ಬಸಾಪಟ್ಟಣ ರಾಜೀವಗಾಂಧಿ ಸೇವಾ ಕೇಂದ್ರ ಲೋಕಾರ್ಪಣೆ

ಗಂಗಾವತಿ ಡಿ. ತಾಲೂಕಿನ ಬಸಾಪಟ್ಟಣ ಗ್ರಾಮದಲ್ಲಿ ರಾಜೀವಗಾಂಧಿ ಸೇವಾ ಕೇಂದ್ರ (ನೂತನ ಬಸಾಪಟ್ಟಣ ಗ್ರಾಮ ಪಂಚಾಯತ ಕಾರ್ಯಲಯ)ದ ಉದ್ಘಾಟನ ಸಮಾರಂಭವನ್ನು ಇಂದು ಗ್ರಾಮ ಪಂಚಾಯಿತಿಯಿಂದ ಹಮ್ಮಿಕೊಳ್ಳಲಾಗಿತ್ತು. ರಾಜೀವಗಾಂಧಿ ಸೇವಾ ಕೇಂದ್ರವನ್ನು ಶಾಸಕ ಇಕ್ಬಾಲ್ ಅನ್ಸಾರಿ ಮತ್ತು ರಾಜ್ಯ ಕೈ ಮಗ್ಗ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾದ ಮಲ್ಲಿಕಾರ್ಜುನ ನಾಗಪ್ಪರವರು ಉದ್ಘಾಟಿಸಿದರು.

ರಾಜೀವಗಾಂಧಿ ಸೇವಾ ಕೇಂದ್ರವನ್ನು ಎಮ್.ಜಿ.ಎನ್.ಆರ್.ಇ.ಜಿ. ಯೋಜನೆಯಿಂದ ರೂ.೧೬.೫೦ ಲಕ್ಷ ಮತ್ತು ೧೩ನೇ ಹಣಕಾಸು ಯೋಜನೆಯ ಗ್ರಾ.ಪಂ. ಅನುದಾನದಲ್ಲಿ ರೂ.೪ ಲಕ್ಷಗಳನ್ನು ಒಟ್ಟಾರೆಯಾಗಿ ರೂ.೧೯.೫೦ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ, ಗ್ರಾಮ ಪಂಚಾಯತಿ ಕಾರ್ಯಾಲಯ(ರಾಜೀವಗಾಂಧಿ ಸೇವಾ ಕೇಂದ್ರ)ವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ಕೈ ಮಗ್ಗ ಅಭಿವೃದ್ಧಿ ನಿಗಮದ ಅದ್ಯಕ್ಷರಾದ ಎಮ್. ಮಲ್ಲಿಕಾರ್ಜುನ ನಾಗಪ್ಪರವರು ಮುಂದುವರೆದು ಪ್ರಸ್ತುತ ಉದ್ಘಾಟನೆಗೊಂಡ ಕಾರ್ಯಾಲಯದ ಮೇಲ್ಭಾಗದಲ್ಲಿ ಸಭಾ ಭವನವನ್ನು ನಿರ್ಮಿಸಲು ಶ್ರಮಿಸುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು.
ವೇದಿಕೆಯಲ್ಲಿ ಶಾಸಕರಾದ ಇಕ್ಬಾಲ್ ಅನ್ಸಾರಿ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಅಮರೇಶ ಕುಳಗಿ, ಗ್ರಾ.ಪಂ. ಅದ್ಯಕ್ಷೆ ಶ್ರೀಮತಿ ಸೂರ್ಯಕುಮಾರಿ, ಜಿ.ಪಂ. ಸದಸ್ಯೆ ಶ್ರೀಮತಿ ವಿಜಯಲಕ್ಷ್ಮಿ ರಾಮಕೃಷ್ಣ, ತಾ.ಪಂ. ಅಧ್ಯಕ್ಷೆ ಶ್ರೀಮತಿ ಈರಮ್ಮ ಮುದಿಯಪ್ಪ, ತಾ.ಪಂ. ಸದಸ್ಯ ಶರಣೇಗೌಡ ಮಾಲೀಪಾಟೀಲ್, ನಗರಸಭೆ ಅಧ್ಯಕ್ಷ ಶಾಮೀದ್ ಮನಿಯಾರ್, ಗ್ರಾಮದ ಹಿರಿಯರಾದ ಸಿದ್ದಯ್ಯ ಗುರುವಿನ್, ಗ್ರಾ.ಪಂ. ಬಸಾಪಟ್ಟಣದ ಸರ್ವ ಸದಸ್ಯರು, ಸಿಬ್ಬಂದಿ ಹಾಗೂ ಗ್ರಾಮದ ಸಾರ್ವಜನಿಕರು ಸಮಾರಂಭದಲ್ಲಿ ಭಾಗವಹಿಸಿದ್ದರು. ದಯಾನಂದಬಾಬು ನಿರೂಪಿಸಿದರು. 

Leave a Reply