ದಿನೇಶ್ ಅಮೀನ್ ಮಟ್ಟುಗೆ ‘ಅರಸು ಪ್ರಶಸ್ತಿ’

ಬೆಂಗಳೂರು, ಆ.18: ಡಿ.ದೇವರಾಜ ಅರಸುರ 97ನೆ ಜನ್ಮದಿನಾಚರಣೆ ಅಂಗವಾಗಿ ನೀಡಲಾಗುವ ಡಿ.ದೇವರಾಜ ಅರಸು ಪ್ರಶಸ್ತಿಗೆ ರಾಜ್ಯಮಟ್ಟದ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟುರನ್ನು ಆಯ್ಕೆ ಮಾಡಲಾಗಿದೆ.
ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರರ ಅಧ್ಯಕ್ಷತೆಯ ಆಯ್ಕೆ ಸಮಿತಿಯ ಶಿಫಾರಸಿನಂತೆ ಸರಕಾರವು ಪ್ರಶಸ್ತಿ ಪ್ರಕಟಿಸಿದ್ದು, ರಾಜ್ಯಮಟ್ಟದ ಪ್ರಶಸ್ತಿಯು ರೂ. 1 ಲಕ್ಷ ನಗದು ಬಹುಮಾನವನ್ನೊಳಗೊಂಡಿದೆ.
ವಿಭಾಗಮಟ್ಟದಲ್ಲಿ ನೀಡಲಾಗುವ 8 ಪ್ರಶಸ್ತಿಗಳಿಗೆ ಆಯ್ಕೆಯಾದ ಸಂಘ-ಸಂಸ್ಥೆಗಳು:
ಬೆಂಗಳೂರು ವಿಭಾಗ: ವಿಶ್ವಕರ್ಮ ರಥ ಶಿಲ್ಪ ಕಲಾ ಸಂಸ್ಥೆ, ಬೆಂಗಳೂರು, ಶ್ರೀ ಶಾರದಾ ವಿದ್ಯಾ ಸಂಸ್ಥೆ, ಬೆಳಗೆರೆ, ಚಿತ್ರದುರ್ಗ, ನರಸಮ್ಮ, ಕೃಷ್ಣಾಪುರ, ವೆಂಕಟಾಪುರ ಅಂಚೆ, ಪಾವಗಡ ತಾಲೂಕು, ತುಮಕೂರು ಜಿಲ್ಲೆ.
ಬೆಳಗಾವಿ ವಿಭಾಗ: ಭೀಮರಾವ್ ಬಿ. ಗಸ್ತಿ, ಕಾಶೀನಾಥ ಬಿ. ಹುಡೇದ, ಲೋಕಾಪುರ ಗ್ರಾಮ, ಮುಧೋಳ ತಾಲೂಕು, ಬಾಗಲಕೋಟೆ ಜಿಲ್ಲೆ.
ಗುಲ್ವರ್ಗ ವಿಭಾಗ: ವಜ್ರ ಕುಮಾರ್ ಜಿ. ಕಿವಡೆ, ಬಸವಣ್ಣಪ್ಪ ಎಂ.ಗೌನಳ್ಳಿ, ಶಾಸ್ತ್ರಿ ಚೌಕ, ಜೇವರ್ಗಿ. ಮೈಸೂರು ವಿಭಾಗ: ದೀನಬಂಧು ಸಂಸ್ಥೆ, ಚಾಮರಾಜನಗರ.
Please follow and like us:
error

Related posts

Leave a Comment