ಸಚಿವ ತಂಗಡಗಿ ಎರಡು ವರ್ಷದ ಸಾಧನಾ ಸಮಾವೇಶ

ಕೊಪ್ಪಳ, ಮೇ. ೮. ಕೊಪ್ಪಳದ ಯುವಚೇತನ ಶಿವರಾಜ ತಂಗಡಗಿ ಅಭಿಮಾನಿಗಳ ವೇದಿಕೆ, ತಂಗಡಗಿ ಟ್ರಸ್ಟ್ ಮತ್ತು ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ (ರಿ) ಕೊಪ್ಪಳದ ವತಿಯಿಂದ ಜಂಟಿಯಾಗಿ ಸಚಿವ ಶಿವರಾಜ ತಂಗಡಗಿಯವರ ಎರಡು ವರ್ಷದ ಸಾಧನಾ ಸಮಾವೇಶ ನಡೆಸಲಾಗುವದು ಎಂದು ಸಂಘಟಕ ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.
ಈ ಕುರಿತು ಪ್ರಟಕಣೆ ನೀಡಿರುವ ಅವರು, ೨೦೧೫ರ ಮೇ ೧೮ ಕ್ಕೆ ಪ್ರಸಕ್ತ ಅವಧಿಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ಎರಡು ವರ್ಷ ಪೂರ್ತಿಯಾಗುತ್ತಿದ್ದು ಅದರ ನಿಮಿತ್ಯ ಕೊಪ್ಪಳ ನಗರ ಅಥವಾ ಬೆಂಗಳೂರಿನಲ್ಲಿ ಎರಡು ವರ್ಷದ ಸಾಧನಾ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ ಎಂದವರು ತಿಳಿಸಿದ್ದಾರೆ. ಸಮಾವೇಶದಲ್ಲಿ ಜಿಲ್ಲೆಯ ಸಾವಿರಾರು ಜನರನ್ನು ಸೇರಿಸುವ ಯೋಚನೆ ಇದ್ದು, ಎರಡು ವರ್ಷದಲ್ಲಿ ಸಣ್ಣ ನೀರಾವರಿ ಇಲಾಖೆ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು, ಹೊಸ ಯೋಜನೆಗಳು ಹಾಗೂ ಸಾಧನೆ ಕುರಿತ ಸಂಕ್ಷಿಪ್ತ ಮಾಹಿತಿ ಜೊತೆಗೆ ಕನಕಗಿರಿ ಕ್ಷೇತ್ರಕ್ಕೆ ಮಾಡಿರುವ ಕೆಲಸ ಹಾಗೂ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಮಾಡಿರುವ ಕೆಲಸಗಳ ಕುರಿತು ಸಮಾವೇಶದಲ್ಲಿ ಜನರಿಗೆ ಮನವರಿಕೆ ಮಾಡಿಕೊಡಲಾಗುವದು. ಈ ಸಂದರ್ಭದಲ್ಲಿ ಛಾಯಾಚಿತ್ರ ಪ್ರದರ್ಶನ, ಒಂದು ಆಡಿಯೋ ಸಿ.ಡಿ. ಹಾಗೂ ಸಾಧನಾ ಸಂಚಿಕೆಯನ್ನು ಬಿಡುಗಡೆಗೊಳಿಸಲಾಗುವದು. ಸಮಾವೇಶದಲ್ಲಿ ರಸಮಂಜರಿ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗುವದು. ದಿನಾಂಕ ಮತ್ತು ಸ್ಥಳವನ್ನು ಆದಷ್ಟು ಬೇಗ ಅಂತಿಮಗೊಳಿಸಲಾಗುವದು ಎಂದು ಗೊಂಡಬಾಳ ತಿಳಿಸಿದ್ದಾರೆ.
Please follow and like us:
error