ಬಿಜೆಪಿ ಸಚಿವರು ಶಾಸಕರು ಆಧುನಿಕ ಭಸ್ಮಾಸುರರು – ಕೆ. ರಾಘವೇಂದ್ರ ಹಿಟ್ನಾಳ

ಕೊಪ್ಪಳ : ೩೦, ನಗರದ ೧೧ ನೆ ವಾರ್ಡಿನ ಅಂಬೇಡ್ಕರ್  ವೃತ್ತದ ಹತ್ತಿರ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಅಧಿಕಾರದ ದಾಹ ಹಣದ ವ್ಯಾಮೂಹಕ್ಕೆ ಬಲಿಯಾದ ಬಿಜೆಪಿಯ ಸಚಿವರು ಶಾಸಕರು ತಮ್ಮ ತಲೆ ಮೇಲೆ ಕ್ಯ ಇಟ್ಟುಕೊಂಡು ಭಸ್ಮರಾಗುವ ಕಾಲ ಸನ್ನಿದವಾಗಿದೆ. ಬರುವ ೫-೫-೨೦೧೩ ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ನಾಡಿನ ಪ್ರಭುದ್ದ ಮತದಾರರು ಕಾಂಗ್ರೆಸ ಪಕ್ಷಕ್ಕೆ ಮತ ಚಲಾಯಿಸಿ ಭರ್ಜರಿ ಜಯಬೇರಿ ಗೊಳಿಸಲಿದ್ದಾರೆ. ಸ್ಥಳಿಯ ಶಾಸಕರಾದ ಕರಡಿಯವರು ಹಣದ ದರ್ಪದಿಂದ ಕೇವಲ ಚುನಾವಣೆಯ ಕೊನೆಯ ೩ ದಿನದಲ್ಲಿ ಹಣ ದಿಂದ ಮತವನ್ನು ಕೊಂಡುಕೊಳ್ಳುತ್ತೆನೆಂದು ಬೀಗುತ್ತಿದ್ದು. ಕೊಪ್ಪಳ ವಿಧಾನಸಭಾ ಕ್ಷೇತ್ರದ ಜನತೆ ೩೦ ದಿನಗಳ ಮೊದಲೆ ನನಗೆ ಆರ್ಶಿವಾದ ಮಾಡಿರುವುದು  ಮರೆತಿದ್ದಾರೆ. ಇವರ ಮೂರು ದಿನಗಳಿಗೆ ಕ್ಷೇತ್ರದ ಮತದಾರರು ದಿಕ್ಕರಿಸಿ ಕಾಂಗ್ರೇಸ ಪಕ್ಷದ ಅಭ್ಯರ್ಥಿಯಾದ ನನ್ನನ್ನು ಬರ್ಜರಿ ಜಯಬೇರಿ ಗೊಳಿಸಲಿದ್ದಾರೆಂದು ಶಾಸಕ ಸಂಗಣ್ಣನ ವಿರುದ್ದ ಹರಿಹಾಯ್ದರು. ಈ ಸಂದರ್ಭದಲ್ಲಿ ಜುಲ್ಲು ಖಾದರಿ ಹೆಚ್.ಎಲ್ ಹಿರೇಗೌಡರ್, ಈಸಪ್ಪ ಮಾದಿನೂರ, ಇಂದಿರಾ ಬಾವಿಕಟ್ಟಿ, ಅಮ್ಜದ್ ಪಟೇಲ್, ಕಾಟನ್ ಪಾಷಾ, ಶರಣಪ್ಪ ಸಜ್ಜನ, ಮುತ್ತುರಾಜ ಕುಷ್ಟಗಿ, ಜುಬೇರ ಹುಸೆನಿ, ಯಂಕನಗೌಡ್ರ ಹಿರೆಗೌಡ್ರ, ಎ.ವಿ. ಕಣವಿ ವಕೀಲರು, ಮಹೇಸ ಬಜೆಂತ್ರಿ, ಅನಿಕೇತ ಅಗಡಿ, ಶಿವಕುಮಾರ ಶೆಟ್ಟರ, ರಾಜು ನಾಲ್ವಾಡ, ಗುರುರಾಜ ಹಲಗೆರಿ, ಮೌಲಾಹುಸೇನ ಜಮಾದಾರ, ೧೧ ನೆ ವಾರ್ಡಿನ ಎಲ್ಲಾ ಗುರು ಹಿರಿಯರು ಕಾಂಗ್ರೆಸ ಪಕ್ಷದ ಕಾರ್ಯಕತ್ರು ಉಪಸ್ಥಿತರಿದ್ದರೆಂದು ಕಾಂಗ್ರೆಸ ವಕ್ತಾರ ಅಕ್ಬರ ಪಾಷಾ ಪಲ್ಟನ್ ತಿಳಿಸಿದ್ದಾರೆ. 

Related posts

Leave a Comment