ರೂಢಿ ಪಾಠ ಮುಕ್ತಾಯ ಸಮಾರಂಭ.

ಕೊಪ್ಪಳ  – 13  ಶ್ರೀ ಶಿವಶಾಂತವೀರ ಪಬ್ಲೀಕ್ ಸ್ಕೂಲ್ ಕೊಪ್ಪಳ ಬುಧವಾರ ದಂದು ನಡೆಯಿತು ಈ ಸಮಾರಂಭದ ಅಧ್ಯಕ್ಷತೆಯನ್ನು ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ರುದ್ರಸ್ವಾಮಿ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಶ್ರೀ ಗವಿಸಿದ್ಧೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀ ಪ್ರಕಾಶ.ಕೆ.ಬಡಿಗೇರ. ಹಾಗೂ ಅತಿಥಿಗಳಾಗಿ ರೂಢಿ ಪಾಠ ಸಂಯೋಜಕರಾದ ಶ್ರೀಮತಿ ಸವಿತಾ ವೀರನಗೌಡ್ರ ಮತ್ತು ಶ್ರೀಮತಿ ಶೀಲಾ ಪಾಟೀಲ್ ವಹಿಸಿದ್ದರು. ಪ್ರಾರ್ಥನೆಯನ್ನು ಪ್ರಶಿಕ್ಷಣಾರ್ಥಿಯಾದ ಗೌರಮ್ಮ  ಮಾಡಿದರು, ಸ್ವಾಗತ ಸಂಗೀತಾ. ಜಡೀಮಠ ನೆರವೇರಿಸಿದರು. ಪ್ರಶಿಕ್ಷಣಾರ್ಥಿಗಳಾದ ಸಲೀಮಾಬೇಗಂ ಮೆಹೆಬೂಬ್ ಅನಿಸಿಕೆಗಳನ್ನು ವ್ಯಕ್ತಪಡಿಸಿದರು, ಗುಲ್‌ಶನ್ ವಂದನಾರ್ಪಣೆ ಮಾಡಿದರು. ಪ್ರಶಿಕ್ಷಣಾರ್ಥಿಯಾದ ಮೇಘಾ.ಸಿ.ದಿವಟರ್  ಬಹುಮಾನ ವಿತರಣಾ ಮತ್ತು ಕಾರ್ಯಕ್ರಮವನ್ನು  ನೆರವೇರಿಸಿ ಕೊಟ್ಟರು. ಈ ಸಮಾರಂಭದಲ್ಲಿ ಶಾಲೆಯ ಸಹ ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಪಾಲ್ಗೋಂಡಿದ್ದರು.                   

Please follow and like us:
error