ದೆಹಲಿಯಲ್ಲಿ ಅಂತಾರಾಷ್ಟ್ರೀಯಕುರುಬರ ಸಮ್ಮೇಳನ : ಸಭೆ

ನವದೆಹಲಿ ಆ. ೫- ಕುರುಬ ಸಮುದಾಯವನ್ನುರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಘಟಿಸುವ ಸಲುವಾಗಿ ನವದೆಹಲಿಯಲ್ಲಿಂದು  ಅಂತಾರಾಷ್ಟ್ರೀಯ ಕುರುಬರ ಸಂಘದ ಮಹತ್ವದ ಸಭೆ ನಡೆಯಿತು.
ಕುರುಬ ಜನಾಂಗವನ್ನುರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕವಾಗಿಇನ್ನಷ್ಟು ಬಲಿಷ್ಠಗೊಳಿಸುವ ಹಿನ್ನೆಯಲ್ಲಿ ಸಭೆಯಲ್ಲಿ ಮಹತ್ವದಚರ್ಚೆ ನಡೆಸಲಾಗಿದೆ.ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಂಸದ

ಹೆಚ್.ವಿಶ್ವನಾಥ್ ಈ ವರ್ಷದಅಕ್ಟೋಬರ್ ೨೬ ರಂದು ದೆಹಲಿಯಲ್ಲಿ ಅಂತಾರಾಷ್ಟ್ರೀಯಕುರುಬರ ಸಮ್ಮೇಳನ (ಶಫರ್ಡ್‌ಇಂಟರ್ ನ್ಯಾಷನಲ್‌ಕನ್ವೆನ್‌ಷನ್) ಆಯೋಜಿಸಲು ಉದ್ದೇಶಿಸಲಾಗಿದೆ ಎಂದರು.

ರಾಷ್ಟ್ರ ಮತ್ತುಅಂತಾರಾಷ್ಟ್ರೀಯ ಮಟ್ಟದಲ್ಲಿರುವ ಕುರುಬ ಸಮುದಾಯದ ಮುಖಂಡರನ್ನು ಒಂದೆಡೆ ಕಲೆ ಹಾಕಿ ಜಾಗತಿಕ ಮಟ್ಟದಲ್ಲಿ ಸಂಘಟಿಸಲು ಈ ಪ್ರಯತ್ನ ನಡೆಸಲಾಗಿದೆಎಂದು ಹೇಳಿದರು.ಮೇಲ್ಮನೆ ಸದಸ್ಯ ಹೆಚ್.ಎಂ.ರೇವಣ್ಣ ಮಾತನಾಡಿ, ಕುರುಬ ಜನಾಂಗದರಾಜ್ಯ ಹಾಗೂ ರಾಷ್ಟ್ರಮಟ್ಟದ ಮುಖಂಡರು ಹಿಂದೆಂದೂ ಕಾಣದ ರೀತಿಯಲ್ಲಿ ರಾಜಧಾನಿ ದೆಹಲಿಯಲ್ಲಿ ಸಮಾವೇಶಗೊಳ್ಳುತ್ತಿರುವುದು ಮಹತ್ವದ ಬೆಳವಣಿಗೆಯಾಗಿದೆ.ಈ ಐತಿಹಾಸಿಕ ಸಮಾವೇಶದಲ್ಲಿ ಸಮುದಾಯ ಎದುರಿಸುತ್ತಿರುವ ಹತ್ತು ಹಲವು ಸಮಸ್ಯೆಗಳ ಕುರಿತಂತೆ ಬೆಳಕು ಚೆಲ್ಲಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದರು.
Please follow and like us:
error