ಫೆ.೧೪ ರಂದು ಕೊಪ್ಪಳದಲ್ಲಿ ಜಿಲ್ಲಾಮಟ್ಟದ ಕವಿಗೋಷ್ಠಿ

 : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜಿಲ್ಲಾಮಟ್ಟದ ಕವಿಗೋಷ್ಠಿ ಕಾರ್ಯಕ್ರಮ ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಫೆ.೧೪ ರ ಬೆಳಿಗ್ಗೆ ೧೦ ಗಂಟೆಗೆ ಏರ್ಪಡಿಸಲಾಗಿದೆ. 
       ಕೊಪ್ಪಳದ ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಕವಿಗೋಷ್ಠಿ ಉದ್ಘಾಟಿಸಲಿದ್ದಾರೆ. ಕುಕನೂರಿನ ಹಿರಿಯ ಲೇಖಕ ರಂ.ರಾ. ನಿಡಗುಂದಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಕೊಪ್ಪಳ ಜಿಲ್ಲಾ ವಾರ್ತಾಧಿಕಾರಿ ಬಿ.ವಿ. ತುಕಾರಾಂರಾವ್, ಕೊಪ್ಪಳದ ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಎಸ್.ಬಿ.ಶಾಂತಪ್ಪನವರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. 
       ಕೊಪ್ಪಳದ ಮಹಾಂತೇಶ ಮಲ್ಲನಗೌಡರ್, ಅನುಸೂಯಾ ಜಹಗೀರದಾರ್, ಮಹೇಶ ಬಳ್ಳಾರಿ, ಸಿರಾಜ್ ಬಿಸರಳ್ಳಿ, ಅಕ್ಬರ್ ಸಿ.ಕಾಲಿಮಿರ್ಚಿ, ಯಲಬುರ್ಗಾದ ರವಿತೇಜ ಅಬ್ಬಗೇರಿ, ಮುನಿಯಪ್ಪ ಹುಬ್ಬಳ್ಳಿ, ಮುಧೋಳದ ಅನ್ನಪೂರ್ಣಮ್ಮ ಮನ್ನಾಪೂರ, ಗಂಗಾವತಿಯ ಪರಶುರಾಮಪ್ರಿಯ, ಮಲಕೇಶ ಕೋಟೆ, ರಮೇಶ ಗಬ್ಬೂರ, ಶರಣಪ್ಪ ಮೆಟ್ರಿ, ಕುಷ್ಟಗಿಯ ಶರಣಪ್ಪ ನಿಡಶೇಸಿ, ಸುಶೀಲಾ ತಾಳಿಕೋಟೆ, ದೇವರಾಜ್ ಬಡಿಗೇರ ಹಾಗೂ ಇತರರು ಕವಿಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೊಟ್ರಪ್ಪ ತಿಳಿಸಿದ್ದಾರೆ. 
Please follow and like us:
error