ಕಾಯಕನಗರ ಅನುಷ್ಠಾನಕ್ಕಾಗಿ ಹೋರಾಟ ಸಮಿತಿ ಅಸ್ತಿತ್ವಕ್ಕೆ

ಗಂಗಾವತಿ ತಾಲೂಕ ವಿರುಪಾಪುರ ಗ್ರಾಮ ಸರ್ವೆ ನಂ. ೫೩ ರಲ್ಲಿ ಕೆ.ಎಸ್.ಎಸ್.ಐ.ಡಿ.ಸಿ.ಗೆ ಮಂಜೂರಾದ ೩೦ ಎಕರೆಯಲ್ಲಿ ಸರಕಾರಿ ಯೋಜನೆಯಾದ ಕಾಯಕನಗರ ಅನುಷ್ಠಾನಕ್ಕಾಗಿ ಹೋರಾಟ ಸಮಿತಿಯನ್ನು ರೂಪಿಸಲಾಗಿದೆ ಎಂದು ಸಮಿತಿಯ ಗೌರವಾಧ್ಯಕ್ಷ ಭಾರದ್ವಾಜ್  ತಿಳಿಸಿದ್ದಾರೆ. 
ಕಾಯಕನಗರ ಅನುಷ್ಠಾನಕ್ಕಾಗಿ ರೂಪುಗೊಂಡ ಹೋರಾಟ ಸಮಿತಿ ಕೊಪ್ಪಳ ಜಿಲ್ಲೆಯ ಪ್ರಗತಿಪರ ಸಂಘಟನೆಗಳೊಂದಿಗೆ ಕೂಡಿಕೊಂಡು ದಿನಾಂಕ ೦೩-೦೨-೨೦೧೪ ರಂದು ಜಿಲ್ಲಾಡಳಿತದ ಕಾರ್ಯಾಲಯದ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದೆ. ಅಂದು ಜಿಲ್ಲಾಡಳಿತ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಧರಣಿಯನ್ನು ಮುಂದುವರೆಸುವ ತೀರ್ಮಾನ ಕೈಗೊಳ್ಳಲಾಗುವುದೆಂದು ಹಾಗೂ ಈ ಧರಣಿಯಲ್ಲಿ ಆಟೋ ಟೆಕ್ನಿಷಿಯನ್ಸ್, ಕಾರ್ಪೇಂಟರ‍್ಸ್, ಟೈಲರ‍್ಸ್ ಹಾಗೂ ಇನ್ನಿತರ ಅರೇಕುಶಲ ಕಾರ್ಮಿಕರು ಪಾಲ್ಗೊಳ್ಳಬೇಕೆಂದು  ತಿಳಿಸಿದ್ದಾರೆ.
ಪದಾಧಿಕಾರಿಗಳ ವಿವರ
೧. ಭಾರದ್ವಾಜ್, ರಾಜ್ಯಾಧ್ಯಕ್ಷರು, ಎ.ಐ.ಸಿ.ಸಿ.ಟಿ.ಯು., ಗೌರವಾಧ್ಯಕ್ಷರು
೨. ಸಿ.ಹೆಚ್.ನಾರಿನಾಳ, ಸಂಪಾದಕರು, ಸುದ್ದಿ ಚಿಂತನ, ಗೌರವ ಸಲಹೆಗಾರರು
೩. ಗಿರೀಶ ಕುಲಕರ್ಣಿ,ಸಂಪಾದಕರು,ಸಮರ್ಥವಾಣಿ ಗೌರವ ಸಲಹೆಗಾರರು
೪. ಮಂಜುನಾಥ, ಹಿರಿಯ ಟ್ರಾಕ್ಟರ್ ಮೆಕಾನಿಕ್ ಅಧ್ಯಕ್ಷರು
೫. ಪೀರಸಾಬ್, ಹಿರಿಯ ಕಾರ್ಪೇಂಟರ್ ಕಾರ್ಯದರ್ಶಿ
೬. ಪ್ರತಾಪ್‌ಸಿಂಹ, ಹಿರಿಯ ಎಲೆಕ್ಟ್ರೀಷಿಯನ್ ಖಜಾಂಚಿ
ಮೇಲಿನ ಸಮಿತಿ ಇಂದಿನಿಂದ ಕಾರ್ಯರೂಪಕ್ಕೆ ಬಂದು ಕಾಯಕನಗರ ಅನುಷ್ಠಾನಗೊಳ್ಳುವವರೆಗೂ ಕಾರ್ಯನಿರ್ವಹಿಸುತ್ತದೆ ಎಂದು ಭಾರದ್ವಾಜ್  ತಿಳಿಸಿದ್ದಾರೆ.

Leave a Reply