ಪಡಿತರ ಚೀಟಿಯಲ್ಲಿ ನಮೂದಾಗಿರುವ ಎಲ್ಲಾ ಸದಸ್ಯರಿಗೂ ಆಹಾರಧಾನ್ಯ ಹಂಚಿಕೆ.

ಕೊಪ್ಪಳ:
ಸೆ. ೩ (ಕ ವಾ) ಬಿಪಿಎಲ್ ಪಡಿತರ ಚೀಟಿಯಲ್ಲಿ ನಮೂದಾಗಿರುವ ಕುಟುಂಬದ
ಎಲ್ಲಾ ಸದಸ್ಯರಿಗೂ ಆಹಾರಧಾನ್ಯವನ್ನು ಹಂಚಿಕೆ ಮಾಡಲಾಗುತ್ತಿದೆ ಎಂದು ಆಹಾರ, ನಾಗರಿಕ
ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಆಯುಕ್ತ ಎಸ್.ಎಸ್. ಪಟ್ಟಣಶೆಟ್ಟಿ ಅವರು
ತಿಳಿಸಿದ್ದಾರೆ.
    ಕೆಲವು ನ್ಯಾಯಬೆಲೆ ಅಂಗಡಿ ವರ್ತಕರು ಬಿಪಿಎಲ್ ಪಡಿತರ
ಚೀಟಿಯಲ್ಲಿ ನಮೂದಾಗಿದ್ದರೂ ಸಹ ಮಕ್ಕಳಿಗೆ ಆಹಾರಧಾನ್ಯವನ್ನು ನೀಡುತ್ತಿಲ್ಲವೆಂದು ಪಡಿತರ
ಚೀಟಿದಾರರು ಇಲಾಖೆಗೆ ದೂರನ್ನು ಸಲ್ಲಿಸಿದ್ದಾರೆ.  ಆದರೆ ಇಲಾಖೆಯು ಸಾರ್ವಜನಿಕ ವಿತರಣಾ
ವ್ಯವಸ್ಥೆಯಡಿಯಲ್ಲಿ ಬಿಪಿಎಲ್. ಪಡಿತರ ಚೀಟಿಯಲ್ಲಿನ ಕುಟುಂಬ ಸದಸ್ಯರಿಗೆ ಒಂದು
ಯೂನಿಟ್‌ನಂತೆ ೫ ಕೆ.ಜಿ. ಆಹಾರ ಧಾನ್ಯವನ್ನು, ಅಂತ್ಯೋದಯ ಪಡಿತರ ಚೀಟಿದಾರರಿಗೆ ಪ್ರತಿ
ಪಡಿತರ ಚೀಟಿಗೆ ೩೫ ಕೆ.ಜಿ. ಆಹಾರ ಧಾನ್ಯವನ್ನು ವಿತರಿಸಲಾಗುತ್ತಿದೆ.
      ಪಡಿತರ
ಚೀಟಿದಾರರು ತಮ್ಮ ಚೀಟಿಯಲ್ಲಿ ನಮೂದಾಗಿರುವ ಮಕ್ಕಳ ಹೆಸರಿಗೂ ಆಹಾರ ಧಾನ್ಯವನ್ನು
ಪಡೆದುಕೊಳ್ಳಬಹುದು   ಉಚಿತ ಆಹಾರಧಾನ್ಯ ವಿತರರಣೆಂii ‘ಅನ್ಯಭಾಗ್ಯ ಯೋಜನೆ’
ಜಾರಿಯಾದಾಗಿನಿಂದ ಬಿಪಿಎಲ್ ಮತ್ತು ಅಂತ್ಯೋದಯಗಳಿಗೆ ನೀಡಲಾಗುವ ಆಹಾರಧಾನ್ಯಕ್ಕೆ ಪಡಿತರ
ಚೀಟಿದಾರರು ಕೇವಲ ರೂ. ೪೦.೫೦ ಪಾವತಿಸಿ ಪಡಿತರ ಪಡೆಯಬಹುದು. ನ್ಯಾಯಬೆಲೆ ಅಂಗಡಿಯ
ವರ್ತಕರು ಹೆಚ್ಚಿನ ದರವನ್ನು ಕೇಳಿದರೆ ಇಲಾಖೆಯ ದೂರವಾಣಿ ಸಂಖ್ಯೆ ೧೯೬೭ ಕ್ಕೆ ಕರೆ ಮಾಡಿ
ದೂರು ಸಲ್ಲಿಸುವಂತೆ  ಅವರು ತಿಳಿಸಿದ್ದಾರೆ.
    ಅದೇ ರೀತಿ ಸರ್ಕಾರದಿಂದ ನೀಡಲಾದ
ಪಡಿತರ ಪದಾರ್ಥಗಳಾದ ಅಕ್ಕಿ, ಗೋಧಿ, ರಾಗಿ, ಸಕ್ಕರೆ, ಸೀಮೆಎಣ್ಣೆ ಅಯೋಡಿನ್‌ಯುಕ್ತ
ಉಪ್ಪು ಮತ್ತು ತಾಳೆ ಎಣ್ಣೆಯನ್ನು ಹೊರತುಪಡಿಸಿ ಬೇರೆ ಮುಕ್ತ ಮಾರುಕಟ್ಟೆಯ
ಪದಾರ್ಥಗಳನ್ನು ಖರೀದಿಸುವುದು ಕಡ್ಡಾಯವಿರುವುದಿಲ್ಲ.  ಆದರೂ ಖರೀದಿಸುವಂತೆ
ಒತ್ತಾಯಿಸಿದಲ್ಲಿ  ದೂರವಾಣಿ ಸಂಖ್ಯೆ ೧೯೬೭ ಗೆ  ದೂರನ್ನು ಸಲ್ಲಿಸುವಂತೆ ಆಹಾರ, ನಾಗರಿಕ
ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಆಯುಕ್ತರು, ಸಾರ್ವಜನಿಕರಲ್ಲಿ ಮನವಿ
ಮಾಡಿದ್ದಾರೆ.
Please follow and like us:
error