You are here
Home > Koppal News > ಹೀರೆಮಠ ಕಾಲೋನಿ ಬಸವಕಲ್ಯಾಣದಲ್ಲಿ ೯೨ನೇ ಅರಿವಿನ ಜ್ಯೋತಿ ಕಾರ್ಯಕ್ರಮ

ಹೀರೆಮಠ ಕಾಲೋನಿ ಬಸವಕಲ್ಯಾಣದಲ್ಲಿ ೯೨ನೇ ಅರಿವಿನ ಜ್ಯೋತಿ ಕಾರ್ಯಕ್ರಮ

ಬಸವಕಲ್ಯಾಣ:- ದಿನಾಂಕ ೧೩-೦೬-೨೦೧೪ ಶುಕ್ರವಾರ ಸಂಜೆ ಶರಣರಾದ  ರುಕ್ಮಿಣಿ   ಚೆನ್ನಮಲ್ಲಪ್ಪಾ ಉಗಾಜಿ ಹೀರೆಮಠ ಕಾಲೋನಿ ಇವರ ನಿವಾಸದಲ್ಲಿ ಗುರುಬಸವಣ್ಣ ನವರ ೯೨ನೇ ಅರಿವಿನ ಜ್ಯೋತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು,   ಚೆನ್ನಮಲ್ಲಪ್ಪಾ ಉಗಾಜಿ ಪ್ರಾಸ್ತಾ ವಿಕ ನುಡಿ ಮಾತನಾಡಿ ಮನುಷ್ಯನಲ್ಲಿ ಶಾಂತಿ ಹಾಗೂ ಪ್ರೀತಿಸಿವ ಹೃದಯ, ಬೇದ ಬುದ್ದಿಯಲ್ಲದ ಮನಸ್ಸು, ಒಳ್ಳೆಯ ಕಾರ್ಯಗಳಿಗೆ ಪ್ರೊತ್ಸಾಹಿಸುವ ಇಚ್ಛೆ ಅಳವಡಿಸಿಕೊಳ್ಳಬೇಕು, ಈಸೂತ್ರಗಳನ್ನು ಅಳವಡಿಸಿಕೊಂಡುವರು ವಿಶ್ವ ಮಾನವನಾಗುತ್ತಾನೆ ಎಂದರು.
  ಸೂರ್ಯಕಾಂತ ಪಾಟೀಲ ಅಧ್ಯಕ್ಷೀಯ ನುಡಿ ಮಂಡಿಸಿ, ವಿಶ್ವದಲ್ಲಿ ಕೊಲೆ, ಸುಲಿಗೆ  ಸ್ವಾರ್ಥ  ಹೆಚ್ಚಾಗಿ ಯಾರಿಗೆ ಯಾರು ಗೌರವಿಸದಂತಾಗಿದೆ. ತಮ್ಮ ತಮ್ಮ ಸ್ವಾರ್ಥ ಸಾಧನೆಯಲ್ಲಿ ಮುಳುಗಿದ್ದಾರೆ, ಬಸವಣ್ಣನವರು ತತ್ವಗಳಿಂದ ವಿಶ್ವದ ಜನೆಯನ್ನು ಜಾಗೃತಿಗೊಳಿಸಬೇಕು ಎಂದು ನುಡಿದರು.
 ಮೈಧ್ಯ ಬಸವರಾಜ ಪಂಡಿತ ಮಾತನಾಡಿ ಅಲವು ದೇವೋಪಸನೆಯಿಂದ ಸಮಯ ವ್ಯರ್ಥ ಹಣವ್ಯಯವಾಗಿ, ಏಕಾಗ್ರತೆ ನಷ್ಟವಾಗಿ ಮರೆಗುಳಿಂದ ಮನುಷ್ಯ ಅಜ್ಞಾನಿಯಾಗುತ್ತಾನೆ, ಗುರುಕೊಟ್ಟ ಲಿಂಗನಿಷ್ಟೆಯಿಂದ ಸಾಧನೆಗೈದರೆ ಸಕಲಸಿದ್ದಿ ಪುರುಷನಾಗುವುದರಲ್ಲಿ ಸಂಶಯವಿಲ್ಲ ಎಂದು ಇಷ್ಟಲಿಂಗಪೂಜೆಯ ಪ್ರಾಧ್ಯಕ್ಷತೆ ತೊರಿಸಿದರು.
 ಹಣಮಂತರಾವ ವಿಸಾಜಿ, ಶಿ  ಶಿವಕುಮಾರ ಬಿರಾದಾರ, ಶ್ರೀಮತಿ ಸುರೇಖಾ ಸಜ್ಜನಶೆಟ್ಟಿ,   ಸಂಗಮೇಶ ತೋಗುರಖೇಡೆ,   ಮಲ್ಲಮ್ಮ ಕಾಳಿಗಲ್ಲಿ,   ಬಸವರಾಜ ಕರಹರಿ,   ನೀಲಮ್ಮ ಕಳಿಮಠ,   ಚಂದ್ರಕಲಾ ಗೌರ, ಶ್ರೀದೇವಿ ಕಾಟನಾಳೆ,   ಸುಮಿತ್ರಾ ದಾವಣಗಾವೆ,   ಲಕ್ಷ್ಮಿಬಾಯಿ ಪಾಟಿಲ,   ಪ್ರಭಾವತಿ ಪಿ.ಜಿ,   ಮಹಾದೇವಿ ಬಾಪುರೆ ಇನ್ನು ಅನೇಕ ಶರಣ ಶರಣಿಯರು ಪಾಲ್ಗೋಂಡಿದರು.
ಪ್ರಾರ್ಥನೆ ಮೃತುಂಜಯ, ನಿರೂಪಣೆ ಪಾರ್ವತಿ ಪಂಡಿತ ನಡೆಸಿಕೊಟ್ಟರು.

Leave a Reply

Top