You are here
Home > Koppal News > ಶಿಸ್ತು ಮತ್ತು ನಿಷ್ಠೆಯಿಂದ ಕಾರ್ಯನಿರ್ವಹಿಸಿ-ಶಾಸಕ ಕೆ.ರಾಘವೇಂದ್ರ ಹಿಟ್ನಾಳ

ಶಿಸ್ತು ಮತ್ತು ನಿಷ್ಠೆಯಿಂದ ಕಾರ್ಯನಿರ್ವಹಿಸಿ-ಶಾಸಕ ಕೆ.ರಾಘವೇಂದ್ರ ಹಿಟ್ನಾಳ

 ಕೊಪ್ಪಳ:ಏ-೧೮ ಕೊಪ್ಪಳ ಕೃಷಿ ಉತ್ಪನ್ನ ಮಾರುಕಟ್ಟೆಯ ಸಮಿತಿಯ ಕೊನೆಯ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ನೂತನವಾಗಿ ಆಯ್ಕೆಯಾದ ಶಿವಲಿಂಗಪ್ಪ ತಿಪ್ಪನವರು ಹಿಟ್ನಾಳ ಇವರ ಅಧಿಕಾರ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೋಂಡು ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ರವರು ಅಧಿಕಾರದಲ್ಲಿ ಇರುವವರೆಗೂ ಸೇವಾ ಮನೂಭಾವನೆಯಿಂದ ಕಾರ್ಯಸಲ್ಲಿಸಿ ಶಿಸ್ತು ಮತ್ತು ನಿಷ್ಠಯಿಂದ ಕರ್ತವ್ಯ ನಿಭಾಯಿಸಬೇಕು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ರೈತರ ಜೀವನಾಡಿಯಾಗಿದ್ದು ಅವರಿಗೆ ಸರಿಯಾದ ನ್ಯಾಯ ಒದಗಿಸಬೇಕು. ರೈತರು ಮತ್ತು ವ್ಯಾಪಾರಸ್ಥರ ಮದ್ಯೆ ಸಮನ್ವಯಸಾದಿಸುವುದು ಕೃಷಿ ಉತ್ಪನ್ನ ಸಮಿತಿಯ ಅಧ್ಯಕ್ಷರ ಹಾಗೂ ಸರ್ವಸದಸ್ಯರ ಆದಮ್ಯ ಕರ್ತವ್ಯವಾಗಿದೆ ಎಂದು ಹೇಳಿದರು. ನಿಮ್ಮ ಅಧಿಕಾರದ ಅವದಿಯಲ್ಲಿ ಒಳ್ಳೆಕಾರ್ಯಗಳನ್ನು ಮಾಡಿದರೆ ಇದರ ಶ್ರೇಯಸ್ಸು ಪಕ್ಷಕ್ಕೂ ಮತ್ತು ಪಕ್ಷದ ಮುಖಂಡರಿಗೆ ಸಲ್ಲುತ್ತದೆ ಎಂದು ಹೇಳಿದರು.
    ಈ ಸಂದರ್ಭದಲ್ಲಿ ಎಸ್.ಬಿ.ನಾಗರಳ್ಳಿ, ಈಶಪ್ಪ ಮಾದಿನೂರು, ಕೆ.ರಮೇಶ ಹಿಟ್ನಾಳ, ಹನುಮರೆಡ್ಡಿ ಹಂಗನಕಟ್ಟಿ, ಗವಿಸಿದ್ದಪ್ಪ ಮುದುಗಲ್, ಬಾಳಪ್ಪ ಬಾರಕೇರ, ಅಮ್ಜದ್ ಪಟೇಲ್, ವೆಂಕನಗೌಡ್ರು ಹಿರೇಗೌಡ್ರು, ಮುತ್ತುರಾಜ ಕುಷ್ಟಗಿ, ರಾಮಣ್ಣ ಹದ್ದಿನ, ವಿಜಯಕುಮಾರ ಹಿಟ್ನಾಳ, ಕೇಶವರೆಡ್ಡಿ, ಶಿವಣ್ಣ ಹಂದ್ರಾಳ, ಯಮನೂರಪ್ಪ ನಾಯಕ್, ಜಗದೀಶ ಕರ್ಕಿಹಳ್ಳಿ, ಮಹೇಶ ಭಜಂತ್ರಿ, ಇನ್ನೂ ಅನೇಕ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

Leave a Reply

Top