ಗವಿಸಿದ್ಧ ಎನ್ ಬಳ್ಳಾರಿ ಪುಣ್ಯ ಸ್ಮರಣೆಯ ಕಾರ್ಯಕ್ರಮ

ಕೊಪ್ಪಳ : ಕೊಪ್ಪಳದ ನಾಡಕವಿ ಗವಿಸಿದ್ಧ ಎನ್ ಬಳ್ಳಾರಿಯವರ ೧೦ ನೇ ಪುಣ್ಯಸ್ಮರಣೆಯ ಅಂಗವಾಗಿ ಕವಿಗೋಷ್ಠಿ ಹಾಗೂ ಉಪನ್ಯಾಸ ಕಾರ್ಯಕ್ರಮವು ದಿನಾಂಕ ೩೦-೦೩-೨೦೧೪ ರಂದು ರವಿವಾರ ಮುಂಜಾನೆ ೧೧ ಗಂಟೆಗೆ ಡಾ.ಜ.ಚ.ನಿ. ಭವನ, ಫಿರ್ದೋಸ್ ನಗರ (ಡಾಆರ್.ಎಂ. ಪಾಟೀಲರ ಮನೆ ಮೇಲೆ) ಜರುಗಲಿದೆ. ಹಲವಾರು ಕವಿಗಳು ಕವಿಗೋಷ್ಠಿಯಲ್ಲಿ ಕವಿತೆಯನ್ನು ವಾಚನ ಮಾಡಲಿದ್ದಾರೆ. ಕವಿಗೋಷ್ಠಿ ಅಧ್ಯಕ್ಷತೆ ಹಾಗೂ ಕವಿ ಗವಿಸಿದ್ಧ ಎನ್ ಬಳ್ಳಾರಿಯವರ ಕಾವ್ಯ ಕುರಿತು ಗುಲಬುರ್ಗದ ಖ್ಯಾತ ಕನ್ನಡ ಮತ್ತು ಹಿಂದಿ ಕವಿ ಡಾ.ಕಾಶೀನಾಥ ಅಂಬಲಗಿ ಮಾತನಾಡಲಿದ್ದಾರೆ.  ಸಾಹಿತ್ಯಾಸಕ್ತರು ಈ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಗವಿಸಿದ್ಧ ಎನ್ ಬಳ್ಳಾರಿ ವೇದಿಕೆಯ ಸಂಚಾಲಕರಾದ ಎಚ್.ಎಸ್.ಪಾಟೀಲ, ಅಲ್ಲಮಪ್ರಭುಬೆಟ್ಟದೂರ, ಡಾ.ಪ್ರಕಾಶ ಬಳ್ಳಾರಿ ತಿಳಿಸಿದ್ದಾರೆ.
Please follow and like us:
error

Related posts

Leave a Comment