ಸಾಹಿತ್ಯ ಸಮ್ಮೇಳನ : ನ. ೭ ರಂದು ಪೂರ್ವಭಾವಿ ಸಭೆ

ಕೊಪ್ಪಳ ನ.   : ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ  ನಡೆಯಲಿರುವ ೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆ ಕುರಿತಂತೆ ಪೂರ್ವಭಾವಿ ಸಭೆ ಗಂಗಾವತಿ ತಹಶೀಲ್ದಾರ್ ಕಛೇರಿಯಲ್ಲಿ ನವೆಂಬರ್ ೭ ರಂದು ಮಧ್ಯಾಹ್ನ ೧-೩೦ ಕ್ಕೆ ನಡೆಯಲಿದೆ.
೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬರುವ ಡಿಸೆಂಬರ್ ೯, ೧೦ ಹಾಗೂ ೧೧ ರಂದು ಮೂರು ದಿನಗಳ ಕಾಲ ನಡೆಸಲು ದಿನಾಂಕ ನಿಗದಿಪಡಿಸಲಾಗಿದ್ದು, ಸಿದ್ಧತೆಗಳ ಪರಾಮರ್ಶೆ ಕುರಿತಂತೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನ. ೭ ರಂದು ಮಧ್ಯಾಹ್ನ ೧-೩೦ ಗಂಟೆಗೆ ಗಂಗಾವತಿ ತಹಸಿಲ್ದಾರರ ಕಚೇರಿಯಲ್ಲಿ ಏರ್ಪಡಿಸಲಾಗಿದೆ. ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವ ಲಕ್ಷ್ಮಣ ಎಸ್. ಸವದಿ ಅವರು ವಹಿಸುವರು.  ಸಭೆಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸುವರು ಎಂದು  ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ತಿಳಿಸಿದ್ದಾರೆ.

Leave a Reply