ರಾಜ್ಯ ಕಾರ್‍ಯಕಾರಿ ಸಮಿತಿಗೆ ನಿರ್ದೇಶಕರಾಗಿ ಗುರಯ್ಯ ಎಸ್.ಎಚ್.

ಕೊಪ್ಪಳ : ನಗರದ ಶ್ರೀ ಗುರು ಶಿಕ್ಷಣ ಮತ್ತು ಸೇವಾ ಸಂಸ್ಥೆಯ ಅಧ್ಯಕ್ಷರಾದ  ಗುರಯ್ಯ ಎಸ್.ಎಚ್. ರಾಜ್ಯ ಸರಕಾರೇತರ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ( ಫೇವರಡ್   ಕೆ)ದ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಕಳೆದ ೨ ದಶಕಗಳಿಂದ ಶ್ರೀ ಗುರು ಶಿಕ್ಷಣ ಮತ್ತು  ಸ್ವಯಂ ಸೇವಾ ಸಂಸ್ಥೆಯ ಮೂಲಕ ನಿರಂತರ ಸೇವೆಯಲ್ಲಿ ತೊಡಗಿ

ಸಿಕೊಂಡಿದ್ದಾರೆ.

ಗುರಯ್ಯ ಎಸ್.ಎಚ್. ಇವರಿಗೆ ಕೊಪ್ಪಳ ಜಿಲ್ಲಾ ಎನ್‌ಜಿಓ ನೆಟ್‌ವರ್ಕವತಿಯಿಂದ ರಮೇಶ ಓಲೇಕಾರ,ರಾಜಾಬಕ್ಷಿ ಎಚ್.ವಿ.ಸೇವಾ ಸಂಸ್ಥೆ, ವಿಶ್ವನಾಥ ಹಿರೇಮಠ ಶುಭೋದಯ ಸಂಸ್ಥೆ, ನಬೀಸಾಬ ಸಮೃದ್ದಿ,ಮೌಲಾಹುಸೇನ ಬುಲ್ಡಿಯಾರ್ ಅಲ್ಪಸಂಖ್ಯಾತರ ಸಂಸ್ಥೆ, ರಾಜಶೇಖರ ಮುಳಗುಂದ ಅಧ್ಯಕ್ಷರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸೇರಿದಂತೆ ಇನ್ನಿತರರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.?  

Leave a Reply