ಮೌಲ್ಯಯುತ ಸಾಹಿತ್ಯ ಬದುಕನ್ನೇ ಬದಲಿಸಬಲ್ಲದು -ಎ.ಪಿ.ಮಧೋಳ

ಕೊಪ್ಪಳ : ನಗರದಲ್ಲಿಯ ತಾಲೂಕ ಪಂಚಾಯತ್ ಸಭಾಂಗಣದಲ್ಲಿ ಕೊಪ್ಪಳ ಜಿಲ್ಲಾ ತಿರಳ್ಗನ್ನಡ ಕ್ರಿಯಾ ಸಮಿತಿ, ಸಾಹಿತ್ಯ ಸಂಗಮ ವೇದಿಕೆ, ಶ್ರೀ ವರಸಿದ್ದಿವಿನಾಯಕ ಗ್ರಾಮೀಣ ಶಿಕ್ಷಣಾಭಿವೃದ್ದಿ ಕಲ್ಯಾಣ ಸಂಸ್ಥೆ (ರಿ), ಶ್ರೀ ನಿಮಿಷಾಂಬ ಮತ್ತು ವಿಶಾಲ ಪ್ರಕಾಶನ ಇವುಗಳ ಸಂಯುಕ್ತಾಶ್ರಯದಲ್ಲಿ ಶ್ರೀನಿಮಿಷಾಂಬ ಪ್ರಕಾಶನದ ದಶಮಾನೋತ್ಸವ ನಿಮಿತ್ಯವಾಗಿ ಶ್ರೀನಿವಾಸ ಚಿತ್ರಗಾರರ ೬ ನೇ ಕೃತಿ ಕರುನಾಡ ಸಿರಿ “ಮಕ್ಕಳ ಹಾಡುಗಳು -ಬಿಡುಗಡೆ, ಕವಿಗೋಷ್ಠಿ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು ಈ ಸಮಾರಂಭದ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಎ.ಪಿ. ಮುಧೋಳರವರು ಮಾತನಾಡುತ್ತಾ ಮೇಲಿನಂತೆ ಹೇಳಿ ಇಂದಿನ ಬದಲಾಗುತ್ತಿರುವ ವೇಗದ ಜೀವನದಲ್ಲಿ ಕೊಂಚ ನೆಮ್ಮದಿ ಜಾಗೃತಿ ಲವಲವಿಕೆ ಮೂಡಿಸಿ ತನ್ಮೂಲಕ ಬದುಕಿಗೆ ಹತ್ತಿರವಾದ ಕ್ರೀಯಾಶೀಲ ಸಾಹಿತ್ಯ ಬರೆದಲ್ಲಿ ಅದು ಸಮಾಜ ಮುಖಿಯಾಗಿ ಜನಮದಲ್ಲಿ ನೆಲೆಯಾಗಿ ಅವರ ಬದುಕಿನಲ್ಲಿ ನೆಲೆಯೂರಿ ಅವರ ಬದುಕಿನ ರೀತಿಯನ್ನೇ ಬದಲಿಸಬಲ್ಲ ಶಕ್ತಿ ಹೊಂದಿದೆ ಎಂದು ಮಾತನಾಡಿದರು.   
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಇಂದಿರಾ ಭಾವಿಕಟ್ಟಿ ಯವರು ಬರೆಯುವವರ ಸಂಖ್ಯೆ ಹೆಚ್ಚಾದರಷ್ಟೆ ಸಾಲದು ಓದುಗರ ಸಂಖ್ಯೆ ಕೂಡಾ ಹೆಚ್ಚಾಗಬೇಕೆಂದರು ಕವಿ ಬರೆದ ಸಾಹಿತ್ಯ ಬದುಕಿಗೆ ಆಧಾರವಾಗುವಂತಿದ್ದರೆ ಪ್ರತಿಯೋರ್ವ ವ್ಯಕ್ತಿಕೂಡಾ ಸಾಹಿತ್ಯದತ್ತ ಒಲವು ತೋರುತ್ತಾರೆ ಅಂಥಹ ಸಾಹಿತ್ಯ ಹೊರಬರಬೇಕೆಂದು ಕರೆಕೊಟ್ಟರು. 
ಕರುನಾಡಸಿರಿ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಶಿವಕುಮಾರ ಪೂಜಾರರವರು ಮಕ್ಕಳ ಸಾಹಿತ್ಯ ಪಾವಿತ್ರ್ಯತೆಯ ಸಂಕೇತ ಸರ್ವವಿಧದ ಪಾವಿತ್ರ್ಯತೆ ಇರುತ್ತದೆ ಅಂಥ ಸಾಹಿತ್ಯ ರಚನೆ ತುಂಬಾ ಕಷ್ಟಕರ ಅಂತದನ್ನು ರೂಡಿಸಿಕೊಂಡು ಕೃತಿಯಿಂದ ಕೃತಿಗೆ ಗಮನಾರ್ಹ ಬೆಳವಣಿಗೆ ಹೊಂದಿ ಸಾಧನೆ ಮಾಡುವಲ್ಲಿ ಜಿಲ್ಲೆಯ   ಚಿತ್ರಗಾರರವರು ಉತ್ತಮ ಮಕ್ಕಳ ಸಾಹಿತಿಯಾಗಿ ಹೊರಹೊಮ್ಮಿದ್ದಾರೆ ಇದು ಜಿಲ್ಲೆಗೆ ಹೆಮ್ಮೆ ತರುವ ವಿಷಯವಾಗಿದೆ ಎಂದರು. 
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಮಾತನಾಡಿದ ಜಿ.ಎಸ್ ಗೋನಾಳರವರು ಸಾಹಿತ್ಯ ಕೇವಲ ನಾಲ್ಕು ಗೋಡೆಗಳ ಮಧ್ಯೆ ಇರದೆ ಹೊರಗೆ ಬರಬೇಕಾಗಿದೆ.  ಆಗಲೇ ಅದರ ಮಹತ್ವ ಜನತೆಗೆ ತಿಳಿಯುತ್ತದೆ. ಜನಮನದಲ್ಲಿ ನೆಲೆಯೂರುವಂತಹ ಅನೇಕ ಪ್ರತಿಭೆಗಳು ಗ್ರಾಮೀಣ ಭಾಗಗಳಲ್ಲಿವೆ. ಅವರಲ್ಲಿಯ ಉತ್ತಮ ಬರಹಗಳನ್ನು ನಮ್ಮ ವಿಶಾಲ ಪ್ರಕಾಶನದಿಂದ  ಹಂತ ಹಂತವಾಗಿ ಹೊರತರುವ  ಯೋಜನೆ  ಇದೆ. ಆಸಕ್ತರು ಸಂಪರ್ಕಿಸಬಹುದೆಂದು ಮತ್ತು ಹೆಚ್ಚು ಅಧ್ಯಾಯನ ಮಾಡಿ ಸಮಾಜೋಪಯೋಗಿ ಸಾಹಿತ್ಯವನ್ನು ರಚಿಸಬೇಕೆಂದರು.   
ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದ ಡಾ. ವ್ಹಿ.ಬಿ ರಡ್ಡೇರ ಅವರು ಮಾತನಾಡಿ ನಮ್ಮ ಉತ್ತರ ಭಾಗದ ಕಾವ್ಯಧ್ವನಿ, ರಾಜ್ಯದ ಧ್ವನಿಯಾಗಬೇಕು. ನಮ್ಮಲ್ಲಿ ಪರಸ್ಪರ ಸಹಕಾರ, ಪ್ರೋತ್ಸಾಹ ಮೆಚ್ಚುಗೆ ಒಮ್ಮತವಾಗಿ ಹೊರ ಹೊಮ್ಮಿದಲ್ಲಿ  ದಕ್ಷಿಣದವರಗಿಂತ ಹೆಚ್ಚು ಸದೃಡ ಕಾವ್ಯಗಳು ಬರುತ್ತವೆ. ಕವಿಗಳು ರಾಜ್ಯಾದ್ಯಂತ ಗುರತಿಸುವಂತಾಗುತ್ತಾರೆ. ಈ ನಿಟ್ಟಿನಲ್ಲಿ ಇಂತಹ ಕ್ರೀಯಾ ಶೀಲ ಸಂಘಟನೆಗಳ ಕೆಲಸ ಮೆಚ್ಚುವಂತಹದು ಎಂದರು. ಮತ್ತೋರ್ವ ಹಿರಿಯ ಸಾಹಿತ್ಯ ವಿಠ್ಠಪ್ಪ ಗೋರಂಟ್ಲಿ ಕನ್ನಡ ಪರ ಅಭಿವೃದ್ದಿಗಳಾಗುವಲ್ಲಿ ಇಂತಹ ಸಂಘಟನೆಗಳ ಪಾತ್ರ ಬಹಳ ಮುಖ್ಯವಾಗಿದೆ. ಎಲೆಮರೆಯ ಕಾಯಿಯಾಗಿ ಅಲ್ಲಿಯೇ ಉಳಿದು ಹೋಗುವ ಅಪರೂಪದವರನ್ನು ಗುರುತಿಸಿ ಸನ್ಮಾನಿಸಿದುದು ಶ್ಲಾಘನೀಯ ಇದು ಅವರಿಗೆ ಪೌಷ್ಠಿಕ ಆಹಾರದಂತೆ ಬೌದ್ಧಿಕ ಶಕ್ತಿ ವರ್ಧನೆ ಮಾಡಿ ಇನ್ನೂ ಹೆಚ್ಚು ಹೆಚ್ಚು ಕ್ರೀಯಾಶೀಲರಾಗಿರುವಂತೆ ಮಾಡಬಲ್ಲದು ಎಂದರು. ಮತ್ತೋರ್ವ ಹಿರಿಯ ಸಾಹಿತಿ ಡಾ. ಮಹಾಂತೇಶ ಮಲ್ಲನಗೌಡರು ಮಾತನಾಡಿ ಇಂದು ಮಕ್ಕಳು ಕಡೆಗಣಿಸಲ್ಪಡುತ್ತಿದ್ದಾರೆ. ಅವರ ಸಾಹಿತ್ಯ ಕೂಡಾ ಕೆಲವಡೆ ಮರೆಯಾಗುತ್ತಿದೆ ಇಂದು ಮಕ್ಕಳಿಗಾಗಿ ಅಕಾಡಮಿಗಳು ಸಂಘ ಸಂಸ್ಥೆಗಳು ವೇದಿಕೆಗಳು ಹೆಚ್ಚು ದುಡಿಯಬೇಕಾಗಿದೆ. ಅವರ ರೀತಿ ನೀತಿಗಳ ಬದಲಾವಣೆಗಾಗಿ ಮಕ್ಕಳ ಸಾಹಿತ್ಯ ರಚನೆ ತುಂಬಾ ಅವಶ್ಯಕವಾಗಿದೆ ಈ ದಿಸೆಯಲ್ಲಿ  ಶ್ರೀನಿವಾಸ ಚಿತ್ರಗಾರರ ಕರುನಾಡ ಸಿರಿ, ದಿಟ್ಟ ಹೆಜ್ಜೆ ಇಟ್ಟಿದೆ ಎಂದರು. 
ವೇದಿಕೆಯ ಮೇಲೆ ಕೆ.ಆರ್. ಕುಲಕರ್ಣಿ ಸಂಗಮೇಶ ಡಂಬಳ, ಪರಶುರಾಮ ಚಿತ್ರಗಾರ, ವೀರಯ್ಯ ಜಡಿಮಠ, ಶಿವಲಿಂಗಪ್ಪ, ಫಕೀರಪ್ಪ ವಜ್ರಬಂಡಿ, ಮೊದಲಾದವರು ಉಪಸ್ಥಿತರಿದ್ದರು  ಇದೇ ಸಮಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹೇಶ ಬಳ್ಳಾರಿ, ಬಸವರಾಜ ಲಕ್ಕುಂಡಿ ವೀರಭದ್ರಪ್ಪ ಶಿವಶಿಂಪಿ, ಪುಷ್ಪಲತಾ ಏಳಭಾವಿ ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಎ.ಪಿ.ಅಂಗಡಿ, ಗವಿಸಿದ್ದಪ್ಪ ಬಾರಕೇರ,ಎಸ್.ಎಮ್.ಕಂಬಾಳಿಮಠ, ಕೋಮಲಾ ಕುದರಿಮೋತಿ, ಶಿಲ್ಪಾ ರಮೇಶ ಕುರಿ, ಗಂಗಾಧರ ಖಾನಾಪೂರ, ಶಾಂತಾದೇವಿ ಹಿರೇಮಠ, ಗಣೇಶ ಹೊಸೂರು, ಮಹೆಮ್ಮುದ್ ಮಿಯಾ, ಬಸವರಾಜ ಕುಂಬಾರ ಮತ್ತಿತರರು ಕವನ ವಾಚನ ಮಾಡಿದರು. 
ಪ್ರಾರ್ಥನೆಯನ್ನು ಲಚ್ಚಪ್ಪ ಹಳೆಪೇಟೆ, ಪರಶುರಾಮ ಬಣ್ಣದ, ನೆರವೇರಿಸಿದರು. ರಾಜಶೇಖರ ಅಂಗಡಿಯವರು, ಸ್ವಾಗತಿಸಿದರು.  ನಾಗರಾಜ ಡೊಳ್ಳಿನ ಕಾರ್ಯಕ್ರಮ ನಿರೂಪಣೆಯನ್ನು ಮಾಡಿದರು ಶ್ರೀನಿವಾಸ ಚಿತ್ರಗಾರ ವಂದನಾರ್ಪಣೆಯನ್ನು ಮಾಡಿದರು.  
Please follow and like us:
error