ತಾಲೂಕಾ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟ

  ಕೊಪ್ಪಳ ಜಿಲ್ಲಾ ವ್ಯಾಪ್ತಿಯ ಕೊಪ್ಪಳ, ಗಂಗಾವತಿ, ಯಲಬುರ್ಗಾ ಮತ್ತು ಕುಷ್ಟಗಿ ತಾಲೂಕಾ ಪಂಚಾಯತಿಗಳ ಮೂರನೆ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.
 
ಕೊಪ್ಪಳ ತಾ.ಪಂ. ಅಧ್ಯಕ್ಷ ಸ್ಥಾನ- ಸಾಮಾನ್ಯ (ಮಹಿಳೆ).  ಉಪಾಧ್ಯಕ್ಷ ಸ್ಥಾನ- ಹಿಂದುಳಿದ ವರ್ಗ-ಅ.  
ಗಂಗಾವತಿ ತಾಲೂಕಾ ಪಂಚಾಯತಿ ಅಧ್ಯಕ್ಷ- ಹಿಂದುಳಿದ ವರ್ಗ-ಅ(ಮಹಿಳೆ),  ಉಪಾಧ್ಯಕ್ಷ- ಸಾಮಾನ್ಯ.  
ಯಲಬುರ್ಗಾ ತಾ.ಪಂ. ಅಧ್ಯಕ್ಷ- ಹಿಂದುಳಿದ ವರ್ಗ-ಅ(ಮಹಿಳೆ),  ಉಪಾಧ್ಯಕ್ಷ- ಸಾಮಾನ್ಯ.  
ಕುಷ್ಟಗಿ ತಾ.ಪಂ. ಅಧ್ಯಕ್ಷ- ಸಾಮಾನ್ಯ (ಮಹಿಳೆ), ಉಪಾಧ್ಯಕ್ಷ- ಹಿಂದುಳಿದ ವರ್ಗ-ಬ.  
  ತಾಲೂಕಾ ಪಂಚಾಯತಿಗಳ ಮೂರನೆ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿಯನ್ನು ನಿಗದಿಪಡಿಸಿ ಕಳೆದ ಏ. ೧೬ ರಂದು ಅಧಿಸೂಚನೆ ಹೊರಡಿಸಿ, ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿತ್ತು.  ಸಾರ್ವಜನಿಕರಿಂದ ಸ್ವೀಕೃತವಾದ ಮನವಿಗಳನ್ನು ಸರ್ಕಾರ ಪರಿಶೀಲಿಸಿದೆ.  ಅಲ್ಲದೆ ರಾಜ್ಯ ಹೈಕೋರ್ಟ್, ಮೀಸಲಾತಿಗೆ ಸಂಬಂಧಿಸಿದಂತೆ ರಿಟ್ ಅರ್ಜಿಗಳಿಗೆ ನೀಡಿರುವ ನಿರ್ದೇಶನಗಳನ್ವಯ, ತಾಲೂಕಾ ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರುಗಳ ಹುದ್ದೆಗಳ ಮೀಸಲಾತಿಯನ್ನು ೧೧ನೇ ಆವರ್ತಕದಿಂದ ಹೊಸದಾಗಿ ಪ್ರಾರಂಭಿಸಿದ್ದು, ಇದರ ಆಧಾರದ ಮೇಲೆ ೧೨ನೇ ಆವರ್ತಕದ ಮೀಸಲಾತಿಯನ್ನು ಇದೀಗ ಪ್ರಕಟಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.

Leave a Reply