ಚುಟುಕು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ವಿಮಲಾ ಇನಾಮದಾರ

ಕೊಪ್ಪಳ ಜಿಲ್ಲಾ ೪ ನೇ ಚುಟುಕು ಸಾಹಿತ್ಯ  ಸಮ್ಮೇಳನಾಧ್ಯಕ್ಷರಾಗಿ  ವಿಮಲಾ ಇನಾಮದಾರ ಆಯ್ಕೆ 
ಕೊಪ್ಪಳ : ಆಗಷ್ಟನಲ್ಲಿ ನಡೆಯಲಿರುವ ಕೊಪ್ಪಳ ಜಿಲ್ಲಾ ೪ ನೇ ಚುಟುಕು ಸಾಹಿತ್ಯ  ಸಮ್ಮೇಳನಾಧ್ಯಕ್ಷರಾಗಿ   ಕೊಪ್ಪಳ ತಾಲೂಕಿನ ಕೇಸಲಾಪೂರದ ಸಾಹಿತಿ ವಿಮಲಾ ಇನಾಮದಾರರನ್ನು ಆಯ್ಕೆ ಮಾಡಲಾಗಿದೆ ಎಂದು  ಕೊಪ್ಪಳ  ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ತಿಳಿಸಿದ್ದಾರೆ. 
ವಿಮಲಾ ಇನಾಮದಾರ ರವರು  ೧೯೭೯ ರಲ್ಲಿ ಹೊಂಬಳಕು, ೧೯೮೪ ರಲ್ಲಿ ಮಾಂಗಲ್ಯ ಭಾಗ್ಯ ೧೯೯೩ ರಲ್ಲಿ ಮಿನುಗುತಾರೆ  ಎಂಬ ಸಾಮಾಜಿಕ ಕಾದಂಬರಿಗಳನ್ನು , ೨೦೦೧ ರಲ್ಲಿ ಚುರುಕು ಚುಟುಕು  ಹನಿಗವನ ಸಂಕಲನ, ೨೦೦೧ ರಲ್ಲಿ  ಮಲ್ಲಿಗೆ ಮಾಲೆ ಸ್ವರಚಿತ ಜಾನಪದ ಗೀತೆಗಳು, ೨೦೦೩ ರಲ್ಲಿ ಬಿದಿಗೆಯ ಚಂದ್ರ ಮಕ್ಕಳ ಹಾಡುಗಳು, ೨೦೦೩ ರಲ್ಲಿ ಹಾಡ ಬರೆದೆನವ್ವಾ ಕವನ ಸಂಕಲನ, ೨೦೦೬ ರಲ್ಲಿ  ಮಾಧುರ್ಯ ಕವನ ಸಂಕಲನ ೨೦೧೦ ರಲ್ಲಿ ಅರಳು ಮಲ್ಲಿಗೆ ಕವನ ಸಂಕಲನ ಹೊರತಂದಿದ್ದಾರೆ. 
ಪ್ರಜಾಮತ, ವನಿತಾ, ಗೃಹಶೋಭಾ, ವಿಜಯ ಕರ್ನಾಟಕ, ಕನ್ನಡ ಪ್ರಭ , ಕರ್ಮವೀರ, ತರಂಗ, ತಳಮಳ, ಬಿಸಿಲ ಬದುಕು, ಪ್ರಿಯಾಂಕ, ವಿಶ್ವವಾಣಿ, ತುಷಾರ, ಮಯೂರ ಮುಂತಾದ ಪತ್ರಿಕೆಯಲ್ಲಿ ಇವರ ಕವನ, ಲೇಖನಗಳು ಪ್ರಕಟಗೊಂಡಿವೆ. 
೨೦೧೦ ರಲ್ಲಿ ರುಕ್ಮಿಣಿಬಾಯಿ ಸ್ಮಾರಕ ಸಾಹಿತ್ಯ ಪ್ರಶಸ್ತಿ, ೨೦೧೧ ರಲ್ಲಿ ಚಾಲುಕ್ಯ ವಿಕ್ರಮಾದಿತ್ಯ ಪ್ರಶಸ್ತಿ ,
೨೦೧೦-೧೧ ನೇ ಸಾಲಿನ ಸಾಹಿತ್ಯ ಕ್ಷೇತ್ರದಲ್ಲಿ ಕಿತ್ತೂರುರಾಣಿ ಚನ್ನಮ್ಮ ಪ್ರಶಸ್ತಿ ಲಭಿಸಿದೆ.  
ಒಟ್ಟಾರೆಯಾಗಿ ಇವರು ಸಮಗ್ರ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಹನುಮಂತಪ್ಪ ಅಂಡಗಿ ಚಿಲವಾಡಗಿ ತಿಳಿಸಿದ್ದಾರೆ. 
Please follow and like us:
error