You are here
Home > Koppal News > ಹಿಂದಿ ದಿನಾಚರಣೆ.

ಹಿಂದಿ ದಿನಾಚರಣೆ.

ಕೊಪ್ಪಳ-17- ನಗರದ ಶ್ರೀಮತಿ ಶಾರದಮ್ಮ ವಿ ಕೊತಬಾಳ ಬಿ.ಬಿ.ಎಂ, ಬಿ.ಸಿ.ಎ ಹಾಗೂ ಬಿ.ಕಾಂ ಮಹಾವಿದ್ಯಾಲಯಲ್ಲಿ ಇತ್ತೀಚಿಗೆ  ಹಿಂದಿ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಾಧ್ಯಾಪಕ ದಯಾನಂದ ಸಾಳಂಕಿ ದೀಪ ಬೆಳಗಿಸುದರ ಮೂಲಕ  ಮಾತನಾಡಿ ಹಿಂದಿ ನಮ್ಮ ರಾಷ್ಟ್ರಭಾಷೆಯಾಗಿದ್ದು  ತನ್ನದೇ ಆದ ಸ್ವಂತಿಕೆ ಹಾಗೂ ತತ್ವ ಸಿದ್ಧಾಂತವನ್ನು ಹೊಂದಿರುತ್ತದೆ. ಮಾತೃಭಾಷೆಯಂತೆ ಈ ಭಾಷೆಯನ್ನು ಗೌರವಿಸಬೇಕೆಂದು ಕರೆ ನೀಡಿದರು. ಜೊತೆಗೆ  ಹಿಂದಿ  ಸಾಹಿತ್ಯದ ಉಗಮ ವಿಕಾಸ ಕುರಿತು ಉಪನ್ಯಾಸ ನೀಡಿದರು. ಆಧ್ಯಕ್ಷತೆ ವಹಿಸಿ ಪ್ರಾಚಾರ್ಯ ರಾಜರಾಜೇಶ್ವರ ರಾವ್ ಮಾತನಾಡಿದರು. ವೇದಿಕೆಯಲ್ಲಿ ಆರ್.ವಿ ವಡಕಿ, ಪ್ರೊ ಸಿ.ವಿ ಕಲ್ಮಠ ಉಪಸ್ಥಿತರಿದ್ದರು. ಪ್ರಾಸ್ತಾವಿಕ ಹಿಂದಿ ಉಪನ್ಯಾಸಕ ನಾಗರಾಜ ಮಠದ, ಸ್ವಾಗತ ಕುಮಾರಿ ಅಭಿಶ್ರೀ, ವಂದನಾರ್ಪಣೆ ಮೋಹನ ನೆರವೇರಿಸಿದರು.

Leave a Reply

ಜಿಲ್ಲೆಯಲ್ಲಿ ಶಿಕ್ಷಣ ಹಕ್ಕು ಕಾಯ್ದೆ ಸಮರ್ಪಕ ಜಾರಿಗೆಗಾಗಿ -ಎಸ್.ಎಫ್.ಐ ಒತ್ತಾಯ.

ಮೇಲ್ಕಾಣಿಸಿದ ವಿಷಯದನ್ವಯ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ) ಜಿಲ್ಲಾ ಸಮಿತಿಯು ಈ ಮೂಲಕ ತಮ್ಮ ಗಮನಕ್ಕೆ ತರಬಯಸುವುದೇನೆಂದರೆ ಮತ್ತು ಒತ್ತಾಯಿಸುವುದೇನೆಂದರೆ ಈಗಾಗಲೇ ಕರ್ನಾಟಕ ಸರಕಾರದಿಂದ ಜಾರಿಗೆಯಾಗಿರುವ ಆರ್.ಟಿ.ಇ ಕಾಯ್ದೆಯಿಂದಾಗಿ ಹಾಗೂ ೧೯೮೩ ಶಿಕ್ಷಣ ಕಾಯ್ದೆಯಿಂದಾಗಿ ಅನೇಕ ಬಡ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವ ಕನಸು ಕಾಣುತ್ತಿದ್ದಾರೆ. ಆದರೆ ಜಿಲ್ಲೆಯಲ್ಲಿ ಅನೇಕ ಖಾಸಗಿ ಶಾಲೆಗಳು ಸರ್ಕಾರದ ಈ ಎರಡು ಮಹತ್ವಪೂರ್ಣ ಶಿಕ್ಷಣ ಕಾಯ್ದೆ ನಿಯಮಗಳನ್ನು ಗಾಳಿಗೆ ತೂರಿ ಶಿಕ್ಷಣವನ್ನು ವ್ಯಾಪಾರೀಕರಣ ದೃಷ್ಟಿಯಿಂದ ಶಾಲೆ ನಡೆಸುತ್ತಿರುವುದು ಮೇಲ್ನೋಟಕ್ಕೇ ಸಾಬೀತಾಗುತ್ತಿದೆ. ಪಾಲಕರಿಂದ ಮನಸೋ ಇಚ್ಚಿ ಶುಲ್ಕ ವಸೂಲಿ ಮಾಡುವ ಶಾಲೆಗಳು ಕನಿಷ್ಟ ಪಕ್ಷ ಆರ್.ಟಿ.ಇ ನಿಯಮಾನುಸಾರ ೪*೬ ರ ಸೈಜಿನ ಫ್ಲೆಕ್ಷ್‌ನಲ್ಲಿ ಶುಲ್ಕದ ಪಟ್ಟಿ, ಶಾಲಾ ಮಾದ್ಯಮ, ಸೀಟು ಹಂಚಿಕೆ, ಹಾಗೂ ಮೈದಾನ ಮತ್ತು ಶೌಚಾಲಯ ಲಬ್ಯತೆ ಮಹಿತಿಗಳ ಫಲಕವನ್ನು ಕೂಡಾ ಅಳವಡಿಸದಿರುವುದು ದುರದೃಷ್ಟಕರ ಸಂಗತಿಯಾಗಿದೆ. ಹಾಗೂ ಈ ಬಗ್ಗೆ ಸರ್ಕಾರದ ಶಿಕ್ಷಣ ಅಧಿಕಾರಿಗಳಾದ ಡಿಡಿಪಿಐ ಹಾಗೂ ಕ್ಷೇತ್ರ ಶಿಕ್ಷಣ ಅಧಿಕಾರಿಗಳು ಕೂಡಾ ಮೌನ ವಹಿಸಿಖಾಸಗಿ ಶಾಲೆಗಳ ಈ ಶಿಕ್ಷಣ ವ್ಯಾಪಾರೀಕರಣದ ದರ್ಬಾರಿಗೆ ಸಾಥ್ ನಿಡಿದಂತಾಗಿದೆ. ಕಡ್ಡಾಯ ಶಿಕ್ಷಣ ಆರ್.ಟಿ.ಇ ನಿಯಮಗಳ ಬಗ್ಗೆ ಪಾಲಕರ ಜಾಗೃತಿ ಸಭೆಗಳು ಖಾಸಗಿ ಶಾಲಾ ಮುಖ್ಯಸ್ಥರ ಹಾಗೂ ಆಡಳಿತ ಮಂಡಳಿಗಳ ಸಭೆಗಳು ಹಾಗೂ ವಿದ್ಯಾರ್ಥಿಗಳು ಮತ್ತು ಜನಜಾಗೃತಿ ಸಭೆಗಳನ್ನು ನಡೆಸಬೇಕಾಗಿರುವ ಅಧಿಕಾರಿಗಳು ಜಿಲ್ಲೆಯಲ್ಲಿ ಕಣ್ಣಿದ್ದು ಕುರುಡರಂತೆ ಜಾಣ ಕುರುಡು ಪ್ರದರ್ಶನ ಮಾಡುತ್ತಿದ್ದಾರೆ.
ಮುಂದುವರೆದಂತೆ ಜಿಲ್ಲೆಯಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಟ್ಯೂಷನ್ ಸೆಂಟರ್‌ಗಳು ಬೇಸಿಗೆ ತರಬೇತಿ ಶಿಭಿರಗಳು ಹಾಗೂ ಮನೆಪಾಠಗಳು ಮತ್ತು ಕೋಚಿಂಗ್ ಸೆಂಟರ್‌ಗಳು ಪಾಲಕರ ಜೇಬಿಗೆ ಹಗಲು ದರೋಡೆ ಮಾಡುತ್ತಿರುವುದು ನಮ್ಮ ಅಧಿಕಾರಿಗಳ ಕಣ್ಣಿಗೆ ಕಾಣದಂತಾಗಿದೆ. ಇಂತಹ ಮೇಲಿನ ಆರ್.ಟಿ.ಇ ಹಾಗೂ ಶಿಕ್ಷಣ ಕಾಯ್ದೆ ಉಲ್ಲಂಘನೆಯಾಗುವ ಶಿಕ್ಷಣ ಸಂಸ್ಥೆಗಳ ಮೇಲೆ ಕ್ರಮ ಕೈಗೊಳ್ಳಬೇಕಾಗಿರುವ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರ (ಡಿ.ಎಲ್.ಇ.ಆರ್.ಎ) ನೆಪಮಾತ್ರಕ್ಕೆ ನವೆಂಬರ್ ತಿಂಗಳಲ್ಲಿ ಸಭೆ ನಡೆಸಿ ಮತ್ತೆ ಜಿಲ್ಲೆಯಲ್ಲಿ ತನ್ನ ಅಸ್ಥಿತ್ವವನ್ನೇ ಮರೆತಂತಾಗಿದೆ. ಈಗಾಗಲೇ ೨೦೧೫-೧೬ರ ಶೈಕ್ಷಣ ವರ್ಷ ಆರಂಭವಾಗಿ ದಾಖಲಾತಿ ಪ್ರಕ್ರಿಯೆಯೂ ಕೂಡಾ ಆರಂಭವಾಗಿರುವುದರಿಂದ ಮೇಲಿನ ಸಮಿತಿಯ ಕೂಡಲೇ ಸಭೆ ನಡೆಸಿ ಮೇಲಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡತಕ್ಕದ್ದು. ಮತ್ತು ಈ ಹಿಂದೆ ಜಿಲ್ಲೆಯಲ್ಲಿ ಕೊಪ್ಪಳ ನಗರದ ಟ್ರಿನಿಟ್ ಪಬ್ಲಿಕ್ ಶಾಲೆಯು ಆರ್.ಟಿ.ಇ ನಿಯಮಗಳನ್ನು ಉಲ್ಲಂಘನೆ ಮಾಡಿ ಎಲ್.ಕೆ.ಜಿ ಯುಕೆಜಿ ಮತ್ತು ಬೇಬೀ ಕ್ಲಾಸ್ ವಿದ್ಯಾರ್ಥಿಗಳಿಗಾಗಿ ಪ್ರವೇಶ ಪರೀಕ್ಷೆ ನಡೆಸಿ ಶಿಕ್ಷಣ ಅಕ್ರಮದಲ್ಲಿ ಭಾಗಿಯಾಗಿರುವುದು ಹಾಗೂ ಹೆಚ್ಚುವರಿ ಶುಲ್ಕ ಪಡೆದಿರುವುದು ಸಾಬೀತಾಗಿದ್ದರೂ ಈ ವರೆಗೂ ಯಾವುದೇ ಕ್ರಮ ಜರಿಗಿಸಿರುವಿದಿಲ್ಲ ಈ ಬಗ್ಗೆ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರ ಸಮಿತಿ ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳದೇ ಹೋದರೆ ಸಾರ್ವಜನಿಕ ಹಾಗೂ ವಿದ್ಯಾರ್ಥಿ ಸಮೂಹಕ್ಕೆ ಸಮಿತಿಯ ಮೇಲೆ ಹಾಗೂ ಶಿಕ್ಷಣ ಕಾಯ್ದೆಗಳ ಮೇಲೆ ಭರವಸೇಯೇ ಹುಸಿ ಹೋದಂತಾಗುತ್ತದೆ. ಹಾಗಾಗಿ ಮೇಲ್ಕಂಡಂತೆ ಎಲ್ಲಾ ಅಂಶಗಳನ್ನು ಗಮನಿಸಿ ಮಾನ್ಯರು ಜಿಲ್ಲೆಯಲ್ಲಿ ಶೀಘ್ರವಾಗಿ ಹಾಗೂ ಸಮರ್ಪಕವಾಗಿ ೧೯೮೩ರ ಶಿಕ್ಷಣ ಕಾಯ್ದೆ ಹಾಗೂ ಆರ್.ಟಿ.ಇ ಕಾಯ್ದೆ ಜಾರಿಗೊಳಿಸಲು ಈ ಮೂಲಕ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ) ಜಿಲ್ಲಾ ಸಮಿತಿಯು ಒತ್ತಾಯಿಸುತ್ತಿದೆ.

Leave a Reply

Top