ಕಾತರಕಿ- ಗೂಡ್ಲಾನೂರು ಗ್ರಾ.ಪಂ ಅಧ್ಯಕ್ಷ ಉಪಾಧ್ಯಕ್ಷರ ಅವಿರೋಧ ಅಯ್ಕೆ

ಕೊಪ್ಪಳ :- ದಿ. ೧೧/೧೨/೨೦೧೨ ರಂದು ತಾಲೂಕಿನ ಕಾತರಕಿ ಗೂಡ್ಲಾನೂರು ಗ್ರಾ.ಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಯ್ಕೆ ಮಾಡಲು ಗ್ರಾಮದ ಹಿರಿಯರು, ಹಾಗೂ ಗ್ರಾ.ಪಂ ಸರ್ವ ಸದಸ್ಯರು ಹೆಚ್.ಎಲ್.ಹಿರೇಗೌಡ್ರ ಮನೆಯಲ್ಲಿ ಸಭೆ ಸೇರಿ ಎಲ್ಲರ ಒಪ್ಪಿಗೆ ಮೇರಿಗೆ ಯಲ್ಲನಗೌಡ ತಂದೆ ಮಲ್ಲನಗೌಡ ಮಾಲಿಪಾಟೀಲ ಇವರನ್ನು ಅಧ್ಯಕ್ಷರನ್ನಾಗಿ ಮತ್ತು ಶೋಭಾ ಗಂಡ. ಬಸನಗೌಡ ನಾಗನಗೌಡ್ರ ಇವರನ್ನು ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಈ ಸಂದರ್ಭದಲ್ಲಿ ತಾಲೂಕ ಪಂಚಾಯತ ಮಾಜಿ ಅಧ್ಯಕ್ಷ ವೆಂಕನಗೌಡ ಹಿರೇಗೌಡ್ರ, ತಾಲೂಕ ಪಂಚಾಯತ ಸದಸ್ಯರಾದ ಮುದೆಗೌಡ ನಾಗಗೌಡ ಎ.ಪಿ.ಎಮ್.ಸಿ ಮಾಜಿ ಅಧ್ಯಕ್ಷರು ಕೃಷ್ಣರಡ್ಡಿ ಗಲಬಿ, ಸಿದ್ಲಿಂಗಪ್ಪ ಉಳ್ಳಾಗಡ್ಡಿ, ಗ್ರಾ.ಪಂ ಮಾಜಿ ಅಧ್ಯಕ್ಷ ದೇವಪ್ಪ ಭೈರಣ್ಣವರ ಹಿರಿಯರಾದ ಕೃಷ್ಣಪ್ಪ ಬೆಟಗೇರಿ, ಗ್ರಾ.ಪಂ ಮಾಜಿ ಉಪಾಧ್ಯಕ್ಷ ಅಂದಪ್ಪ ಬೆಳವಿನಾಳ, ಗ್ರಾ.ಪಂ ಮಾಜಿ ಸದಸ್ಯ ಬಸವರಾಜ ಅಂಗಡಿ, ತಾ.ಪಂ ಮಾಜಿ ಸದಸ್ಯರಾದಸೋಮಪ್ಪ ಬೈರಣ್ಣವರ ಖಾಶೀಮಸಾಬ ಚಿಕ್ಕಮಸೂತಿ, ಮಲ್ಲಣ್ಣ ಗೂಗ್ರಿ ಕೋಟ್ರಯ್ಯ ಹಿರೇಮಠ, ಚಿನ್ನಪ್ಪ ಅಂಗಡಿ ವೀರಭದ್ರಪ್ಪ ತೆವರಮನಿ, ವೀರಪ್ಪಣ್ಣ ಪಟ್ಟಣಶೆಟ್ಟಿ, ಪಾಲಾಕ್ಷಪ್ಪ ಹುರಿಜೋಳ, ರಾಮಣ್ಣ ತಿಪ್ಪಣ್ಣವರ್, ಉಮೇಶಗೌಡ ಮಾಲಿಪಾಟೀಲ, ಮೋದಿನಸಾಬ ಗಡ್ಡದ ಹಾಗೂ ಇತರರು ಉಪಸ್ಥಿತರಿದ್ದರು.

Leave a Reply