fbpx

ಕೊಪ್ಪಳದಲ್ಲಿ ರಾಷ್ಟ್ರಧ್ವಜ ಮಾರಾಟ ವ್ಯವಸ್ಥೆ.

ಕೊಪ್ಪಳ, ಆ.೦೫  ಕರ್ನಾಟಕ ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿ, ಕೊಪ್ಪಳ ಜಿಲ್ಲಾ ಕಛೇರಿ ವತಿಯಿಂದ ಜಿಲ್ಲೆಯ ಸಾರ್ವಜನಿಕರ, ಸಂಘ ಸಂಸ್ಥೆಗಳ ಅನುಕೂಲಕ್ಕಾಗಿ ಆ.೦೪ ರಿಂದ ಆ.೧೪ ರವರೆಗೆ ರಾಷ್ಟ್ರಧ್ವಜ ಮಾರಾಟದ ವ್ಯವಸ್ಥೆಯನ್ನು ಮಾಡಲಾಗಿದೆ. ಮಂಡಳಿ ವತಿಯಿಂದ ಕುಷ್ಟಗಿಯ ಕರ್ನಾಟಕ ಸರ್ವೋದಯ ಸೇವಾ ಸಮಿತಿ ಮುಖಾಂತರ ಇದೇ ಮೊದಲ ಬಾರಿಗೆ ಕೊಪ್ಪಳ ಜಿಲ್ಲಾ ಖಾದಿ ಗ್ರಾಮೋದ್ಯೋಗ ಮಂಡಳಿ ಕಛೇರಿಯಲ್ಲಿ ಆಗಸ್ಟ್.೦೪ ರಿಂದ ೧೪ ರವರೆಗೆ ರಾಷ್ಟ್ರಧ್ವಜ ಮಾರಾಟದ ವ್ಯವಸ್ಥೆಯನ್ನು ಮಾಡಲಾಗಿದೆ. ರಾಷ್ಟ್ರಧ್ವಜ ಕೊಳ್ಳಬಯಸುವವರು ಕರ್ನಾಟಕ ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿ, ಜಿಲ್ಲಾ ಕಛೇರಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಆವರಣ, ಅಶೋಕ ಸರ್ಕಲ್ ಹತ್ತಿರ, ಕೊಪ್ಪಳ, ದೂರವಾಣಿ ಸಂಖ್ಯೆ: ೦೮೫೩೯-೨೩೧೪೭೩ ಇವರನ್ನು  ಕಛೇರಿ ಅವಧಿಯಲ್ಲಿ ಸಂಪರ್ಕಿಸಬಹುದಾಗಿದೆ.
Please follow and like us:
error

Leave a Reply

error: Content is protected !!