವಾಗ ಗಾಂಧಿ ತಾಳಿದ ವೌನದ ಬಗೆಗೂ ಆಕ್ಷೇಪಗಳಿವೆ. ಗಾಂಧಿ ಹಿಂದೂವಾದಿ ಯಾಗಿದ್ದರೆಂದು ಆರೋಪಗಳಿವೆ. ಆದರೆ ಹಿಂದೂವಾದಿಯಾಗಿದ್ದ ಗಾಂಧಿಯನ್ನು ಕಟ್ಟಾ ಹಿಂದೂವಾದಿಯಾಗಿದ್ದ ಗೋಡ್ಸೆ ಗುಂಡು ಹಾಕಿ ಕೊಂದಿದ್ದೇಕೇ? ಈ ಪ್ರಶ್ನೆಗೆ ಉತ್ತರ ಬೇಕಾಗಿದೆ. ಗಾಂ ವ್ಯಕ್ತಿತ್ವ ವಿವಾದಾತ್ಮಕವಾಗಿದೆ. ಆದರೆ ಗಾಂಧಿ ಸಂಗಳಂತೆ ಜನಾಂಗ ದ್ವೇಷಿಯಲ್ಲ. ಗಾಂ ಆಪ್ತರಲ್ಲಿ ಗಡಿನಾಡ ಗಾಂಧಿ ಖಾನ್ ಅಬ್ದುಲ್ ಗಪಾರ ಖಾನ್, ವೌಲಾನ ಆಝಾದ್‌ರಂಥವರಿದ್ದರು. ಬಲಪಂಥೀಯ ವಲ್ಲಭ ಬಾಯಿ ಪಟೇಲ್ ಮತ್ತು ಎಡ ಒಲವಿನ ನಾಸ್ತಿಕವಾದಿ ಜವಾಹರ ಲಾಲ್ ನೆಹರೂ ಗಾಂ ಅಕ್ಕಪಕ್ಕದಲ್ಲಿರುತ್ತಿದ್ದರು. ಸ್ವತಂತ್ರ ಭಾರತಕ್ಕೆ ಯಾರು ಪ್ರಧಾನಿಯಾಗಬೇಕೆಂಬ ಪ್ರಶ್ನೆ ಎದುರಾದಾಗ ಗಾಂ ನೆಹರೂರತ್ತ ಒಲವು ತೋರಿಸಿದ್ದು ಚಾರಿತ್ರಿಕ ಸತ್ಯ.
 ಸ್ವತಂತ್ರ ಭಾರತದ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷ ಸ್ಥಾನಕ್ಕಾಗಿ ಹುಡುಕಾಟ ಆರಂಭವಾದಾಗ ಡಾ.ಅಂಬೇಡ್ಕರ್ ಸಮರ್ಥ ವ್ಯಕ್ತಿ ಎಂದು ಅವರ ಹೆಸರನ್ನು ಸೂಚಿಸಿದವರು ಗಾಂಧೀಜಿ. ವೈಚಾರಿಕ ಭಿನ್ನಾಭಿಪ್ರಾಯ ಹೊಂದಿದವರನ್ನು ಗಾಂೀಜಿ ದ್ವೇಷಿ ಸುತ್ತಿರಲಿಲ್ಲ. ಗಾಂಧೀಜಿ ಆಪ್ತರಲ್ಲಿ ಗೋರಾರಂಥ ಕಟ್ಟಾ ನಾಸ್ತಿಕವಾದಿಗಳಿ ದ್ದರು. ಸಬರಮತಿ ಆಶ್ರಮದಲ್ಲಿದ್ದರೂ ಗಾಂಯ ಭಜನೆಗಳಿಗೆ ಗೋರಾ ಹೋಗುತ್ತಿರಲಿಲ್ಲ. ಗಾಂಧೀಜಿ ಜೊತೆಗೆ ಕಮ್ಯುನಿಸ್ಟರಿಗೂ ಜಗಳ ವಿತ್ತು. ಆದರೆ ಪರಸ್ಪರ ಗೌರವಿಸುತ್ತಿದ್ದರು. 1943ರಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದ ಪೂರ್ಣಚಂದ್ರ ಜೋಶಿ ಗಾಂಧಿ ನಿಲುವನ್ನು ಟೀಕಿಸಿ ಗಾಂಧೀಗೆ ಪತ್ರ ಬರೆದರೆ ಅದಕ್ಕೆ ಕೋಪಗೊಳ್ಳದ ಬಾಪು ಸಮಜಾಯಿಷಿ ನೀಡಿ ಉತ್ತರಿಸುತ್ತಿದ್ದರು. ಹೀಗೆ ವೈಚಾರಿಕ ಭಿನ್ನಾಭಿಪ್ರಾಯಗಳನ್ನು ಗಾಂಧಿ ಗೌರವಿಸುತ್ತಿದ್ದರು. ಇಂಥ ಗಾಂಧಿಯನ್ನು ವಿಮರ್ಶಿಸಲು ಯಾರ ಅಭ್ಯಂತರವೂ ಇಲ್ಲ. ಆದರೆ ದೇಶದಲ್ಲಿ ಹಿಂದೂ ರಾಷ್ಟ್ರದ ್ಯಾಸಿಸ್ಟ್ ಕೂಗು ಕಿವಿಗೆ ಅಪ್ಪಳಿಸುತ್ತಿರು ವಾಗ ಗಾಂಯನ್ನು ನಾವೂ ಟೀಕಿಸಲು ಹೊರಟರೆ ಗೋಡ್ಸೆವಾದಿಗಳು ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ. ಈಗ ನಮ್ಮ ಶತ್ರು ಗಾಂಯಾಗಬೇಕಿಲ್ಲ. ಸಂಘಪರಿವಾರದ ಶಕ್ತಿಗಳು ಪ್ರತಿಪಾದಿಸುವ ್ಯಾಸಿಸಂ ನಮ್ಮ ಪ್ರಧಾನ ಶತ್ರು ಎಂಬುದನ್ನು ಮರೆಯಬಾರದು. ಭಾರತ ಹಿಂದೂ ರಾಷ್ಟ್ರವಾಗಬೇಕೆಂದು ಗಾಂಧಿಜಿ ಎಂದೂ ಬಯಸಲಿಲ್ಲ. ಅಂತಲೇ ಆರೆಸ್ಸೆಸ್ ಬಾಪೂಜಿಯ ವಿರುದ್ಧ ಕೆಂಡಕಾರುತ್ತಿತ್ತು. ಚರಿತ್ರೆಯ ಈ ಪುಟಗಳನ್ನು ನೆನಪಿಸಿಕೊಂಡು ನಮ್ಮ ಪ್ರಧಾನ ಶತ್ರು ಯಾರೆಂದು ನಾವು ಗುರುತಿಸಿ ಹೋರಾಡಬೇಕಾಗಿದೆ.
-varthabharati
Please follow and like us:
error

Leave a Reply

error: Content is protected !!