fbpx

ಭಾಗ್ಯನಗರ : ಫೆ.೧೮ ರಂದು ಜಿಲ್ಲಾ ಮಟ್ಟದ ಯುವಜನ ಮೇಳ

 ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಗೌರಿ ಶಂಕರ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ದಿ ಸೇವಾ ಸಂಸ್ಥೆ ಹಾಗೂ ಬಾಲವಿನಾಯಕ ಗ್ರಾಮೀಣಾಭಿವೃದ್ದಿ ಯುವ ಸಂಘ ಭಾಗ್ಯನಗರ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಯುವಜನ ಮೇಳ ಕಾರ್ಯಕ್ರಮವನ್ನು ಭಾಗ್ಯನಗರದ ಬಯಲು ರಂಗ ಮಂದಿರದಲ್ಲಿ ಫೆ.೧೮ ರಂದು ಆಯೋಜಿಸಲಾಗಿದೆ ಎಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವೈ.ಸುದರ್ಶನರಾವ್ ಅವರು ತಿಳಿಸಿದ್ದಾರೆ.
ಆಯಾ ತಾಲೂಕು ಮಟ್ಟದ ಯುವಜನ ಮೇಳದಲ್ಲಿ ಭಾಗವಹಿಸಿ ವೈಯಕ್ತಿಕ ಪ್ರಥಮ ಮತ್ತು ದ್ವಿತೀಯ ಸ್ಥಾನ  ಹಾಗೂ ಗುಂಪು ಸ್ಪರ್ದೆಗಳಲ್ಲಿ ಪ್ರಥಮ ಸ್ಥಾನ ಪಡೆದವರು ಮಾತ್ರ ಈ ಯುವಜನ ಮೇಳದಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಭಾಗವಹಿಸುವ ಸ್ಪರ್ದಾಳುಗಳು ತಮ್ಮ ವೇಶ ಭೂಷಣ ವಾದ್ಯಮೇಳಗಳೊಂದಿಂಗೆ, ಫೆ.೧೮ ರಂದು ಬೆಳಿಗ್ಗೆ ೯.೦೦ ಗಂಟೆಗೆ ಸಂಘಟಕರಲ್ಲಿ ವರದಿ ಮಾಡಿಕೊಳ್ಳಲು ಸೂಚಿಸಿದೆ. ಸ್ಪರ್ದಾಳುಗಳಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿದ್ದು. ಆಯಾ ತಾಲೂಕಿನ ಕೇಂದ್ರ ಸ್ಥಾನದಿಂದ ಜಿಲ್ಲಾ ಕೇಂದ್ರದವರೆಗೆ ಸಾದಾ ಬಸ್ ಪ್ರಯಾಣ ದರವನ್ನು ಇಲಾಖೆ ನೀಡಲಾಗುವುದು.  ಸ್ಪರ್ದಾಳುಗಳು ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಕಡ್ಡಾಯವಾಗಿ ಹಾಜರಿರಲು ಸೂಚಿಸಿದೆ. ಹಾಗೂ ಸ್ಪರ್ದಾಳುಗಳು ೧೫ ರಿಂದ ೩೫ ವರ್ಷ ವಯೋಮಿತಿಯೊಳಗಿನವರು ಮಾತ್ರ ಭಾಗವಹಿಸಬಹುದಾಗಿದೆ. ಜಿಲ್ಲಾ ಮಟ್ಟದ ಯುವಜನ ಮೇಳದಲ್ಲಿ ಭಾವಗೀತೆ, ಜಾನಪದ ಗೀತೆ, ರಂಗಗೀತೆ, ಜಾನಪದ ನೃತ್ಯ, ಗೀಗೀಪದಗಳು, ಲಾವಣಿ, ಕೋಲಾಟ, ಭಜನೆ, ಜೋಳ-ರಾಗಿ ಬೀಸುವ ಪದ, ಸೋಬಾನ ಪದಗಳು, ಏಕಪಾತ್ರಾಭಿನಯ, ವೀರಗಾಸೆ ಪುರವಂತಿಕೆ, ಡೋಳ್ಳುಕುಣಿತ, ದೋಡ್ಡಾಟ, ಸಣ್ಣಾಟ, ಚರ್ಮವಾದ್ಯ ಮೇಳ, ಯಕ್ಷಗಾನ ಸೇರಿದಂತೆ ಒಟ್ಟು ೧೭  ಸ್ಪರ್ದೆಗಳನ್ನು ನಡೆಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಕೊಪ್ಪಳ- ೦೮೫೩೯-೨೦೧೪೦೦.  ಕೊಪ್ಪಳ- ೯೩೪೨೩೮೭೯೩೫. ಯಲಬುರ್ಗಾ-೮೯೭೦೨೮೮೮೫೭.  ಕುಷ್ಟಗಿ-೯೬೬೩೦೫೮೬೬೦.  ಗಂಗಾವತಿ-೯೦೦೮೩೬೩೬೭೦, ಸಂಘಟಕರರು-೯೮೮೦೨೭೯೬೯೯ ಹಾಗೂ ೯೭೪೦೮೨೨೨೭೦ ಕ್ಕೆ ಸಂಪರ್ಕಿಸಬಹುದಾಗಿದೆ  
Please follow and like us:
error

Leave a Reply

error: Content is protected !!