You are here
Home > Koppal News > ಮತದಾನದ ಪಾವಿತ್ರ್ಯತೆಗೆ ಧಕ್ಕೆ ಬಾರದಂತೆ ಹಕ್ಕು ಚಲಾಯಿಸಲು ಕರೆ

ಮತದಾನದ ಪಾವಿತ್ರ್ಯತೆಗೆ ಧಕ್ಕೆ ಬಾರದಂತೆ ಹಕ್ಕು ಚಲಾಯಿಸಲು ಕರೆ

 ಮತದಾನದ ಪಾವಿತ್ರ್ಯಕ್ಕೆ ಧಕ್ಕೆ ಬರದ ರೀತಿಯಲ್ಲಿ ಮತದಾರರು ತಮ್ಮ ಹಕ್ಕನ್ನು ತಪ್ಪದೆ ಚಲಾಯಿಸಬೇಕು ಎಂದು ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಚುನಾವಣಾ ಅಧಿಕಾರಿಯೂ ಆಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ದೊರೈಸ್ವಾಮಿ ಅವರು ಕರೆ ನೀಡಿದರು. 

     ಯಲಬುರ್ಗಾದ ಪಟ್ಟಣ ಪಂಚಾಯತಿ ಹಳೆಯ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ ಸಹಯೋಗದೊಂದಿಗೆ ಸ್ವೀಪ್ ಕಾರ್ಯಕ್ರಮದಡಿ ಆಯೋಜಿಸಿದ್ದ ಮತದಾರರ ಜಾಗೃತಿ ಅಭಿಯಾನ ನಿಮಿತ್ತ ಮ್ಯಾರಾಥಾನ್ ಓಟಕ್ಕೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದರು.

     ನಮ್ಮ ಅಭಿವೃದ್ಧಿಗೆ ಶ್ರಮಿಸುವವರನ್ನು ನಾವೇ ಆಯ್ಕೆಗೊಳಿಸಲು ನಮ್ಮ ಸಂವಿಧಾನ ನಮಗೆ ಮತದಾನ ಎಂಬ ಪವಿತ್ರ ಕರ್ತವ್ಯವನ್ನು ನೀಡಿದ್ದು, ಚುನಾವಣೆಯಲ್ಲಿ ಅರ್ಹ ವ್ಯಕ್ತಿಗೆ  ಮತದಾನ ಮಾಡಿ ಮತದಾನದ ಹಕ್ಕನ್ನು ಚಲಾಯಿಸಿ, ಆಯ್ಕೆಯಾದ ಬಳಿಕ ಕ್ಷೇತ್ರದ ಅಭಿವ್ರದ್ಧಿ ಕುರಿತು ಪ್ರಶ್ನಿಸಲು ಪ್ರತಿಯೊಬ್ಬರಿಗೂ ಮುಕ್ತ ಅವಕಾಶವಿದೆ, ಮತದಾನ ಮಾಡದೇ ಇದ್ದವರು, ಚುನಾಯಿತ ಪ್ರತಿನಿಧಿಗಳನ್ನು ಪ್ರಶ್ನಿಸುವ ಆತ್ಮ ಸ್ಥೈರ್ಯವನ್ನು ಕಳೆದುಕೊಳ್ಳುತ್ತಾರೆ.  ಈ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೆ, ಸೂಕ್ತ ಅಭ್ಯರ್ಥಿಯನ್ನು ಆರಿಸಲು ತಪ್ಪದೆ ಮತದಾನ ಮಾಡಬೇಕು ಎಂದು ಹೇಳಿದರು.

     ತಹಸೀಲ್ದಾರ್ ಎಂ.ಬಿ.ಬಿರಾದಾರ್ ಮಾತನಾಡಿ, ಕಳೆದ ಚುನಾವಣೆಯ ಮತದಾನದ ಪ್ರಮಾಣವನ್ನು ಗಮನಿಸಿದಾಗ ಪಟ್ಟಣ ಪ್ರದೇಶಗಳಲ್ಲೆ ಅತ್ಯಂತ ಕಡಿಮೆ ಪ್ರಮಾಣದ ಮತದಾನ ದಾಖಲಾಗಿರುವುದು ಕಳವಳಕಾರಿ ಸಂಗತಿಯಾಗಿದೆ.  ಗ್ರಾಮೀಣ ಪ್ರದೇಶದಲ್ಲಿ ವಿದ್ಯಾವಂತರಗಿಂತ ಅವಿದ್ಯಾವಂತರೆ ಚುನಾವಣೆಗಳಲ್ಲಿ  ಹೆಚ್ಚಿನ ಆಸಕ್ತಿ ವಹಿಸಿ ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ,  ಈ ಹಿನ್ನೆಲೆಯಲ್ಲಿ ವಿದ್ಯಾವಂತರು ಅರ್ಹ ವ್ಯಕ್ತಿಗೆ ಮತ ನೀಡಿ ತಮ್ಮ ಹಕ್ಕನ್ನು ಚಲಾಯಿಸಿರಿ ಎಂದರು.

      ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಎಲ್.ಪಿ.ಚಲುವಾದಿ ಮಾತನಾಡಿ, ಚುನಾವಣೆಯಲ್ಲಿ ಸ್ಫರ್ಧಿಸಿದ ನಾನಾ ಪಕ್ಷಗಳ ಅಭ್ಯರ್ಥಿಗಳ ನಾನಾ ಆಮಿಷಕ್ಕೆ ಮತದಾರರು ಬಲಿಯಾಗದೇ ಅರ್ಹ ಅಭ್ಯರ್ಥಿಗಳಿಗೆ ಮತ ಚಲಾಯಿಸಿ ಎಂದು ಕಿವಿ ಮಾತು ಹೇಳಿದರು.
ಮ್ಯಾರಾಥಾನ್ ಓಟದಲ್ಲಿ ಮೊದಲ ಸ್ಥಾನ ಪಡೆದ ಅಲ್ಲಾಸಾಬ್ ಗುರಿಕಾರ ಸೇರಿದಂತೆ ಸ್ಪರ್ಧೆಯಲ್ಲಿ ವಿಜೇತ ವಿಧ್ಯಾರ್ಥಿಗಳಿಗೆ ತಹಶೀಲ್ದಾರ್ ಎಂ.ಬಿ. ಬಿರಾದಾರ್ ಬಹುಮಾನ ವಿತರಿಸಿದರು.

ಜಿ.ಪಂ. ಮುಖ್ಯ ಂiಜನಾಧಿಕಾರಿ ಟಿ.ಪಿ.ದಂಡಿಗದಾಸರ್, ಲೋಕೊಪಯೋಗಿ ಇಲಾಖೆ ಎಇಇ ಮೂಗಣ್ಣವರ್, ಜಿ.ಪಂ. ಎಇಇ ಎಸ್.ಎಂ.ಕುದರಿ, ಬಿಇಒ ಆರ್ ವೆಂಕಟೇಶ, ಸ.ಪ್ರ.ಕಾ.ಪ್ರಾಚಾರ್ಯ ಶಿವರಾಜ ಗುರಿಕಾರ, ಪ.ಪಂ.ಮುಖ್ಯಾಧಿಕಾರಿ ಆರ್.ಬಿ.ಗೋಂದಕರ್ ಸೇರಿದಂತೆ ಇತರರು ಇದ್ದರು. ಸಿಆರ್‌ಪಿ ದೇವಪ್ಪ ವಾಲ್ಮಿಕಿ ನಿರ್ವಹಿಸಿದರು.

Leave a Reply

Top