ತುಮಕೂರಿನಲ್ಲಿ ಪತ್ರಕರ್ತರ ರಾಷ್ಠ್ರೀಯ ಸಮ್ಮೇಳನ

ಕೊಪ್ಪಳ ಸೆ,೨೬ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ತುಮಕೂರಿನಲ್ಲಿ ಅಕ್ಟೋಬರ್೧೨,೧೩ ಮತ್ತು ೧೪ರಂದು ರಾಷ್ಟ್ರೀಯ ಸಮ್ಮೇಳನ ನಡೆಯಲಿದೆ.
ಈ ಸಮ್ಮೇಳನದಲ್ಲಿ ಪಾಲ್ಗೋಳ್ಳಲು ಇಚ್ಛೀಸುವವರು ಕಾರ್ಯರತ ಪತ್ರಕರ್ತರ ಸಂಘದಿಂದ ಸದಸ್ಯತ್ವ ಹೊಂದಿರುವುದು ಕಡ್ಡಾಯ, ಮೂರು ದಿನಗಳ ವಸತಿ ಉಪಾಹಾರ,ಊಟದ ವ್ಯವಸ್ಥೆಗಾಗಿ ೧೦೦ರೂ,ಪ್ರವೇಶ ಶುಲ್ಕವನ್ನು ಕಡ್ಡಾಯವಾಗಿ ಅಕ್ಟೋಬರ್ ೧ರಒಳಗಾಗಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ,ಸಾದಿಕಅಲಿ ಯವರಲ್ಲಿ ಶುಲ್ಕ ಪಾವತಿಸಿ ಹೆಸರು ನೊಂದಾಯಿಸತಕ್ಕದ್ದು.
ಜಿಲ್ಲೆಯ ಆಯಾ ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ ನೊಂದಾಯಿತ ಸದಸ್ಯರು ಆಯಾ ತಾಲೂಕು ಅಧ್ಯಕ್ಷರಲ್ಲಿ ಸೆ,೩೦ ರೊಳಗಾಗಿ ಶುಲ್ಕ ಪಾವತಿಸಿ ಹೆಸರು ನೊಂದಾಯಿಸತಕ್ಕದ್ದು. ಗದಿಪಡಿಸಿದ ದಿನಾಂಕದ ನಂತರ ಬರುವ ಯಾವುದೇ ಪ್ರವೇಶಗಳನ್ನು ಪರೀಗಣಿಸಲಾಗುವುದಿಲ್ಲ  ಮತ್ತು ಈಸಮ್ಮೇಳನದಲ್ಲಿ ನೇರವಾಗಿ ಪಾಲ್ಗೋಳ್ಳಲು ಅವಕಾಶ ಇರುವುದಿಲ್ಲ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯ ಕಾರಣಿ ಸದಸ್ಯ ಹರೀಶ್ ಎಚ್.ಎಸ್ ರವರು ತಿಳಿಸಿದ್ದಾರೆ.
Please follow and like us:
error

Related posts

Leave a Comment