You are here
Home > Koppal News > ೨೬/೦೪/೨೦೧೫ ರಂದು ಬೆಳಿಗ್ಗೆ ೧೧:೩೦ಕ್ಕೆ ಅಹಿಂಸಾ- ಪ್ರಾಣಿ ದಯಾ ಸಂದೇಶ ಯಾತ್ರೆಗೆ ಚಾಲನೆ.

೨೬/೦೪/೨೦೧೫ ರಂದು ಬೆಳಿಗ್ಗೆ ೧೧:೩೦ಕ್ಕೆ ಅಹಿಂಸಾ- ಪ್ರಾಣಿ ದಯಾ ಸಂದೇಶ ಯಾತ್ರೆಗೆ ಚಾಲನೆ.

 ದಿ: ೨೪/೦೪/೨೦೧೫ ರಂದು ೩೦/೦೪/೨೦೧೫ ರವರೆಗೆ ನಡೆಯಲಿರುವ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರದ ಗ್ರಾಮದೇವತೆಯ ಜಾತ್ರೆಯಲ್ಲಿ ಪ್ರಾಣಿ ಬಲಿ ನೀಡದೇ ಸಾತ್ವಿಕ ಪೂಜೆ ಸಲ್ಲಿಸುವಂತೆ ಭಕ್ತರಲ್ಲಿ ಜಾಗೃತಿ ಮೂಡಿಸಲು ನಾಳೆ ದಿ: ೨೬/೦೪/೨೦೧೫ರಂದು ಬೆಳಿಗ್ಗೆ ೧೧:೩೦ ಕ್ಕೆ ಕೊಪ್ಪಳ ನಗರದ ಕಿನ್ನಾಳ ರಸ್ತೆಯಲ್ಲಿರುವ ಬಸವ ಮಂಟಪದ ಪ್ರಾಂಗಣದಿಂದ ಅಹಿಂಸಾ ಪ್ರಾಣಿ ದಯಾ ಸಂದೇಶ ಯಾತ್ರೆಯು ಉದ್ಘಾಟನೆಗೊಳ್ಳಲಿದ್ದು ಇದು ಕೊಪ್ಪಳ ನಗರದಾದ್ಯಂತ ಪಾದಯಾತ್ರೆಯ ಮೂಲಕ ಸಂಚರಿಸಿ ನಂತರ ಹನುಮಸಾಗರದತ್ತ ತೆರಳಲಿದೆ ಈ ಯಾತ್ರೆಯು ದಿ: ೩೦/೦೪/೨೦೧೫ ರವರೆಗೆ ಹನುಮಸಾಗರ ಹಾಗೂ ಕುಷ್ಟಗಿ ತಾಲೂಕಿನಾದ್ಯಂತ ಪ್ರಾಣಿ ಬಲಿ ತಡೆ ಕುರಿತು ಜಾಗೃತಿ ಮೂಡಿಸಲಿದೆ.
    ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ಅಧ್ಯಕ್ಷರು, ಕರ್ನಾಟಕ ಸರ್ಕಾರದ ರಾಜ್ಯ ಗೋಸೇವಾ ಆಯೋಗದ ಸದಸ್ಯರು ಆದ ಶ್ರೀ ದಯಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯಲಿರುವ ಈ ಯಾತ್ರೆಯಲ್ಲಿ ಮಂಡಳಿಯ ಮಹಿಳಾ ಸಂಚಾಲಕಿ ಸುನಂದಾ ದೇವಿ, ಕೊಪ್ಪಳ ಜಿಲ್ಲಾ ರಾಷ್ಟ್ರೀಯ ಬಸವದಳ, ಲಿಂಗಾಯತ ಧರ್ಮ ಮಹಾಸಭಾ ಹಾಗೂ ಜೈನ ಮತ್ತು ಇನ್ನಿತರ ಸಂಘಟನೆಗಳ ಮುಖಂಡರು ಕಾರ್ಯಕರ್ತರು ಈ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

Leave a Reply

Top