fbpx

ವೈಯಕ್ತಿಕ ಸಾಲದ ಉತ್ಸವ

ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ಕೊಪ್ಪಳ ಜಿಲ್ಲೆಯ ವೈಯಕ್ತಿಕ ಸಾಲದ ಉತ್ಸವವನ್ನು ಕೊಪ್ಪಳದ ಪ್ರಮೋದ ಕಲ್ಯಾಣ ಮಂದಿರದಲ್ಲಿ ಬ್ಯಾಂಕಿನ ಜನರಲ್ ಮ್ಯಾನೇಜರ್   ಗೋಪಾಲನಾಯಕ ರವರು ಉದ್ಘಾಟಿಸಿ ಈ ಬ್ಯಾಂಕಿನ ಯೋಜನೆಯ ರೂಪರೇಶಗಳನ್ನು ಸಭೆಗೆ ತಿಳಿಸುತ್ತಾ, ಬ್ಯಾಂಕಿನ ಸಾಲದ ಯೋಜನೆಗಳಾದ ಮನೆಕಟ್ಟುವ ಹಾಗೂ ಖರೀದಿಸುವ , ಅಡಮಾನಸಾಲ, ಉದ್ಯಮ, ವ್ಯಾಪಾರ, ಕಾರು, ಲಾರಿ, ಸೋಲಾರ್, ವಿವಿಧ ಕೈಗಾರಿಕೆಗ

ಳ ಯೋಜನೆಯನ್ನು ವಿವರಿಸಿ ಇದರ ಪ್ರಯೋಜನವನ್ನು ಪಡೆಯಲು ಕರೆ ನೀಡಿದರು.

ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ಜಾರಿಗೆ ತಂದ ಪ್ರಗತಿ ಉತ್ಸವ ಸಾಲದ ಯೋಜನೆಯು ದಿನಾಂಕ: ೧೫/೦೧/೨೦೧೪ ಪ್ರಾರಂಬಗೊಂಡು ದಿನಾಂಕ ೩೧-೦೩-೨೦೧೪ ರ ವರೆಗೆ ವಿಸ್ತರಿಸಲಾಗಿರುತ್ತದೆ. ಈ ಅವಧಿಯಲ್ಲಿ ಗ್ರಾಹಕರ ಅನೂಕೂಲಕ್ಕಾಗಿ ಬಡ್ಡಿದರಗಳಲ್ಲಿ ಕಡಿತಗೊಳಿಸಿದ್ದು ಅಲ್ಲದೆ ಪರಿಷ್ಕರಣ ಶೂಲ್ಕವನ್ನು ಕೂಡಾ ವಿನಾಯಿತಿ ಗೊಳಿಸಲಾಗಿದೆ. ಎಂದು ತಿಳಿಸುತ್ತಾ ಬ್ಯಾಂಕು ೧೫೦೦೦ ಕೋಟಿ ವ್ಯವಹಾರದ ಮೈಲುಗಲ್ಲನ್ನು ದಾಟಿದೆ ಎಂದು ತಿಳಿಸಿದರು. ಇದಕ್ಕೆ ಸಹಕರಿಸಿದ ಎಲ್ಲಾ ಗ್ರಾಹಕರಿಗೂ ಬ್ಯಾಂಕಿನ ಪ್ರಧಾನ ಪ್ರಬಂದಕರು ಹಾಗೂ ಸಭೆಯ ಅಧ್ಯಕ್ಷರು ಆದ   ರವಿ ಸುದಾಜಕರ ಅವರು ಕೃತಜ್ಞತೆಯನ್ನು ಸಲ್ಲಿಸಿದರು. 
ಬ್ಯಾಂಕಿನ ಕೊಪ್ಪಳ ಪ್ರಾದೇಶಿಕ ಪ್ರಬಂಧಕರಾದ ಬಿ.ಎಸ್. ಶಿವಕುಮಾರ ಸ್ವಾಮಿಯವರು. ಬ್ಯಾಂಕು ೧೯೭೬ ರಿಂದ ನಡೆದು ಬಂದ ದಾರಿಯನ್ನು  ವಿವರಿಸುತ್ತಾ ಕೊಪ್ಪಳ ಕ್ಷೇತ್ರದ ಪ್ರಗತಿಯನ್ನು ತಿಳಿಸಿ ದಿನಾಂಕ ೧೫-೦೧-೨೦೧೪ ಪ್ರಾರಂಭವಾದ ಸಾಲ ಉತ್ಸವ ಇಲ್ಲಿಯವರೆಗಿನ ಅವಧಿಯಲ್ಲಿ ಒಟ್ಟಾರೆ ೬ ಕೋಟಿ ಸಾಲ ಮಂಜೂರು ಮಾಡಿದ್ದು ಈ ಒಂದು ಯೋಜನೆಯಲ್ಲಿ ಮಾರ್ಚ ಅಂತ್ಯದ ವೇಳೆ ೩೦ ಕೋಟಿ ವಿತರಿಸುವ ಯೋಜನೆಯನ್ನು ಹೊಂದಿದೆ ಎಂದು ತಿಳಿಸುತ್ತಾ ಬೇರೆ ಕ್ಷೇತ್ರದಲ್ಲಿ ಕೂಡಾ ನೂರಾರು ಕೋಟಿ ಸಾಲ ವಿತರಣೆ ಹಾಗೂ ಠೇವಣಿ ಸಂಗ್ರಹದ ಕ್ರಾಂತಿಯನ್ನು ಮಾಡುವ ಮಹಾದಾಸೆಯನ್ನು ವ್ಯಕ್ತ ಪಡಿಸಿದರು. 
ಸಭೆಯಲ್ಲಿ ಕೊಪ್ಪಳ ಜಿಲ್ಲೆಯ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ನ ವಿವಿಧ ಶಾಖೆಗಳ ಗ್ರಾಹಕರಿಗೆ ಸಾಲ ಪತ್ರವನ್ನು ವಿತರಿಸಲಾಯಿತು.  ಎಂ ಪ್ರಕಾಶ ಮುಖ್ಯ ವ್ಯವಸ್ಥಾಪಕರು ಮುಖ್ಯ ಶಾಖೆ ಉಪಸ್ಥಿತರಿದ್ದರು. ಕೆ. ವೀರಣ್ಣ ಹಿರಿಯ ಪ್ರಬಂದಕರು ಸ್ವಾಗತಿಸಿದರು. ಚಂದ್ರಶೇಖರ ಸೊಪ್ಪಿಮಠ ವಂದಿಸಿದರು. 
ಕಾರ್ಯಕ್ರಮವನ್ನು ಭಾಗ್ಯನಗರ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ನ ವ್ಯವಸ್ಥಾಪಕರಾದ ಬೊಮ್ಮಣ್ಣ ಅಕ್ಕಸಾಲಿ ನಿರೂಪಿಸಿದರು. 
Please follow and like us:
error

Leave a Reply

error: Content is protected !!