ಕರ್ಣಾಟಕ ಏಕಿಕರಣಕ್ಕಾಗಿ ದುಡಿದ ಹಿರಿಯ ಚೇತನ – ಕಯ್ಯಾರ ಕಿಇಣ್ಣರೈ.

ಕೊಪ್ಪಳ – ಕರ್ನಾಟಕ ಏಕಿಕರಣ ಮತ್ತು ಸ್ವಾತಂತ್ರ್ಯ ಹೋರಾಟಕ್ಕಾಗಿ ದುಡಿದ ಶತಾಯುಷಿ ಕಯ್ಯಾರ ಕಿಇಣ್ಣರೈ ಯವರ ನಿಧನ ಕನ್ನಡ ನಾಡಿಗೆ ದೊಡ್ಡ ಹಾನಿಯನ್ನುಂಟು ಮಾಡಿದೆ ಎಂದು ಸಾಹಿತಿ ಮಹಾಂತೇಶ ಮಲ್ಲನಗೌಡರ ಅಭಿಪ್ರಾಯಪಟ್ಟರು ಅವರು ನಗರದ ಪ್ರವಾಸಿ ಮಂದಿರದಲ್ಲಿ ತಿರುಳಗನ್ನಡ ಕ್ರೀಯಾಸಮಿತಿ ಏರ್ಪಡಿಸಿದ ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿದರು. ಅವರ ಸಾಹಿತ್ಯ ನಮಗೆಲ್ಲ ಸ್ಪೂರ್ತಿಯಾಗಿದೆ. ಅವರ ಆಶಯದಂತೆ ಅಖಂಡ ಕರ್ನಾಟಕ ಒಡೆಯುವದು ಬೇಡ ಎಂದರು.
    ಸಾಹಿತಿ ವೀರಣ್ಣ ಹುರಕಡ್ಲಿ ಅವರೊಂದು ವ್ಯಕ್ತಿಯಲ್ಲ ಶಕ್ತಿಯಾಗಿದ್ದರು. ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆನ್ನುವ ಅವರ ಕನಸುನನಸಾಗಿಯೇ ಉಳಿದಿದೆ. ಹೋರಾಟಗಾರ ಬಸವರಾಜ ಶಿಲವಂತರ ಅವರಚಿಂತನೆಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವರಿಗೆ ಶ್ರದ್ದಾಂಜಲಿ ಸಲ್ಲಿಸಬೇಕು. ಅವರ ಆಶಯದಂತೆ ನಾವು ಕಾಸರಗೋಡನ್ನು ಕೈಬಿಟ್ಟರೆ ನಾಳೆ ನಾವು ಬೆಳಗಾವಿ ಕಳೆದುಕೋಳ್ಳಬೇಕಾದೀತೆಂಬ ಎಚ್ಚರಿಕೆ ವಹಿಸಬೇಕು.
    ಹಿರಿಯ ಹೋರಾಟಗಾರ ಭಾರದ್ವಜ ಕ್ಯಾರ ಕಿಇಣ್ಣರೈ ನುಡಿದಂತೆ ನಡೆದರು ಸರಳವಾಗಿ ಬದುಕಿದರು ಅವರ ಹೋರಾಟ ಮನೋಭಾವ ನಮಗೆಲ್ಲಮಾದರಿ ವೀರಕನ್ನಡಿಗಸಮಘದ ಶಿವಾನಂದ ಹೊದ್ಲೂರ ಈ ಸಂದರ್ಭದಲ್ಲಿ ಮಾತ್ರ ಅವರನ್ನು ನೆನೆದು ಕೈ ಬಿಡುವುದು ಬೇಡ ಅವರ ಸಮಗ್ರ ಸಾಹಿತ್ಯ ಪ್ರಕಟಿಸಿ ಎಲ್ಲ ವಿದ್ಯಾರ್ಥಿಗಳಿಗೂ ಓದಲು ಅನುಕೂಲಿಸಬೇಕು. ಕರ್ನಾಟಕ ಒಡೆಯುವ ಒಡಕುದ್ವನಿ ಕೇಳುತ್ತಿರುವ ಸಂದರ್ಭದಲ್ಲಿ ಕಯ್ಯಾರ ಏಕಿಕರಣದ ಹೋರಾಟ ನೆನೆಯಬೇಕೆಂದರು. ಗಾಳೆಪ್ಪ ಮುಂಗೊಳಿ ಅವರ ಹೋರಾಟಭಾವವನ್ನು ನಾವೆಲ್ಲ ಮೈಗೂಡಿಸಿಕೊಳ್ಳಬೇಕೆಂದು ನುಡಿದರು.
    ಸಿಂಗನ್ನಡ ವೇದಿಕೆಯ ಜಿ.ಎಸ್. ಗೋನಾಳ ಕಯ್ಯಾರರು ಬರೀ ಸಾಹಿತ್ಯ ರಚನೆಯಲ್ಲಿ ತೊಡಗಿಕೊಳ್ಳಲಿಲ್ಲ. ಹೋರಾಟದ ಮುಂಚೂಣಿಯಲ್ಲಿದ್ದರು. ಸಮಾಜಕ್ಕೆ ಮಾರ್ಗದರ್ಶಕರಾಗಿದ್ದರು. ಅವರು ಪ್ರಶಸ್ತಿ ಪುರಸ್ಕಾರಗಳ ಬೆನ್ನಹತ್ತಲಿಲ್ಲ. ಅವೇ ಅವರನ್ನು ಹುಡುಕಿಕೊಂಡು ಬಂದವು. ಅಧ್ಯಕ್ಷತೆವಹಿಸಿ ಮಾತನಾಡಿದ ತಿರುಳ್ಗನ್ನಡ ಕ್ರಿಯಾ ಸಮಿತಿಯ ಗೌರವಾಧ್ಯಕ್ಷ ವಿಠ್ಠಪ್ಪ ಗೋರಂಟ್ಲಿ ಶತಮಾನದ ಸಾರ್ಥಕ ಬದುಕಿನ ಮೂಲಕ ಸಮಾಜಕ್ಕೆ ದೊಡ್ಡ ಕಾಣಿಕೆಯನ್ನು ನೀಡಿದ ಕಯ್ಯಾರರಂಥ ಹಿರಿಯ ಚೇತನವನ್ನು ಸ್ಮರಿಸದಿದ್ದರೆ ನಮಗೆ ನಾವೇ ಅನ್ಯಾಯ ಮಾಡಿಕೊಪಂಡಂತೆ ಎಂದರು. ಸಭೆಯಲ್ಲಿ ಗಂಗಾವತಿಯ ಬಸಣ್ಣ, ಏಸಪ್ಪ ಮತ್ತು , ಶಿವಪ್ಪ ಹಡಪದ ಯಮನೂರಪ್ಪ ನರಗುಂದ, ಲಚ್ಚಪ್ಪ ಹಳೆಪೇಟೆ ಕಿನ್ನಾಳ ಮುಂತಾದವರು ಉಪಸ್ಥಿತರಿದ್ದರು. ಈ.ಎಸ್. ಗೋನಾಳ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.     
Please follow and like us:
error